ಇಶಿತಾ ವರ್ಷ ಪರಿಚಯ

ಅಮೃತಧಾರೆಯಲ್ಲಿ ಸಾರಾ ಅಣ್ಣಯ್ಯ ಸ್ಥಾನ ತುಂಬಿದ ಹೊಸ ಮಹಿಮಾ ಯಾರು? 

By Praveen Chandra B
Jan 17, 2025

Hindustan Times
Kannada

ಮಹಿಮಾ ಪಾತ್ರದಾರಿಯಾಗಿ ಅಮೃತಧಾರೆಗೆ ಹೊಸದಾಗಿ ಎಂಟ್ರಿ ನೀಡಿರುವ ಇಶಿತಾ ವರ್ಷ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ ಮುಖ.

ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಇವರು ಮನೆಮಾತಾಗಿದ್ದರು. ಈ ಸೀರಿಯಲ್‌ನಲ್ಲಿ ಮಾಯಾ ಪಾತ್ರದ ಮೂಲಕ ಮಿಂಚಿದ್ದರು.

ರಾಜಾ ರಾಣಿ, ಸುವರ್ಣ ಸೂಪರ್‌ಸ್ಟಾರ್‌ ಮುಂತಾದ ರಿಯಾಲಿಟಿ ಶೋಗಳಲ್ಲಿಯೂ ಇಶಿತಾ ಭಾಗವಹಿಸಿದ್ದಾರೆ. 

ಇದೀಗ ಮಹಿಮಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.  ಅಮೃತಧಾರೆ ಧಾರಾವಾಹಿಯ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡುತ್ತಾರ ನೋಡಬೇಕಿದೆ.

ಇದಕ್ಕೂ ಮುನ್ನ ಅಮೃತಧಾರೆಯಲ್ಲಿ ಮಹಿಮಾ ಪಾತ್ರವನ್ನು ಸಾರಾ ಅಣ್ಣಯ್ಯ ಮಾಡುತ್ತಿದ್ದರು.

ಬದಲಾದ ಕಥೆಗೆ ತಕ್ಕಂತೆ ಕಳೆದ ಹಲವು ಎಪಿಸೋಡ್‌ಗಳಲ್ಲಿ ಮಹಿಮಾ ಮತ್ತು ಜೀವ ಇರುವ ಸೀನ್‌ಗಳು ಇರಲಿಲ್ಲ.

ಇದೀಗ ಅಮೃತಧಾರೆ ಧಾರಾವಾಹಿಯಲ್ಲಿ ಜೀವ ಮತ್ತು ಮಹಿಮಾ ಬಂದಿದ್ದಾರೆ. ಆದರೆ, ಹಳೆಯ ಸಾರಾ ಅಣ್ಣಯ್ಯ ಮತ್ತು ಶಶಿ ಹೆಗ್ಗಡೆ ಮಿಸ್‌ ಆಗಿದ್ದಾರೆ.

"ನೀನು ಈಗ ಹಳೆಯ ಜೀವ ಅಲ್ಲ. ಸಕ್ಸಸ್‌ಫುಲ್‌ ಬಿಸ್ನೆಸ್‌ಮ್ಯಾನ್‌. ನನ್ನ ಕಣ್ಣಿಗೆ ನೀನು ಬೇರೆ ತರಹನೇ ಕಾಣ್ತಾ ಇದ್ದೀಯಾ" ಎಂದು ಹೊಸ ಮಹಿಮಾ ಈಗಾಗಲೇ ಡೈಲಾಗ್‌ ಹೊಡೆದಿದ್ದಾಳೆ.

 "ನೀನು ಕೂಡ ಹೊಸದಾಗಿಯೇ ಕಾಣಿಸ್ತಾ ಇದ್ದೀಯ" ಎಂದು ಜೀವ ಹೇಳುತ್ತಾನೆ. ಆದರೆ, ಜೀವ ಈಗ ನೆಗೆಟಿವ್‌ ರೋಲ್‌ನಲ್ಲಿ ಆಗಮಿಸಿದ್ದಾನೆ. ಭೂಪತಿ ಜತೆ ಸೇರಿದ್ದಾನೆ.

 "ಅದದೇ ಕ್ಯಾರೆಕ್ಟರ್ಸ್‌, ಆದರೆ ಆಟಿಟ್ಯೂಡ್‌ ಚೇಂಜ್‌ ಆಗಿದೆ. ಒಂಥರ ಡಿಫರೆಂಟ್‌ ಫೀಲಿಂಗ್‌. ಖುಷಿಯಿದೆ. ಟೈಮ್‌ ಹೇಗೆ ಎಲ್ಲವನ್ನೂ ಚೇಂಜ್‌ ಮಾಡುತ್ತೆ ಅಲ್ವಾ" ಎಂದು ಮಹಿಮಾ ಹೇಳುತ್ತಾಳೆ. 

ಈ ಮೂಲಕ ಅಮೃತಧಾರೆ ಧಾರಾವಾಹಿ ಅಭಿಮಾನಿಗಳು ಹಳೆ ಮಹಿಮಾ, ಜೀವನ್‌ನ ಮಿಸ್‌ ಮಾಡಿಕೊಂಡಿದ್ದಾರೆ. ಆ ಖಾಲಿ ಸ್ಥಾನವನ್ನು ಈ ಹೊಸ ಕಲಾವಿದರು ಹೇಗೆ ತುಂಬಲಿದ್ದಾರೆ ಎಂದು ಕಾದು ನೋಡಬೇಕಿದೆ.

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು