ಮನುಷ್ಯರನ್ನು ನುಂಗಬಲ್ಲ 5 ಅಪಾಯಕಾರಿ ಹಾವುಗಳು

By Jayaraj
Jun 10, 2024

Hindustan Times
Kannada

ಹಾವು ಕಂಡರೆ ಎಲ್ಲರೂ ಭಯಪಡುತ್ತಾರೆ. ಪ್ರಪಂಚದಾದ್ಯಂತ ಸಾವಿರಾರು ಜಾತಿಯ ಹಾವುಗಳಿದ್ದರೂ, ಅವುಗಳಲ್ಲಿ ಕೆಲವು ಹಾವುಗಳು ಮಾತ್ರ ವಿಷಕಾರಿಯಾಗಿವೆ.

ಕೆಲವು ಹಾವುಗಳು ತುಂಬಾ ವಿಷಪೂರಿತವಾಗಿದ್ದರೆ, ಕೆಲವು ಹಾವುಗಳು ಜೀವಂತವಾಗಿ ಇತರ ಜೀವಿಗಳನ್ನು ನುಂಗುವ ಶಕ್ತಿ ಹೊಂದಿರುತ್ತವೆ.

ಪ್ರಾಣಿ ಅಥವಾ ಮನುಷ್ಯರನ್ನು ಜೀವಂತವಾಗಿ ನುಂಗುವ ಹಾವುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ತುಂಬಾ ಶಕ್ತಿಯುತವಾಗಿರುತ್ತವೆ.

ಒಂದೇ ಬಾರಿಗೆ ವ್ಯಕ್ತಿಯನ್ನು ನುಂಗುವ ಶಕ್ತಿ ಇರುವ 5 ಅಪಾಯಕಾರಿ ಹಾವುಗಳ ಬಗ್ಗೆ ತಿಳಿಯೋಣ.

ಆಫ್ರಿಕನ್ ರಾಕ್ ಹೆಬ್ಬಾವು: ಇದರ ಉದ್ದ ಸುಮಾರು 14 ಅಡಿ ಇರುತ್ತದೆ. ಈ ಹಾವು ಮನುಷ್ಯ ಅಥವಾ ಪ್ರಾಣಿಯನ್ನು ನುಂಗಬಲ್ಲ ಸಾಮರ್ಥ್ಯ ಹೊಂದಿದೆ.

ಬರ್ಮೀಸ್ ಹೆಬ್ಬಾವು: ಇದರ ಬಾಯಿ ದೊಡ್ಡದಾಗಿರುತ್ತದೆ. ಉದ್ದ ಕೂಡಾ ಸುಮಾರು 5 ಮೀಟರ್ ಇರುತ್ತದೆ. ಈ ಹೆಬ್ಬಾವು ಯಾವುದೇ ಪ್ರಾಣಿ ಅಥವಾ ಮನುಷ್ಯರನ್ನು ನುಂಗಬಲ್ಲದು.

ಹಸಿರು ಅನಕೊಂಡ: ವಿಶ್ವದ ದೈತ್ಯ ಹಾವುಗಳಲ್ಲಿ ಒಂದಾದ ಹಸಿರು ಅನಕೊಂಡ ದಕ್ಷಿಣ ಅಮೆರಿಕಾದಲ್ಲಿ ಕಂಡುಬರುತ್ತದೆ. ಈ ಹಾವು ಮನುಷ್ಯರ ಮೇಲೆ ದಾಳಿ ಮಾಡುತ್ತವೆ.

ಭಾರತೀಯ ರಾಕ್ ಹೆಬ್ಬಾವು: ಮಾನವನನ್ನು ಜೀವಂತವಾಗಿ ನುಂಗುವ ಶಕ್ತಿ ಹೊಂದಿದೆ. ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಈ ಹಾವಿನ ಉದ್ದ ಸುಮಾರು 20 ಅಡಿ.

ರೆಟಿಕ್ಯುಲೇಟೆಡ್ ಹೆಬ್ಬಾವು: ಈ ರೆಟಿಕ್ಯುಲೇಟೆಡ್ ಪೈಥಾನ್ ಹಾವಿನ ಉದ್ದ ಸುಮಾರು 29 ಅಡಿ. ಈ ಹಾವು ಹೆಚ್ಚಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತದೆ.

ಬಾದಾಮಿ ಗೊಂದ್ ಮೊಸರಿನೊಂದಿಗೆ ಬೆರೆಸಿ ತಿಂದರೆ ಆರೋಗ್ಯಕ್ಕೆ ಈ 5 ಲಾಭ