ಅಮೃತಧಾರೆ 200ನೇ ಸಂಚಿಕೆ: ಇಂದು ಸಂಜೆ ಜೈದೇವ್ ಮದುವೆ; ಮದುಮಗಳು ಯಾರು?
By Praveen Chandra B
Feb 24, 2024
Hindustan Times
Kannada
ಅಮೃತಧಾರೆ ಇಂದು 200ನೇ ಸಂಚಿಕೆಗೆ ತಲುಪಿದ್ದು, ರೋಚಕ ಹಂತಕ್ಕೆ ತಲುಪಿದೆ
ಅಪೇಕ್ಷಾ ಜತೆಗೆ ಮೋಸದ ಮದುವೆಗೆ ಇಂದು ಅಂತ್ಯ ಬೀಳುವ ನಿರೀಕ್ಷೆಯಿದೆ
ಮಲ್ಲಿ ಬಸುರಿಯಾಗಲು ಜೈದೇವ್ ಕಾರಣವೆಂದು ಭೂಮಿಕಾ ಸತ್ಯ ತಿಳಿದುಕೊಂಡಿದ್ದಾಳೆ.
ಮಲ್ಲಿ ಮತ್ತು ತಾತಾ ಮದುವೆ ಮನೆಗೆ ಆಗಮಿಸಿದ್ದಾರೆ.
ಭೂಮಿಕಾ ದಿಟ್ಟವಾಗಿ ನಿಂತು ಮಲ್ಲಿ ಮದುವೆ ನಡೆಸುವ ಸಾಧ್ಯತೆ ಇದೆ.
ಶಕುಂತಲಾದೇವಿಯ ಅಹಂಗೆ ದೊಡ್ಡ ಪೆಟ್ಟು ಬಿದ್ದಿದೆ.
ಈ ಘಟನೆಯನ್ನು ಗೌತಮ್ ಹೇಗೆ ಸ್ವೀಕರಿಸ್ತಾನೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.
ಇನ್ನೊಂದೆಡೆ ಪ್ರೀತಿಯ ನೋವನ್ನು ಮರೆಯಲು ಪಾರ್ಥ ಆಸ್ಟ್ರೇಲಿಯಾಕ್ಕೆ ಹೋಗಬೇಕೆಂದುಕೊಂಡಿದ್ದಾನೆ.
ಅಪೇಕ್ಷಾ ಮದುವೆ ನಿಂತು ಹೋದರೆ ಪಾರ್ಥ ಇಲ್ಲೇ ಉಳಿಯುತ್ತಾನ?
ಮುಂದೆ ಇವರಿಬ್ಬರ ಪ್ರೀತಿಗೆ ಏನೆಲ್ಲ ಅಡ್ಡಿಯಾಗಬಹುದು?
ಸದ್ಯ ಝೀ ಕನ್ನಡದಲ್ಲಿ ಇಂದೇ ಶುಭವಿವಾಹವಾಗುತ್ತ?
ಇಂತಹ ಹಲವು ಪ್ರಶ್ನೆಗಳು ಕಿರುತೆರೆ ಪ್ರೇಕ್ಷಕರಲ್ಲಿದೆ.
ಒಟ್ಟಾರೆ 200 ಸಂಚಿಕೆಗಳನ್ನು ಪೂರೈಸಿದ ಅಮೃತಧಾರೆಗೆ ದೊಡ್ಡ ಮಟ್ಟದ ವೀಕ್ಷಕರಿದ್ದು, ಮುಂದೇನಾಗುತ್ತದೆ ಎಂಬ ಕುತೂಹಲದಿಂದ ಇದ್ದಾರೆ.
ಅಮೃತಧಾರೆ, ಸೀತಾರಾಮ, ಭಾಗ್ಯಲಕ್ಷ್ಮಿ ಮತ್ತು ಬೃಂದಾವನ ಸೀರಿಯಲ್‌ನ ಕಥೆಗಳನ್ನು ಎಚ್‌ಟಿ ಕನ್ನಡ ಪ್ರತಿದಿನ ಪ್ರಕಟಿಸುತ್ತಿದೆ. ತಪ್ಪದೇ ಓದಿ.
ವಿಶ್ವದ ಅತ್ಯಂತ ಹಳೆಯ ನಗರಗಳು
ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು
UNSPLASH, HOW STUFF WORKS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ