ಬಿಗ್‌ಬಾಸ್‌ ಕನ್ನಡದಲ್ಲಿ ಈ ಬಾರಿ ಮೋಕ್ಷಿತಾ ಪೈ ಟ್ರೋಫಿ ಗೆಲ್ಲಬಹುದೇ?

By Praveen Chandra B
Jan 22, 2025

Hindustan Times
Kannada

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಈ ಬಾರಿಯಾದ್ರೂ ಮಹಿಳಾ ಸ್ಪರ್ಧಿಯೊಬ್ಬರು ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಕಿರುತೆರೆ ಪ್ರೇಕ್ಷಕರು ಇದ್ದಾರೆ.

ಸದ್ಯ ಮಹಿಳಾ ಸ್ಪರ್ಧಿಗಳಾಗಿ ಸ್ಪರ್ಧೆಯಲ್ಲಿರುವುದು ಮೋಕ್ಷಿತಾ ಪೈ ಮತ್ತು ಭವ್ಯಾ ಗೌಡ. 

ಹೊರಜಗತ್ತಿಗೆ ಪಾಪದ ಹುಡುಗಿಯಂತೆ ಬಿಂಬಿತವಾಗಿದ್ದ ಮೋಕ್ಷಿತಾ ಪೈ ದಿನ ಕಳೆದಂತೆ ಬಿಗ್‌ಬಾಸ್‌ನಲ್ಲಿ ರೆಬೆಲ್‌ ಆಗಿದ್ದರು.

ಆರಂಭದಲ್ಲಿ ಉಗ್ರಂ ಮಂಜು ಮತ್ತು ಗೌತಮಿ ತಂಡ  ಸೇರಿಕೊಂಡಿದ್ದರು. ಅಲ್ಲೂ ತನ್ನ ಪ್ಲ್ಯಾನಿಂಗ್‌ ಕೌಶಲ ತೋರಿಸಿದ್ದರು.

ಬಳಿಕ  ಶಿಶಿರ್ ಮತ್ತು ಐಶ್ವರ್ಯ ಜೊತೆ ಸೇರಿದ್ದರು. ಮತ್ತೆ  ತ್ರಿವಿಕ್ರಮ್ ಮತ್ತು ಭವ್ಯಾ ಜತೆ ಸೇರಿದ್ದರು. 

ಇದಾದ ಬಳಿಕ ತ್ರಿವಿಕ್ರಮ್‌ ಜತೆ ಜಗಳ ಆರಂಭಿಸಿದರು. ಮೋಕ್ಷಿತಾ ಪೈ ಆಟದ ರೀತಿಯು ಅವರಿಗೆ ಅಭಿಮಾನಿಗಳನ್ನು ಸೃಷ್ಟಿಸಿತ್ತು, ಜತೆಗೆ ಈಕೆಯನ್ನು ಹೊರಗೆ ದ್ವೇಷಿಸುವರ ಬಳಗವೂ ಹುಟ್ಟಿಕೊಂಡಿತ್ತು.

ಟಿಕೆಟ್‌ ಟು ಫಿನಾಲೆಯಲ್ಲಿ ಹನುಮಂತು ಈಕೆಯನ್ನು ಸೇವ್‌  ಮಾಡಿದ್ದಾರೆ. ಇದರಿಂದಾಗಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. 

ಮೋಕ್ಷಿತಾ ಪೈ ದೊಡ್ಮನೆಯಲ್ಲಿ ತನ್ನ ಆಟ ತೋರಿಸಿದ್ದಾರೆ. ಈಕೆ ಈ ಬಾರಿ ಗೆಲ್ಲಲ್ಲಿ ಎನ್ನುವುದು ಮೋಕ್ಷಿತಾ ಪೈ ಅಭಿಮಾನಿಗಳ ಮಾತು. 

ಆದರೆ, ಅಂತಿಮವಾಗಿ ಸುದೀಪ್‌ ಯಾರ ಕೈ ಮೇಲಕ್ಕೆತ್ತಲಿದ್ದಾರೆ ಎನ್ನುವುದು ಈ ಭಾನುವಾರ ತಿಳಿಯಲಿದೆ.

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು