ಮುಂಬೈ ಇಂಡಿಯನ್ಸ್ ಅತಿ ಹೆಚ್ಚು ಐಪಿಎಲ್‌ ಟ್ರೋಫಿ ಗೆದ್ದ ದಾಖಲೆ ಹೊಂದಿದೆ. 

By HT Kannada Desk
Mar 29, 2023

Hindustan Times
Kannada

ಆದರೆ ಹೆಚ್ಚು ಬಾರಿ ಪ್ಲೇಆಫ್ ತಲುಪಿದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು 11 ಬಾರಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಅದರಲ್ಲಿ ನಾಲ್ಕು ಬಾರಿ ಗೆದ್ದಿದೆ. 

ಮುಂಬೈ ಇಂಡಿಯನ್ಸ್ 9 ಬಾರಿ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಐದು ಬಾರಿ ಕಪ್ ಗೆದ್ದಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಟು ಬಾರಿ ಪ್ಲೇಆಫ್‌ಗೆ ಪ್ರವೇಶಿಸಿದೆ. ಆದರೆ ಒಮ್ಮೆಯೂ ಕಪ್ ಗೆದ್ದಿಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್ ಆರು ಬಾರಿ ಪ್ಲೇಆಫ್ ತಲುಪಿದೆ. ಎರಡು ಬಾರಿ ಚಾಂಪಿಯನ್‌ ಆಗಿದೆ.

ಸನ್ ರೈಸರ್ಸ್ ಹೈದರಾಬಾದ್ ಕೂಡಾ ಐದು ಬಾರಿ ನಾಕೌಟ್‌ ಹಂತ ತಲುಪಿದೆ. ಒಂದ ಬಾರಿ ಫೈನಲ್‌ ಗೆದ್ದಿದೆ.

ಡೆಲ್ಲಿ ಕ್ಯಾಪಿಟಲ್ಸ್(ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್) ಕೂಡಾ ಆರು ಬಾರು ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿದೆ.

ರಾಜಸ್ಥಾನ್ ರಾಯಲ್ಸ್ ಐದು ಬಾರಿ ಪ್ಲೇ-ಆಫ್ ಪ್ರವೇಶಿಸಿ ಒಂದು ಬಾರಿ ಟ್ರೋಫಿ ಗೆದ್ದಿದೆ.

ಪಂಜಾಬ್ ಕಿಂಗ್ಸ್(ಹಿಂದೆ ಕಿಂಗ್ಸ್‌ ಇಲೆವೆನ್‌ ಪಂಜಾಬ್) ಎರಡು ಬಾರಿ ಮಾತ್ರ ಪ್ಲೇ ಆಫ್ ತಲುಪುವಲ್ಲಿ ಯಶಸ್ವಿಯಾಗಿದೆ.

ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಮುಖಾಮುಖಿ ದಾಖಲೆ