ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌25 ಅಲ್ಟ್ರಾ ಶೀಘ್ರದಲ್ಲಿ ಬಿಡುಗಡೆ- ಇದರ ಕ್ಯಾಮೆರಾ ಭಯಂಕರವಂತೆ! 

Samsung

By Praveen Chandra B
Dec 30, 2024

Hindustan Times
Kannada

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 25 ಅಲ್ಟ್ರಾದ ಕ್ಯಾಮೆರಾದಲ್ಲಿ ಏನೇನು ಅಪ್‌ಗ್ರೇಡ್‌ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

Bloomberg

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 25 ಅಲ್ಟ್ರಾ ಜನವರಿ 22, 2025ರಂದು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

Amazon

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 25 ಅಲ್ಟ್ರಾವು ಹಳೆಯ ಆವೃತ್ತಿಗೆ ಹೋಲಿಸಿದರೆ ಸಾಕಷ್ಟು ಅಪ್‌ಡೇಟ್‌ ಆಗಿರುವ ನಿರೀಕ್ಷೆಯಿದೆ. ಇದರ ಮುಖ್ಯ ಹೈಲೈಟ್ ಕ್ಯಾಮೆರಾ ಎಂದು ನಿರೀಕ್ಷಿಸಲಾಗಿದೆ. 

HT Tech

ಇದರ ಕ್ಯಾಮೆರಾ ಹೇಗಿರಲಿದೆ ಎನ್ನುವುದರ ಕುರಿತು ಇರುವ ವದಂತಿಗಳನ್ನು ನೋಡೋಣ. 

HT Tech

ಗ್ಯಾಲಕ್ಸಿ ಎಸ್ 25 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ ಹಿಂಭಾಗದಲ್ಲಿ 200 ಮೆಗಾ ಫಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಇರುವ ನಿರೀಕ್ಷೆಯಿದೆ. ಇದು 100 ಎಂಪಿ ಸ್ಪೇಸ್ ಜೂಮ್ ಫೀಚರ್‌ ಕೂಡ ಹೊಂದಿರುತ್ತದೆಯಂತೆ.

Samsung

ಈ ಸ್ಮಾರ್ಟ್‌ಫೋನ್‌ ಬಹುನಿರೀಕ್ಷಿತ ಅಲ್ಟ್ರಾವೈಡ್ ಆಂಗಲ್ ಕ್ಯಾಮೆರಾ ಅಪ್‌ಗ್ರೇಡ್‌ ಹೊಂದಿರುತ್ತದೆ. ಇದು 12 ಎಂಪಿಯಿಂದ 50 ಎಂಪಿಗೆ ಅಪ್‌ಗ್ರೇಡ್‌ ಆಗಿರಲಿದೆ. ಇದು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗಲಿದೆ. 

Amazon

ಈ ಸ್ಮಾರ್ಟ್‌ಫೋನ್‌ನ ಟೆಲಿಫೋಟೋ ಲೆನ್ಸ್ ವೇರಿಯಬಲ್ ಸಾಮರ್ಥ್ಯ ಹೊಂದಿರುತ್ತದೆಯಂತೆ. ಒಂದು ಸೀನ್‌ನಲ್ಲಿಯೇ ಫೋಕಲ್ ಉದ್ದವನ್ನು ಬದಲಾಯಿಸಲು ಇದರಿಂದ ಸಾಧ್ಯವಾಗಲಿದೆ.

Amazon

ಈ ಹೊಸ ಟೆಲಿಫೋಟೋ ಲೆನ್ಸ್ ತಂತ್ರಜ್ಞಾನವು 4-5x ಜೂಮ್ ಜತೆಗೆ  6-7x ಆಪ್ಟಿಕಲ್ ಜೂಮ್ ಸಾಮರ್ಥ್ಯ ಹೊಂದಿರಲಿದೆಯಂತೆ. 

HT Tech

 ಗ್ಯಾಲಕ್ಸಿ ಎಸ್ 25 ಅಲ್ಟ್ರಾ ಕ್ವಾಡ್ ಕ್ಯಾಮೆರಾ ಸೆಟಪ್ ಬದಲಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಜತೆ ಆಗಮಿಸುವ ನಿರೀಕ್ಷೆಯಿದೆ.

Samsung

Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ