DeepSeek: ಏನಿದು ಡೀಪ್‌ಸೀಕ್‌? ಚೀನಾದ ಎಐ ಮಾಡೆಲ್‌ ಬಗ್ಗೆ ತಿಳಿಯಿರಿ

Photo Credit: Flickr

By Praveen Chandra B
Jan 30, 2025

Hindustan Times
Kannada

ಚೀನಾದ ಎಐ ಸ್ಟಾರ್ಟ್ಅಪ್ ಡೀಪ್‌ಸ್ಪೀಕ್‌ ಎಂಬ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮಾದರಿ ಪರಿಚಯಿಸಿ ಸಿಲಿಕಾನ್‌ ವ್ಯಾಲಿಯನ್ನು ಬೆಚ್ಚಿ ಬೀಳಿಸಿದೆ.

Photo Credit: Unsplash

ಡೀಪ್‌ಸೀಕ್‌ನ ಎಐ ಮಾದರಿಗಳು ಈಗ ಜಗತ್ತಿನ ಅತ್ಯುತ್ತಮ ಎಐ ಮಾಡೆಲ್‌ಗಳನ್ನು ಹಿಂದಿಕ್ಕಿದೆ.

Photo Credit: Unsplash

ಎಐ ಮತ್ತು ಹಣಕಾಸು ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಎಂಜಿನಿಯರ್ ಮತ್ತು ಉದ್ಯಮಿ ಲಿಯಾಂಗ್ ವೆನ್‌ಫೆಂಗ್‌ ಅವರು 2023ರಲ್ಲಿ ಡೀಪ್‌ಸೀಕ್‌ ಎಂಬ ಕಂಪನಿಯನ್ನು ಸ್ಥಾಪಿಸಿದರು.

Photo Credit: Flickr

ಡೀಪ್‌ಸೀಕ್‌ ರಚಿಸುವ ಮೊದಲು ಲಿಯಾಂಗ್ ಅವರು ಹಣಕಾಸು ಡೇಟಾವನ್ನು ವಿಶ್ಲೇಷಿಸಲು ಎಐ ಅನ್ನು ಬಳಸುವ ಹೆಡ್ಜ್ ಫಂಡ್ ಅನ್ನು ಮುನ್ನಡೆಸಿದರು.

Photo Credit: Unsplash

ಲಿಯಾಂಗ್ ಅವರ ತಂಡವು ಚೀನಾದ ಪ್ರಮುಖ ವಿಶ್ವವಿದ್ಯಾಲಯದ ಹೊಸ ಪ್ರತಿಭಾನ್ವಿತ ಪದವೀಧರರನ್ನು ನೇಮಕ ಮಾಡಿಕೊಂಡಿದೆ. ಹೊಸ ಆಲೋಚನೆಗಳಿಗೆ ಕಂಪನಿ ಆದ್ಯತೆ ನೀಡುತ್ತದೆ.

Photo Credit: Unsplash

ಡೀಪ್‌ಸೀಕ್‌ ಓಪನ್‌ಸೋರ್ಸ್‌ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಿದೆ. ಮುಕ್ತ ಮಾದರಿ ಆಗಿರುವ ಕಾರಣ ಜಗತ್ತಿನಾದ್ಯಂತ ಇರುವ ಡೆಲವಪರ್‌ಗಳು ಇದನ್ನು ಇನ್ನಷ್ಟು ಸುಧಾರಿಸಬಹುದು.

Photo Credit: Flickr

ಸಡನ್‌ ಖ್ಯಾತಿ ಪಡೆದ ಡೀಪ್‌ಸೀಕ್‌ ಅನ್ನು ಈಗ ಎಐ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಓಪನ್‌ಎಐ ಜತೆಗೆ ಹೋಲಿಸಲಾಗುತ್ತಿದೆ.

Photo Credit: File Photo

ಡೀಪ್‌ಸೀಕ್‌ ತನ್ನ ಕಾರ್ಯಕ್ಷಮತೆಯನ್ನು ಓಪನ್‌ಎಐನ ಇತ್ತೀಚಿನ ತಂತ್ರಜ್ಞಾನಕ್ಕೆ ಹೋಲಿಸಬಹುದು ಎಂದು ಹೇಳಿಕೊಂಡಿದೆ. ಹೀಗಾಗಿ, ಎಐ ಉದ್ಯಮದಲ್ಲಿ ಡೀಪ್‌ಸೀಕ್‌ ಪ್ರಮುಖ ಬದಲಾವಣೆಯನ್ನು ಮಾಡುವ ನಿರೀಕ್ಷೆಯಿದೆ.

Photo Credit: Unsplash

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌