ಯಾರಿವರು ಬಾಲು ಬೆಳಗುಂದಿ? ಸರಿಗಮಪ ಆಡಿಷನ್‌ನಲ್ಲಿ ಗಮನ ಸೆಳೆದ ಗಾಯಕ

By Praveen Chandra B
Dec 17, 2024

Hindustan Times
Kannada

ಸರಿಗಮಪ ಆಡಿಷನ್‌ನಲ್ಲಿ ಈ ಬಾರಿ ಎಲ್ಲರ ಗಮನ ಸೆಳೆದ ಪ್ರತಿಭೆ ಬಾಳು ಬೆಳಗುಂದಿ. ಯೂಟ್ಯೂಬ್‌ನಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

ಬಾಳು ಬೆಳಗುಂದಿ ಮೂಲತಃ ಹಾವೇರಿಯ ಕತ್ರಿಕೊಪ್ಪ ಎಂಬ ಹಳ್ಳಿಯವರು.

ಇವರು ಮಾಲಾಶ್ರೀ ಎಂಬ ಗಾಯಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ಚಾನೆಲ್‌ನ ವಿಡಿಯೋಗಳಲ್ಲಿ ಮಾಲಾಶ್ರೀಯೂ ಮಿಂಚುತ್ತಿದ್ದಾರೆ.

ಬಾಳು ಬೆಳಗುಂದಿ ಓದಿರುವುದು ಕೇವಲ 3ನೇ ಕ್ಲಾಸ್‌. ಕುರಿ ಕಾಯುವ ಕಾಯಕದ ಜತೆಗೆ ಇವರ ಪ್ರತಿಭೆ ಈಗ ಕಿರುತೆರೆ ಪ್ರೇಕ್ಷಕರನ್ನು ತಲುಪಿದೆ.

"ಹುಟ್ಟಿದು ಹಾವೇರಿ. ಕುಡದ್ದಿದು ಕಾವೇರಿ. ಕಾದ್ದದು ಕುರಿ ಮರಿ. ಗುಂಡಕಲ್ಲಿನಂತ ಗುಂಡಿಗೆಯಲ್ಲಿ.  ಮಲ್ಲಿಗೆ ಅಂತ ಮನಸ" ಎಂದು ಫೇಸ್‌ಬುಕ್‌ನಲ್ಲಿ ಇವರು ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯ ಮಹಾ ಅಡಿಷನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈತನ ದೇಸಿ ಪ್ರತಿಭೆಗೆ ಜಡ್ಜ್‌ಗಳು ಈಗಾಗಲೇ ವಾಹ್‌ ಎಂದಿದ್ದಾ

ಸರಿಗಮಪ ಆಡಿಷನ್‌ಗೆ ಬರುವ ಮೊದಲೇ ಇವರು ತನ್ನ ಫ್ಯಾನ್ಸ್‌ಗೆ ಪರಿಚಯ. ಸೋಷಿಯಲ್‌ ಮೀಡಿಯಾದಲ್ಲಿ ತನ್ನನ್ನು ಫಾಲೋ ಮಾಡುವವರ ಅಚ್ಚುಮೆಚ್ಚಿನ ಗಾಯಕ ಎಂದೇ ಹೇಳಬಹುದು. 

"ನಾನೇ 500-600 ಹಾಡುಗಳನ್ನು ಬರೆದು ಹಾಡಿದ್ದೇನೆ. ಯಾವುದಾದರೂ ಜನಪದ ಅಥವಾ ಜನಪ್ರಿಯ ಹಾಡುಗಳಿದ್ದರೆ ಅದಕ್ಕೆ ನನ್ನದೇ ಸ್ಟೈಲ್‌ನಲ್ಲಿ ಹಾಡು ಬರೆದು ಹಾಡುವ ಅಭ್ಯಾಸ ಮಾಡಿಕೊಂಡಿದ್ದೇನೆ" ಎಂದು ಬಾಳು ಬೆಳಗುಂದಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾರೆ. 

ಈಗ ಬಿಗ್‌ಬಾಸ್‌ ಕನ್ನಡ ಸ್ಪರ್ಧಿಯಾಗಿರುವ ಹನುಮಂತು ಸರಿಗಮಪದಲ್ಲಿ ಇನ್ನಷ್ಟು ಖ್ಯಾತಿ ಪಡೆದಿದ್ದರು. ಇದೀಗ ಇದೇ ರೀತಿ ಬಾಲು ಬೆಳಗುಂದಿ ಕೂಡ ತನ್ನ ಹಾಡಿನಲ್ಲೇ ಎಲ್ಲರನ್ನೂ ಮೋಡಿ ಮಾಡುವ ನಿರೀಕ್ಷೆಯಿದೆ.

ಬಾಳು ಬೆಳಗುಂದಿ ಅವರ ಯೂಟ್ಯೂಬ್‌, ಇನ್‌ಸ್ಟಾಗ್ರಾಂನಿಂದ ತೆಗೆದಿರುವ ಸ್ಕ್ರೀನ್‌ಶಾಟ್‌, ಫೋಟೋಗಳಿವು. ಕೆಲವು ಚಿತ್ರಗಳಲ್ಲಿ ಬಾಲು ಬೆಳಗುಂದಿ ಜತೆಗೆ ಸಹ ಕಲಾವಿದೆಯರೂ ಇದ್ದಾರೆ. 

ಈಜು ಕೌಶಲಕ್ಕೆ  ಹೆಸರುವಾಸಿಯಾದ 5 ಶ್ವಾನ ತಳಿಗಳು, ನಿಮ್ಮ ನೆಚ್ಚಿನ ನಾಯಿ ಇರುವುದೇ ನೋಡಿ

ಈಜು ಅಂದ್ರೆ ಸಖತ್‌ ಇಷ್ಟ

Photo Credit: Pexels