ಅಮೃತಧಾರೆ ಧಾರಾವಾಹಿಯಿಂದಲೇ ಹೊರಬಂದ್ರಾ ಮಹಿಮಾ? ತಿಂಗಳು ಕಳೆದರೂ ಪತ್ತೆಯಿಲ್ಲ
By Manjunath B Kotagunasi
Jan 11, 2025
Hindustan Times
Kannada
ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಿಂದಲೇ ಕಣ್ಮರೆಯಾಗಿದ್ದಾರೆ ಮಹಿಮಾ ಪಾತ್ರಧಾರಿ ಸಾರಾ ಅಣ್ಣಯ್ಯ
ಗೌತಮ್ ದಿವಾನ್ ತಂಗಿಯಾಗಿ ಮಹಿಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ಸಾರಾ ಅಣ್ಣಯ್ಯ
ಆರಂಭದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಂಡು ಜೀವ ಜತೆ ಮದುವೆ ಆದ ಬಳಿಕ ಮಹಿಮಾ ಬದಲಾಗಿದ್ದಳು
ಆದರೆ, ಇತ್ತೀಚಿನ ಕೆಲ ತಿಂಗಳಿಂದ ಮಹಿಮಾ ಪಾತ್ರವೇ ಸೀರಿಯಲ್‌ನಿಂದ ಕಣ್ಮರೆಯಾಗಿದೆ. ಹುಡುಕಾಡಿದರೂ ಅವರ ಎಂಟ್ರಿಯಾಗಿಲ್ಲ.
ಮಹಿಮಾ ಜತೆಗೆ ಪತಿ ಜೀವ ಪಾತ್ರವೂ ಇತ್ತೀಚಿನ ದಿನಗಳಲ್ಲಿ ಸ್ಕ್ರೀನ್‌ನಿಂದ ಮರೆಯಾಗಿವೆ
ಇದೆಲ್ಲವನ್ನು ಗಮನಿಸಿದ ವೀಕ್ಷಕರು, ಅಮೃತಧಾರೆ ಸೀರಿಯಲ್‌ನಿಂದಲೇ ಸಾರಾ ಹಿಂದೆ ಸರಿದರಾ ಎಂದೂ ಪ್ರಶ್ನೆ ಮಾಡುತ್ತಿದ್ದಾರೆ
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಿರುವ ಸಾರಾಗೆ, ಅಲ್ಲಿಯೂ ಈ ಬಗ್ಗೆ ಪ್ರಶ್ನೆಗಳು ತೂರಿಬಂದಿವೆ.
ಪಾತ್ರದ ಅಂತ್ಯದ ಬಗ್ಗೆ ವಾಹಿನಿಯಾಗಲಿ, ಸ್ವತಃ ಸಾರಾ ಆಗಲಿ ಈ ವರೆಗೂ ಸ್ಪಷ್ಟನೆ ನೀಡಿಲ್ಲ.
ಭೂಮಿಕಾ ತಂದೆ ಸದಾಶಿವ ಮನೆ ಗೃಹ ಪ್ರವೇಶದಲ್ಲಿ ಮಹಿಮಾ ಮತ್ತು ಜೀವ ಪಾತ್ರಗಳು ಮತ್ತೆ ಎದುರಾಗಬಹುದು ಎನ್ನಲಾಗುತ್ತಿದೆ
ಪೇರಳೆ ಎಲೆ ರಸ ಕುಡಿಯುವುದರ ಆರೋಗ್ಯ ಪ್ರಯೋಜನಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ