ಸೈಬರ್‌ಕ್ರೈಮ್‌ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು 6 ಸಿಂಪಲ್ ಟಿಪ್ಸ್

By Raghavendra M Y
Jan 08, 2024

Hindustan Times
Kannada

ಮಾಹಿತಿ ಕದಿಯಲು, ದುರ್ಬಳಕೆ ಮಾಡಲು ನೆಟ್‌ವರ್ಕ್, ಬ್ಯಾಂಕ್ ಖಾತೆ, ಸಾಧನೆಗಳನ್ನ ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡೆಸುತ್ತಾರೆ. ಇದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಅತ್ಯಗತ್ಯ

ಸೈಬರ್ ಅಪರಾಧದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕೆಲ ಸಲಹೆಗಳನ್ನು ಇಲ್ಲಿ ನೀಡಲಾಗಿದೆ

ನಿಮ್ಮ ಸಿಸ್ಟಮ್ ಅಪ್ಡೇಟ್ ಮಾಡಿ

ಅಪ್ಡೇಟ್ ಆಗದ ಸಿಸ್ಟಮ್‌ಗಳನ್ನು ಸುಲಭವಾಗಿ ಹ್ಯಾಕ್ ಮಾಡ್ತಾರೆ. ಮೊಬೈಲ್ ಸೇರಿದಂತೆ ನಿಮ್ಮ ಗ್ಯಾಡ್ಜೆಟ್ಸ್‌ನ ಆಪರೇಟಿಂಗ್ ಸಿಸ್ಟಮ್, ಇಂಟರ್ನೆಟ್ ಸಾಫ್ಟ್‌ವೇರ್ ಅಪ್ಡೇಟ್ ಆಗಿದೆಯೇ ಎಂಬುದನ್ನ ಖಚಿತಪಡಿಸಿಕೊಳ್ಳಿ

ಸ್ಟ್ರಾಂಗ್ ಪಾಸ್‌ವರ್ಡ್ ಮೂಲಕ ನಿಮ್ಮ ಇಂಟರ್ನೆಟ್ ಸಂಪರ್ಕವನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಿ

ನಿಮ್ಮ ಇಂಟರ್ನೆಟ್ ಸುರಕ್ಷಿತವಾಗಿರಿಸಲು ವರ್ಚುವಲ್ ಖಾಸಗಿ ನೆಟ್‌ವರ್ಕ್-ವಿಪಿಎನ್‌ ಪ್ರಬಲವಾಗಿರಲಿ. ನಿಮ್ಮ ಐಪಿ ವಿಳಾಸವನ್ನ ಮರೆಮಾಚಲು ವಿಪಿಎಲ್‌ ಸಹಾಯ ಮಾಡುತ್ತೆ

ಆಂಟಿವೈರಸ್ ಸಾಫ್ಟ್‌ವೇರ್ ಬಳಸಿ

ವೈರಸ್‌ಗಳು, ಮಾಲ್‌ವೇರ್‌ಗಳು ನಿಮ್ಮ ಗ್ಯಾಡ್ಜೆಟ್ಸ್‌ಗೆ ನುಸಳದಂತೆ ಭದ್ರತಾ ಗೋಡೆಯಾಗಿ ಕಾರ್ಯನಿರ್ವಹಿಸುವ ಆಂಟಿವೈರಸ್‌ ಸಾಫ್ಟ್‌ವೇರ್ ಬಳಸಿ. ಸೈಬರ್ ದಾಳಿ ಪತ್ತೆಹಚ್ಚಲು, ಅವುಗಳನ್ನ ತೆಗೆದುಹಾಕಲು ಸಹಕಾರಿಯಾಗಿವೆ

ಸ್ಪ್ಯಾಮ್ ಮೇಲ್‌ಗಳನ್ನು ಓಪನ್ ಮಾಡಬೇಡಿ

ಅನುಮಾನಾಸ್ಪದ ಲಿಂಕ್ ಕ್ಲಿನ್ ಮಾಡಿದಾಗ ಅಥವಾ ಸ್ಪ್ಯಾಮ್ ಮೇಲ್‌ಗಳನ್ನ ಓಪನ್ ಮಾಡಿದಾಗ ಸೈಬರ್ ದಾಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ

ಆಗಾಗ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ ಪರಿಶೀಲನೆ ಮಾಡಿ

ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಮೇಲೆ ನಿರಂತರ ನಿಗಾ ವಹಿಸಿ. ಒಟಿಪಿ, ವೈಯಕ್ತಿಕ ಪಿನ್ ನಂಬರ್ ಯಾರೊಂದಿಗೂ ಹಂಚಿಕೊಳ್ಳಬೇಡಿ. ಅನುಮಾನಾಸ್ಪದ ವಹಿವಾಟು ಕಂಡುಬಂದರೆ ತಕ್ಷಣವೇ ಬ್ಯಾಂಕ್ ಅಥವಾ ಸೈಬರ್ ಅಧಿಕಾರಿಗಳಿಗೆ ತಿಳಿಸಿ

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ