ಯಶಸ್ವಿಯಾಗಿ ತತ್ಕಾಲ್ ರೈಲು ಟಿಕೆಟ್ ಬುಕ್ ಮಾಡಲು ಪ್ರಮುಖ ಸಲಹೆಗಳು
By Praveen Chandra B Sep 11, 2024
Hindustan Times Kannada
ತತ್ಕಾಲ್ ಟಿಕೆಟ್ ದೊರಕುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಆನ್‌ಲೈನ್ ಬುಕ್ಕಿಂಗ್ ಪೂರ್ಣಗೊಳ್ಳುವ ಮೊದಲು ಹಲವು ಬಾರಿ ತತ್ಕಾಲ್ ಟಿಕೆಟ್‌ಗಳು ಖಾಲಿಯಾಗಿ ಸಾಕಷ್ಟು ಜನರು ಕಷ್ಟಪಡುತ್ತಾರೆ.
ಆದರೆ, ಇಲ್ಲಿರುವ ಕೆಲವು ಸಲಹೆಗಳನ್ನು ಅನುಸರಿಸಿದರೆ ತತ್ಕಾಲ್ ಟಿಕೆಟ್ ದೊರಕುವ ಸಾಧ್ಯತೆ ಹೆಚ್ಚುತ್ತದೆ.
ತತ್ಕಾಲ್ ಟಿಕೆಟ್ ಕಾಯ್ದಿರಿಸುವ ಮೊದಲು ಮಾಸ್ಟರ್ ಪಟ್ಟಿಯನ್ನು ರಚಿಸಿ. ಪ್ರಯಾಣಿಕರ ವಿವರಗಳನ್ನು ಅದರಲ್ಲಿ ನಮೂದಿಸಿಡಿ.
ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಆಪ್‌ನ ಮೈ ಪ್ರೊಫೈಲ್ ವಿಭಾಗಕ್ಕೆ ಹೋಗಿ. ಅಲ್ಲಿ ನೀವು ಮಾಸ್ಟರ್ ಪಟ್ಟಿಯನ್ನು ರಚಿಸಬಹುದು. ಇದರಲ್ಲಿ ಪ್ರಯಾಣಿಕರ ವಿವರಗಳನ್ನು ನಮೂದಿಸಿಡಬಹುದು.
ತತ್ಕಾಲ್ ಟಿಕೆಟ್ ಬುಕ್ಕಿಂಗ್ ವಿಂಡೋ ತೆರೆಯುವ 3-5 ನಿಮಿಷ ಮೊದಲು ನೀವು ಐಆರ್‌ಸಿಟಿಸಿ ವೆಬ್/ಆಪ್‌ಗೆ ಲಾಗಿನ್ ಆಗಿರಿ.
ಭಾರತೀಯ ರೈಲ್ವೆಯಲ್ಲಿ ಎಸಿ ಕ್ಲಾಸ್‌ಗೆ ತತ್ಕಾಲ್ ಬುಕ್ಕಿಂಗ್ ಬೆಳಗ್ಗೆ 10 ಗಂಟೆಗೆ ಆರಂಭವಾಗುತ್ತದೆ. ಇದೇ ರೀತಿ ನಾನ್ ಏಸಿ ವಿಭಾಗದ ತತ್ಕಾಲ್ ಟಿಕೆಟ್ ಬುಕ್ಕಿಂಗ್ 11 ಗಂಟೆಗೆ ಆರಂಭವಾಗುತ್ತದೆ.
ತತ್ಕಾಲ್ ಟಿಕೆಟ್ ತ್ವರಿತ ಪಾವತಿಗಾಗಿ ಮೊಬೈಲ್ ವ್ಯಾಲೆಟ್, ಯುಪಿಐ, ನೆಟ್‌ಬ್ಯಾಂಕಿಂಗ್‌ನಂತಹ ಆಯ್ಕೆಗಳನ್ನು ರೆಡಿಯಾಗಿಟ್ಟುಕೊಳ್ಳಿ.
ನೀವು ಅನೇಕ ಸಾಧನಗಳಲ್ಲಿ, ವಿವಿಧ ಐಆರ್‌ಸಿಟಿಸಿ ಖಾತೆಗಳ ಮೂಲಕ ಏಕಕಾಲದಲ್ಲಿ ಪ್ರಯತ್ನಿಸಿದರೆ ತತ್ಕಾಲ್ ಟಿಕೆಟ್‌ಗಳು ದೊರಕುವ ಸಾಧ್ಯತೆ ಹೆಚ್ಚಿರುತ್ತದೆ.
ದಿನಕ್ಕೆ ಎಷ್ಟು ಬಾರಿ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು