ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಅಮೃತಧಾರೆ ಮುಕ್ತಾಯವಾಗುತ್ತಿದೆಯೇ?
ಇಂತಹದ್ದೊಂದು ಪ್ರಶ್ನೆ ಮೂಡಲು ಎರಡು ಕಾರಣಗಳು ಇವೆ.
ಗೌತಮ್ ದಿವಾನ್‌ಗೆ ತನ್ನ ಅಮ್ಮ ಮತ್ತು ತಂಗಿ ಸಿಕ್ಕಿದ್ರು. ಅಮ್ಮ ಭಾಗ್ಯಮ್ಮ ಮತ್ತು ತಂಗಿ ಸುಧಾ ಯಾರೆಂದು ಗೌತಮ್‌ಗೆ ತಿಳಿಯಿತು.
ಹೊಸ ವರ್ಷದ ಆರಂಭದಲ್ಲಿಯೇ ಅಮೃತಧಾರೆ ಧಾರಾವಾಹಿಯ ಮಹಾತಿರುವು ಪ್ರೇಕ್ಷಕರ ಕಣ್ಣಾಲಿಗಳನ್ನು ತುಂಬಿಸಿತ್ತು.
ಅಮೃತಧಾರೆ ಧಾರಾವಾಹಿಯ ಕೆಲವು ನಟಿ ನಟರು ತಮಿಳಿನ ಸೀರಿಯಲ್‌ನಲ್ಲಿ ಕಾಣಿಸಿರುವುದು ಕೂಡ ಅಮೃತಧಾರೆ ಧಾರಾವಾಹಿ ಬೇಗ ಮುಗಿಯುವ ಮುನ್ಸೂಚನೆಯೇ ಎಂಬ ಪ್ರಶ್ನೆ ಮೂಡಿದೆ.
ತಮಿಳಿನಲ್ಲಿ ಗಟ್ಟಿಮೇಳಂ ಹೆಸರಿನಲ್ಲಿ ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್ ರಿಮೇಕ್ ಆಗುತ್ತಿದೆ. ಇದೇ ಸೀರಿಯಲ್‌ನ ಹೊಸ ಪ್ರೋಮೋ ಇದೀಗ ಜೀ ತಮಿಳು ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಬಿಡುಗಡೆ ಆಗಿದೆ.
ಅಮೃತಧಾರೆ ಸೀರಿಯಲ್ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಮತ್ತು ವೆಂಕಿ ಪಾತ್ರದಲ್ಲಿ ಅದೇ ಅಮೃತಧಾರೆ ಸೀರಿಯಲ್‌ನ ಆನಂದ್ ನಟಿಸುತ್ತಿದ್ದಾರೆ.
ಅಮೃತಧಾರೆ ಸೀರಿಯಲ್‌ನಲ್ಲಿ ಆನಂದ್ ಪತ್ನಿ ಅಪರ್ಣಾ ಪಾತ್ರಧಾರಿ ರಾಯಲ್ ಸ್ವಾತಿ ಸಹ ನಟಿಸುತ್ತಿದ್ದಾರೆ. ಇದು ಅಮೃತಧಾರೆ ಧಾರಾವಾಹಿ ಬೇಗ ಅಂತ್ಯವಾಗುವ ಮುನ್ಸೂಚನೆಯಾಗಿರಬಹುದೇ?
ಜನಪ್ರಿಯ ಧಾರಾವಾಹಿ ಅಮೃತಧಾರೆ ಬೇಗ ಮುಕ್ತಾಯವಾಗುವ ಕುರಿತು ಜೀ ಕನ್ನಡ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.