ಭಾರತದ ವೇಗಿ ವರುಣ್ ಆರೊನ್ ತಾವು ಪ್ರತಿನಿಧಿಸುವ ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ತವರು ರಾಜ್ಯ ಜಾರ್ಖಂಡ್‌ನ ಅಭಿಯಾನ ಅಂತ್ಯಗೊಂಡ ಬೆನ್ನಲ್ಲೇ ನಿವೃತ್ತಿ ಘೋಷಿಸಿದರು.
ವರುಣ್ ಆರೊನ್
2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 35 ವರ್ಷದ ಆಟಗಾರ, ಭಾರತದ ಪರ ತಲಾ 9 ಏಕದಿನ ಮತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
2011ರಲ್ಲಿ ಪದಾರ್ಪಣೆ
ಈ ಎರಡೂ ಸ್ವರೂಪಗಳಲ್ಲಿ ಆಡಿದ 18 ಪಂದ್ಯಗಳಲ್ಲಿ 29 ವಿಕೆಟ್‌ಗಳನ್ನು ಪಡೆದಿದ್ದಾರೆ.
29 ವಿಕೆಟ್
ಕಳೆದ ವರ್ಷ ವರುಣ್ ರೆಡ್-ಬಾಲ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.
ಅಪಾರ ಕೃತಜ್ಞತೆಯಿಂದ ನಾನು ಪ್ರತಿನಿಧಿಸುವ ಕ್ರಿಕೆಟ್‌ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುತ್ತೇನೆ ಎಂದು ಆರೊನ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್
ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಪರ ಆಡಿದ್ದಾರೆ.
ವರುಣ್ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಜೊತೆಗೆ ಆಡಿದ್ದರು.
ಒಟ್ಟು 52 ಐಪಿಎಲ್ ಪಂದ್ಯಗಳನ್ನು ಆಡಿರುವ ವರುಣ್ 44 ವಿಕೆಟ್ ಕಬಳಿಸಿದ್ದಾರೆ. ಕೊನೆಯದಾಗಿ 2022ರಲ್ಲಿ ಐಪಿಎಲ್ ಆಡಿದ್ದರು.