ಗೆದ್ದ 50 ಲಕ್ಷವೂ ಹನುಮಂತನ ಕೈ ಸೇರಲ್ಲ, ತೆರಿಗೆ ಕಟ್ಟಾಗುವುದೆಷ್ಟು?
By Prasanna Kumar P N Jan 27, 2025
Hindustan Times Kannada
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ವಿಜೇತರಾಗಿ ಹಳ್ಳಿ ಹೈದ ಹನುಮಂತ ಲಮಾಣಿ ಹೊರಹೊಮ್ಮಿದ್ದು, ಇಡೀ ಕರ್ನಾಟಕವೇ ಅವರ ಗೆಲುವನ್ನು ಸಂಭ್ರಮಿಸುತ್ತಿದೆ.
ಗ್ರ್ಯಾಂಡ್ ಫಿನಾಲೆಯ ಅಂತಿಮ ಇಬ್ಬರಲ್ಲಿ ಹನುಮಂತ ಅವರು ಹೊಸ ಅಧ್ಯಾಯದ ಪಟ್ಟ ದಕ್ಕಿಸಿಕೊಂಡರು. ಆದರೆ ಮತ್ತೊಬ್ಬ ಫೈನಲಿಸ್ಟ್ ತ್ರಿವಿಕ್ರಮ್ ಅವರು ಮೊದಲ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡರು.
ಬಿಗ್ ಬಾಸ್ನಲ್ಲಿ ಕಪ್ ಗೆದ್ದ ಹನುಮಂತುಗೆ ಬಹುಮಾನ ಮೊತ್ತವಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ಸಿಕ್ಕಿದೆ. ಆದರೆ, ಹಳ್ಳಿ ಹೈದನಿಗೆ ಇಷ್ಟೂ ಮೊತ್ತವೂ ಕೈಗೆ ಸಿಗುವುದಿಲ್ಲ.
ಬಿಗ್ ಬಾಸ್ ಗೆದ್ದವರಿಗೆ ಅಪಾರ ಜನಪ್ರಿಯತೆ ಸಿಗುತ್ತಾದಾದರೂ ಬಹುಮಾನ ಮೊತ್ತದ 50 ಲಕ್ಷ ಸಂಪೂರ್ಣವಾಗಿ ಸಿಗಲ್ಲ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಗೆದ್ದ ಹಣದಲ್ಲಿ ಟ್ಯಾಕ್ಸ್ ಕಟ್ಟಾಗುತ್ತದೆ.
ಹನುಮಂತ ಗೆದ್ದಿರುವ ಬಹುಮಾನ ಮೊತ್ತದಲ್ಲಿ ಶೇ 30ರಷ್ಟು ತೆರಿಗೆ ಕಟ್ಟಬೇಕಿದೆ. ಈ ಹಣವನ್ನು ಕಡಿತ ಮಾಡಿಯೇ ವಿಜೇತ ಹನುಮಂತುಗೆ ವಿತರಿಸುತ್ತಾರೆ. ಹಾಗಿದ್ದರೆ ಹಳ್ಳಿ ಹೈದನ ಕೈಗೆ ಸಿಗೋದೆಷ್ಟು?
ಶೇಕಡಾ 30ರಷ್ಟು ಟ್ಯಾಕ್ಸ್ ಕಟ್ಟಾಗುವ ಕಾರಣ ಬಿಗ್ ಬಾಸ್ ವಿಜೇತ ಹನುಮಂತು ಕೈಗೆ 35 ಲಕ್ಷ ರೂಪಾಯಿ ಸಿಗುತ್ತದೆ.
ಟಿವಿ ರಿಯಾಲಿಟಿ ಶೋ, ಸ್ಪರ್ಧೆ, ಲಾಟರಿ.. ಹೀಗೆ ಹಲವು ವಿಭಾಗಗಳಲ್ಲಿ ಆಡಿ ಗೆದಿದ್ದರೆ ಶೇ. 30 ತೆರಿಗೆ ಪಾವತಿಸಬೇಕು. ಕನಿಷ್ಠ 10 ಸಾವಿರ ರೂಪಾಯಿ ಬಹುಮಾನ ಮೊತ್ತದಿಂದ ಈ ತೆರಿಗೆ ಅನ್ವಯವಾಗುತ್ತದೆ.
ಮೊದಲ ರನ್ನರ್ಅಪ್ ತ್ರಿವಿಕ್ರಮ್ 15 ಲಕ್ಷ ಬಹುಮಾನ ಮೊತ್ತ ಸಿಕ್ಕಿದೆ. ಇವರು ಸಹ ತೆರಿಗೆ ಪಾವತಿಸಬೇಕಿದೆ. ಹೀಗಾಗಿ ತ್ರಿವಿಕ್ರಮ್ ಅವರ ಕೈಗೆ 10.50 ಲಕ್ಷ ಕೈಗೆ ಸಿಗಲಿದೆ.
ಇನ್ನು, ಎರಡನೇ ರನ್ನರ್ಅಪ್ ರಜತ್ ಕಿಶನ್ ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದ್ದು, 7 ಲಕ್ಷ ರೂಪಾಯಿ ಅವರ ಕೈಸೇರಲಿದೆ. ಉಳಿದಿದ್ದು ತೆರಿಗೆ ರೂಪದಲ್ಲಿ ಸರ್ಕಾರದ ಕೈ ಸೇರಲಿದೆ.