ವಾಟ್ಸಾಪ್‌ನಲ್ಲಿರುವ ಗೌಪ್ಯತೆ ಮತ್ತು ಸುರಕ್ಷತಾ ಫೀಚರ್‌ಗಳು: ಈ 5 ವಿಷಯ ನಿಮಗೆ ತಿಳಿದಿರಲಿ
Pexels
By Praveen Chandra B Dec 29, 2024
Hindustan Times Kannada
ವಾಟ್ಸಪ್ ಬಳಕೆ ಮಾಡುವವರು ಈ ಐದು ಫೀಚರ್‌ಗಳನ್ನು ಬಳಸುವ ಮೂಲಕ ಗೌಪ್ಯತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದು.
Pixabay
ಭಾರತದಲ್ಲಿ ಅತ್ಯಂತ ಜನಪ್ರಿಯ ವಾಟ್ಸಪ್ ಅಪ್ಲಿಕೇಷನ್ ಅನ್ನು ಹೆಚ್ಚು ಜನರು ಬಳಸುತ್ತಾರೆ. ಫೋನ್ ಮಾಡುವುದಕ್ಕಿಂತ, ವಾಟ್ಸಪ್‌ನಲ್ಲಿ ಸಂವಹನ ನಡೆಸುವುದೇ ಈಗ ಹೆಚ್ಚಾಗಿದೆ.
Pixabay
ಹೆಚ್ಚು ಜನರು ಮೆಸೇಜಿಂಗ್ ಮತ್ತು ಸೋಷಿಯಲ್ ಮೀಡಿಯ ಅಪ್ಲಿಕೇಷನ್ ಬಳಸುತ್ತಾರೆ. ಈಗ ಆನ್‌ಲೈನ್ ಸುರಕ್ಷತೆ ಕುರಿತು ಹೆಚ್ಚು ಗಮನ ನೀಡಬೇಕು.
Pixabay
ವಾಟ್ಸಪ್‌ನಲ್ಲಿ ಇತ್ತೀಚೆಗೆ ಪ್ರೈವೇಸಿ ಸೆಟ್ಟಿಂಗ್‌ಗಳು ಉತ್ತಮವಾಗಿವೆ. ಈ ಮುಂದಿನ ಟಾಪ್ 5 ವಾಟ್ಸಾಪ್ ಸುರಕ್ಷತಾ ಫೀಚರ್‌ಗಳ ಕುರಿತು ತಿಳಿದುಕೊಳ್ಳಿ.
Pixabay
ಡಿಸ್‌ಅಪಿಯರಿಂಗ್ ಮೆಸೇಜಸ್, ವ್ಯೂವ್ ಒನ್ಸ್, ಹಿಡನ್ ಆನ್‌ಲೈನ್ ಪ್ರೆಸೆನ್ಸ್: ಈ ಮೂರು ಫೀಚರ್‌ಗಳನ್ನು ಬಳಸುವುರಿಂದ ಬಳಕೆದಾರರು ಸೂಕ್ಷ್ಮ ಮಾಹಿತಿಗಳ ಸೇಫ್ಟಿ ಹೆಚ್ಚಿಸಿಕೊಳ್ಳಬಹುದು.
Pixabay
ಎರಡು ಹಂತದ ಪರಿಶೀಲನೆ: ಟು ಸ್ಟೆಪ್ ವೇರಿಫಿಕೇಷನ್ ಬಳಸುವುದು ಇಂದಿನ ಅಗತ್ಯ. ನೀವು ಅನುಮತಿ ನೀಡುವ ತನಕ ಯಾರೂ ಕೂಡ ನಿಮ್ಮ ವಾಟ್ಸಪ್‌ಗೆ ಲಾಗಿನ್ ಆಗಲು ಸಾಧ್ಯವಿಲ್ಲ.
pexels
ಮೆಟಾ ವೆರಿಫೈಡ್: ಇದು ಅತ್ಯಂತ ವಿಶ್ವಾಸಾರ್ಹ ಫೀಚರ್‌ಗಳಲ್ಲಿ ಒಂದಾಗಿದೆ. ಯಾವುದೇ ಸ್ಕ್ಯಾಮ್ ಕುರಿತು ಯೋಚನೆ ಮಾಡದೆ ಬಿಸ್ನೆಸ್ ಬ್ರಾಂಡ್‌ಗಳ ಜತೆ ಸಲೀಸಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.
pexels
ಬ್ಲಾಕ್ ಮತ್ತು ರಿಪೋರ್ಟ್ ಫೀಚರ್: ಅಪರಿಚಿತ, ಸ್ಕ್ಯಾಮ್ ನಂಬರ್‌ಗಳನ್ನು ಬ್ಲಾಕ್ ಮಾಡಲು ಮತ್ತು ರಿಪೋರ್ಟ್ ಮಾಡಲು ಅನುವು ಮಾಡಿಕೊಡುತ್ತದೆ.
Pixabay
ಎಂಡ್-ಟು-ಎಂಡ್ ಎನ್ಕ್ರಿಪ್ಷನ್: ಇದು ಬಳಕೆದಾರರ ಸಂಭಾಷಣೆಗಳನ್ನು ಖಾಸಗಿಯಾಗಿಡುವ ನಿರ್ಣಾಯಕ ವಾಟ್ಸಾಪ್ ಫೀಚರ್‌ಗಳಲ್ಲಿ ಒಂದಾಗಿದೆ.
Pixabay
ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್ ಕೊಟ್ಟ ನಭಾ ನಟೇಶ್