ಪ್ರತಿನಿತ್ಯ ಅಥವಾ ಆಗಾಗ ಲಿಫ್ಟ್‌ನಲ್ಲಿ ಓಡಾಡುವವರು ಅಪ್ಪಿತಪ್ಪಿ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡ್ರೆ ಏನು ಮಾಡಬೇಕು ಹಾಗೂ ಏನು ಮಾಡಬೇಕು ಎಂಬ ಬಗ್ಗೆ ತಿಳಿದಿರಬೇಕು.
ಲಿಫ್ಟ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಾಗ ಲಿಫ್ಟ್ ಅರ್ಧಕ್ಕೆ ನಿಂತು ಬಿಡಬಹುದು. ಇದರಿಂದ ಗಾಬರಿಯಾಗುವುದು ಖಂಡಿತ. ಲಿಫ್ಟ್ ಮೆಂಟೇನೆನ್ಸ್ ಸಮಸ್ಯೆ ಇದ್ದಾಗ ಇಂತಹ ತೊಂದರೆ ಎದುರಾಗುತ್ತದೆ.
ಲಿಫ್ಟ್‌ನಲ್ಲಿ ಯಾರಾದ್ರೂ ಸಿಕ್ಕಿ ಹಾಕಿಕೊಂಡ್ರೆ ಏನು ಮಾಡಬೇಕು? ಎಂಬ ಪ್ರಶ್ನೆಗೆ ಮುಂದಿದೆ ಉತ್ತರ.
ಗಾಬರಿಯಾಗಬೇಡಿ: ಲಿಫ್ಟ್‌ನಲ್ಲಿ ಸಿಲುಕಿಕೊಂಡಾಗ ಯಾವುದೇ ಕಾರಣಕ್ಕೂ ಭಯಪಡಬಾರದು. ನಿಮ್ಮ ಮನಸ್ಸು ಹಾಗೂ ದೇಹ ಎರಡೂ ಹೊರ ಬರುವುದು ಹೇಗೆ ಎಂಬುದರ ಮೇಲೆ ಕೇಂದ್ರೀಕೃತವಾಗಿರಬೇಕು.
ಲಿಫ್ಟ್‌ನ ಒಳಗಿರುವ ಕಾಲಿಂಗ್ ಬಟನ್ ಅನ್ನು ತಕ್ಷಣಕ್ಕೆ ಪ್ರೆಸ್ ಮಾಡಿ.
ಈ ರೀತಿ ಬಟನ್ ಪ್ರೆಸ್ ಮಾಡುವುದರಿಂದ ಲಿಫ್ಟ್‌ನಲ್ಲಿ ಯಾರೋ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬುದು ಲಿಫ್ಟ್ ನಿರ್ವಹಣಾ ತಂಡಕ್ಕೆ ಅರಿವಾಗುತ್ತದೆ.
ಲಿಫ್ಟ್‌ನಲ್ಲಿ ಪಾನಿಕ್ ಬಟನ್ ಕೂಡ ಇರುತ್ತದೆ. ಕಾಲಿಂಗ್ ಬಟನ್ ಒತ್ತಿದ ನಂತರ ಅದನ್ನು ಒತ್ತಿ.
ಈ ಬಟನ್ ಕೆಂಪು ಬಣ್ಣದಲ್ಲಿದ್ದು, ಫೋನ್ ರಿಂಗಿಂಗ್ ಫೋನ್ ಚಿಹ್ನೆಯನ್ನು ಹೊಂದಿರುತ್ತದೆ.
ಬಹಳ ಹೊತ್ತು ಯಾರೂ ನಿಮ್ಮ ಸಹಾಯಕ್ಕೆ ಬರದೇ ಇದ್ದಾಗ ನೀವು ಕೂಗಬಹುದು ಬೇರೆಯವರನ್ನು ಕರೆಯಬಹುದು.
ಎಲಿವೇಟರ್‌ನಲ್ಲಿ ಸಿಲುಕಿಕೊಳ್ಳುವುದರಿಂದ ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ಶಾಂತವಾಗಿರಿ.
ನಾಲಿಗೆಯಲ್ಲಿದೆ ನಿಮ್ಮ ಆರೋಗ್ಯ; ಬಣ್ಣವೇ ಹೇಳುತ್ತೆ ಅನಾರೋಗ್ಯ ಸಮಸ್ಯೆ