ಶಬರಿಮಲೆ ಮಕರ ಜ್ಯೋತಿ ದರ್ಶನ 2025: ಜ್ಯೋತಿ ಬೆಳಕಿನ ರಹಸ್ಯ ತಿಳಿಯಿರಿ

By Praveen Chandra B
Jan 14, 2025

Hindustan Times
Kannada

ಮಕರ ಜ್ಯೋತಿ ಎಂಬುದು ಪ್ರತಿ ವರ್ಷ ಜನವರಿ 14ರಂದು ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಾಲಾಧಾರಿಗಳು ಪೂಜಿಸುವ ಬೆಳಕಾಗಿದೆ. ಇದು ನಕ್ಷತ್ರದ ಬೆಳಕು ಎಂದು ಭಕ್ತರು ನಂಬುತ್ತಾರೆ. ಆದರೆ, ಅದು ಮಾನವ ನಿರ್ಮಿತ ಬೆಳಕು.

ಮಕರ ಜ್ಯೋತಿಯು ಮೂರು ಬಾರಿ ಪ್ರಜ್ವಲಿಸಿ ಮಿಣುಗಿ ಅದೃಶ್ಯವಾಗುತ್ತದೆ. ಮಕರ ಸಂಕ್ರಾಂತಿಯಂದು ಜ್ಯೋತಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಶಬರಿಮಲೆಯಲ್ಲಿ ನೆರೆಯುತ್ತಾರೆ. 

ಅಯ್ಯಪ್ಪ ಸ್ವಾಮಿ ತನ್ನ ಭಕ್ತರನ್ನು ಹರಸಲು ಜ್ಯೋತಿ ರೂಪದಲ್ಲಿ ಆಗಮಿಸುತ್ತಾರೆ ಎನ್ನುವುದು ಭಕ್ತರ ನಂಬಿಕೆ. ಜ್ಯೋತಿ ಕಂಡರೆ ಅಯ್ಯಪ್ಪಸ್ವಾಮಿಯನ್ನು ನೋಡಿದಂತೆ ಎಂದು ಭಕ್ತರು ನಂಬುತ್ತಾರೆ.

ಶಬರಿಮಲೆಯಿಂದ 4 ಕಿ.ಮೀ ದೂರದಲ್ಲಿರುವ ಪೊನ್ನಂಬಲೆಮೇಡುವಿನಿಂದ ಸಂಜೆ 06:00 ರಿಂದ ರಾತ್ರಿ 08:00ರ ನಡುವೆ ಈ ಬೆಳಕು ಕಾಣಿಸಿಕೊಳ್ಳುತ್ತದೆ. 

ಆರಂಭದಲ್ಲಿ ಇದು ಪೊನ್ನಂಬಲಮೇಡುವಿನಲ್ಲಿ ಮಕರಜ್ಯೋತಿಯ ದಿನದಂದು ಬುಡಕಟ್ಟು ಜನಾಂಗದವರು (ಮಲ ಅರಾಯ) ಮಾಡುವ ಪೂಜೆಯಾಗಿತ್ತು. 

ಈಗ  ಕೇರಳ ಸರ್ಕಾರವು ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಅರಣ್ಯ ಇಲಾಖೆಯ ಬೆಂಬಲದೊಂದಿಗೆ ಈ ಜ್ಯೋತಿ ಉರಿಸಲಾಗುತ್ತದೆ. 

ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿರುವ 'ಮಕರವಿಳಕ್ಕು' ಮಾನವ ನಿರ್ಮಿತವಾಗಿದೆ ಎಂದು ಕೇರಳ ಹೈಕೋರ್ಟ್‌ಗೆ ಟ್ರಾವಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ದೃಢಪಡಿಸಿದೆ. 

ಇಂದು ಮಕರ ಸಂಕ್ರಾಂತಿ. ಜ್ಯೋತಿ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಶಬರಿಮಲೆಯಲ್ಲಿದ್ದಾರೆ. 

ಮನೆಯಲ್ಲೇ ಈ ರೀತಿ ತಯಾರಿಸಿ ಬಿರಿಯಾನಿ ಮಸಾಲೆ