ರಾಮಾಯಣ, ಮಹಾಭಾರತದಲ್ಲಿ ನಟಿಸಿ ಜನಪ್ರಿಯರಾಗಿದ್ದ ಮುಸ್ಲಿಂ ನಟರಿವರು

By Praveen Chandra B
Jul 15, 2024

Hindustan Times
Kannada

ರಮಾನಂದ್‌ ಸಾಗರ್‌ ಅವರು ರಾಮಾಯಣ, ಮಹಾಭಾರತ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದಾರೆ.

ಜನರು ಭಕ್ತಿಯಿಂದ ಈ ಧಾರಾವಾಹಿಯ ಪ್ರತಿಕಂತುಗಳನ್ನು ತಪ್ಪಿಸಿಕೊಳ್ಳದೆ ವೀಕ್ಷಿಸಿದ್ದಾರೆ.  ಈ ಧಾರಾವಾಹಿಗಳಲ್ಲಿ ಹಲವು ಮುಸ್ಲಿಂ ಕಲಾವಿದರೂ ನಟಿಸಿದ್ದಾರೆ.

ಬಶೀರ್‌ ಖಾನ್‌: ಹನುಮಂತನ ಪಾತ್ರವನ್ನು ನಿರ್ವಹಿಸಿದ್ದಾರೆ.

ಬಶೀರ್‌ ಖಾನ್‌ ಅವರು ವಿಕ್ರಮ್‌ ಬೇತಾಳ್‌ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ್ದರು.

ಫಿರೋಜ್‌ ಖಾನ್‌: ಮಹಾಭಾರತದಲ್ಲಿ ಅರ್ಜುನನ ಪಾತ್ರದಲ್ಲಿ ನಟಿಸಿದರು.

ಅರ್ಜುನ ಪಾತ್ರದಲ್ಲಿ ಇವರು ಅದ್ಭುತವಾಗಿ ನಟಿಸಿದ್ದಾರೆ. ಇವರ ದೇಹಭಾಷೆ, ಸಂಭಾಷಣೆ, ಅಭಿವ್ಯಕ್ತಿ ಅನನ್ಯವಾಗಿತ್ತು.

ಅಸ್ಲಾಂ ಖಾನ್‌: ರಾಮಾಯಣ ಧಾರಾವಾಹಿಯಲ್ಲಿ ಅಸ್ಲಾಂ ಖಾನ್‌ ಒಂದಲ್ಲ ಎರಡಲ್ಲ 11 ಪಾತ್ರದಲ್ಲಿ ಮಿಂಚಿದ್ದಾರೆ.

ಇವರು ಮೂಲತಃ ನಾಟಕ ಕಲಾವಿದ. ಇವರ ನಟನಾ ಪ್ರತಿಭೆ ರಾಮಾಯಣ ಸೀರಿಯಲ್‌ನಲ್ಲಿ ಅವಕಾಶ ದೊರಕುವಂತೆ ಮಾಡಿತ್ತು.

ನಜ್ಲೀನ್‌ ಖಾನ್‌: ಮಹಾಭಾರತದಲ್ಲಿ ಕುಂತಿ ಪಾತ್ರ ಮಾಡಿದ್ದಾರೆ.

ರಜಾಕ್‌ ಖಾನ್‌: ಮಹಾಭಾರತದಲ್ಲಿ ಘಟೋತ್ಕಚನ ಪಾತ್ರ ನಿರ್ವಹಿಸಿದ್ದಾರೆ. ಜನರು ಭಯಪಡುವಂತೆ ನಟಿಸಿದ್ದಾರೆ.

Appu biography: ಅಪ್ಪು ಜೀವನಚರಿತ್ರೆ, ಇದು ಪುನೀತ್‌ ರಾಜ್‌ಕುಮಾರ್‌ ಬದುಕಿನ ಕಥೆ