ಕಲರ್ಸ್‌ ಕನ್ನಡದ ವಧು ಸೀರಿಯಲ್‌ ನಾಯಕ ನಟ ಇವರೇ ನೋಡಿ..

By Manjunath B Kotagunasi
Jan 07, 2025

Hindustan Times
Kannada

ಧನಂಜಯ್‌ ಕೋಟಿ ಸಿನಿಮಾ ನಿರ್ದೇಶಿಸಿದ್ದ ಪರಮೇಶ್ವರ್‌ ಗುಂಡ್ಕಲ್‌  ವಧು ಸೀರಿಯಲ್‌ ನಿರ್ದೇಶನ ಮಾಡುತ್ತಿದ್ದಾರೆ. 

ವಧು ಸೀರಿಯಲ್‌ನಲ್ಲಿ ಲಾಯರ್‌ ಪಾತ್ರದ ಮೂಲಕ ಟಿ.ಎನ್‌ ಸೀತಾರಾಮ್‌ ಮತ್ತೆ ಕಿರುತೆರೆಗೆ ಕಂಬ್ಯಾಕ್‌ ಆಗಿದ್ದಾರೆ. 

ವಧು ಶೀರ್ಷಿಕೆ ಪಾತ್ರದಲ್ಲಿ ಬೆಂಗಳೂರಿನ ಜಕ್ಕೂರು ಮೂಲದ ದುರ್ಗಾಶ್ರೀ ನಟಿಸುತ್ತಿದ್ದಾರೆ. ಈ ಹಿಂದೆ ತೆಲುಗಿನಲ್ಲೂ ನಟಿಸಿದ್ದರು.

ಈಗ ಹೊಸ ಪ್ರೋಮೋ ಬಿಡುಗಡೆ ಆಗಿದ್ದು, ಸೀರಿಯಲ್‌ನ ಸ್ಟಾರ್ ತಾರಾಗಣ‌ ರಿವೀಲ್‌ ಆಗಿದೆ. ವಿನಯಾ ಪ್ರಸಾದ್‌, ಸುಧಾ ಬೆಳವಾಡಿ ಪಾತ್ರವರ್ಗದಲ್ಲಿದ್ದಾರೆ

ಈ ಹಿಂದೆ ಲಕ್ಷಣ ಸೀರಿಯಲ್‌ನಲ್ಲಿ ನಟಿಸಿದ್ದ ಅಭಿಷೇಕ್‌ ಶ್ರೀಕಾಂತ್‌ ವಧು ಸೀರಿಯಲ್‌ನಲ್ಲೀಗ ನಾಯಕ ನಟನಾಗಿ ನಟಿಸುತ್ತಿದ್ದಾರೆ.

ಕಿರುತೆರೆ ಧಾರಾವಾಹಿಗಳು ಮಾತ್ರವಲ್ಲದೆ  ಸಿನಿಮಾಗಳಲ್ಲಿಯೂ ನಟಿಸಿದ ಅನುಭವ ಅಭಿಷೇಕ್‌ ಶ್ರೀಕಾಂತ್‌ ಅವರಿಗಿದೆ. 

ಸತ್ಯ ಹರಿಶ್ಚಂದ್ರ, ಪೂರ್ವಾಪರ, ಧನಂಜಯ್‌ ಜತೆಗಿನ ಕೋಟಿ ಚಿತ್ರದಲ್ಲೂ ಅಭಿಷೇಕ್‌ ಶ್ರೀಕಾಂತ್‌ ನಟಿಸಿದ್ದಾರೆ

ಇನ್ನೇನು ಬಿಗ್‌ ಬಾಸ್‌ ಮುಗಿದ ಮೇಲೆ ವಧು ಹೊಸ ಸೀರಿಯಲ್‌ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.

ಮಹಾಕುಂಭ ಮೇಳದಲ್ಲಿ ವಿಭಿನ್ನವಾಗಿ ಕಾಣಿಸಿದ ಸಾಧುಗಳಿವರು

Pic Credit: Shutterstock