Scam Alert! ರಿಚಾರ್ಜ್ ಉಚಿತ ಅಂತ ಬರೋ ಮೆಸೇಜ್ ಅನ್ನು ಎಂದಿಗೂ ನಂಬಬೇಡಿ

By Reshma
Jul 30, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆಯ ಜಾಲ ವೇಗವಾಗಿ ಹರಡುತ್ತಿದೆ. ಇದಕ್ಕಾಗಿ ವಿವಿಧ ರೀತಿಯ ಸಂದೇಶಗಳನ್ನು ಕಳುಹಿಸುವ ಮೂಲಕ ವ್ಯಕ್ತಿಗಳಿಂದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಸೈಬರ್‌ ವಂಚಕರು ಜನರನ್ನು ವಂಚಿಸಲು ಇಂದು ಹೊಸ ದಾರಿ ಕಂಡುಕೊಂಡಿದ್ದಾರೆ. 

ಇದರಲ್ಲಿ ಜನರಿಗೆ ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಉಚಿತ ರೀಚಾರ್ಜ್‌ ಪ್ಲಾನ್‌ ನೀಡುವುದಾಗಿ ಸುಳ್ಳು ಭರವಸೆ ನೀಡಿ ವಂಚಿಸುತ್ತಿದ್ದಾರೆ. 

ಪಿಬಿಐ ಫ್ಯಾಕ್ಟ್‌ ಚೆಕ್‌ ಇಂತಹ ಸಂದೇಶಗಳಿಗೆ ಸಂಬಂಧಿಸಿದಂತೆ ಪೋಸ್ಟ್‌ ಬಿಡುಗಡೆ ಮಾಡಿದೆ ಮತ್ತು ಈ ಬಗ್ಗೆ ಜಾಗರೂಕರಾಗಿರುವಂತೆ ಜನರಲ್ಲಿ ಮನವಿ ಮಾಡಿದೆ. 

ಪಿಬಿಐ ಫ್ಯಾಕ್ಟ್‌ ಚೆಕ್‌ನಲ್ಲಿ ಇಂತಹ ಸಂದೇಶಗಳು ಇತ್ತೀಚೆಗೆ ಹೆಚ್ಚು ಹರಿದಾಡುತ್ತಿವೆ. ಈ ಸಂದೇಶಗಳಲ್ಲಿ ಟ್ರಾಯ್‌ ಆಫರ್‌ ನೀಡುತ್ತಿದೆ ಎಂದು ಕೂಡ ಹೇಳಲಾಗುತ್ತಿದೆ ಎಂದು ಪಿಬಿಐ ಪೋಸ್ಟ್‌ನಲ್ಲಿ ತಿಳಿಸಿದೆ. 

ನಕಲಿ ಸಂದೇಶದ ಬಗ್ಗೆ ಜಾಗರೂಕರಾಗಿರಲು ಪಿಬಿಐ ಫ್ಯಾಕ್ಟ್‌ ಚೆಕ್‌ ತಿಳಿಸಿದೆ. ಟ್ರಾಯ್‌ ಇಂತಹ ಯಾವುದೇ ಸಂದೇಶವನ್ನು ನೀಡುತ್ತಿಲ್ಲ ಎಂದು ಕೂಡ ಅವರು ಹೇಳಿದ್ದಾರೆ. 

ಈ ಸಂದೇಶದಲ್ಲಿ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ಸೈಬರ್‌ ವಂಚನೆಗೆ ಒಳಗಾಗಬಹುದು ಎಂದು ಪಿಬಿಐ ತಿಳಿಸಿದೆ. 

ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿದ ತಕ್ಷಣ ವಂಚಕರು ನಿಮ್ಮ ಮೊಬೈಲ್‌ನಿಂದ ಸೂಕ್ಷ್ಮ ಡೇಟಾವನ್ನು ಕದಿಯಬಹುದು. 

ಹಾಗಾಗಿ ಯಾವುದೇ ವಿಶೇಷ ಆಫರ್‌ ನೀಡುವ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡುವ ಮುನ್ನ ಯೋಚಿಸಿ, ಆಮಿಷಕ್ಕೆ ಒಳಗಾಗದಿರಿ

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr