ಈ ಪ್ರಮುಖ ದೇಶಗಳಲ್ಲಿ ಇಂದಿಗೂ ರೈಲು ಸೇವೆ ಇಲ್ಲ, ಕಾರಣ ಇಷ್ಟೇ

By Raghavendra M Y
Nov 02, 2024

Hindustan Times
Kannada

ಭಾರತದಲ್ಲಿ ಇಂದಿಗೂ ದೂರದ ಪ್ರಯಾಣದ ವಿಷಯಕ್ಕೆ ಬಂದರೆ ಹೆಚ್ಚಿನ ಜನರು ರೈಲಿಗೆ ಮೊದಲ ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ಇಲ್ಲಿನ ರೈಲು ಜಾಲವನ್ನು ಲೈಫ್ ಲೈನ್ ಎನ್ನುತ್ತಾರೆ

ಆದರೆ ಜಗತ್ತಿನ ಕೆಲವು ಪ್ರಮುಖ ದೇಶಗಳಲ್ಲಿ ರೈಲು ವ್ಯವಸ್ಥೆಯೇ ಇಲ್ಲ. ಇದು ಅಚ್ಚರಿ ಎನಿಸದರೂ ಸತ್ಯ

ಭೂತಾನ್: ಗುಡ್ಡಗಾಡು ಪ್ರದೇಶ ಮತ್ತು ಕಡಿಮೆ ಜನ ಸಂಖ್ಯೆಯ ಕಾರಣ ಭೂತಾನ್‌ನಲ್ಲಿ ರೈಲು ಸೇವೆಯ ಬದಲಿಗೆ ರಸ್ತೆ ಸಾರಿಗೆ ಪ್ರಚಲಿತವಾಗಿದೆ

ಐಸ್‌ಲ್ಯಾಂಡ್: ಜ್ವಾಲಾಮುಖಿ ಚಟುವಟಿಕೆ ಮತ್ತು ದಟ್ಟವಾದ ಜನಸಂಖ್ಯೆಯ ಕೊರತೆಯಿಂದಾಗಿ ಇಲ್ಲಿ ಯಾವುದೇ ರೈಲು ಸೇವೆಗಳು ಇಲ್ಲ

ಮಾಲ್ಡೀವ್ಸ್: ಸಮುದ್ರ ದೀಪಗಳ ದೇಶವಾಗಿರುವ ಮಾಲ್ಡೀವ್ಸ್‌ನಲ್ಲಿ ರೈಲು ಮಾರ್ಗದ ಸಾಧ್ಯತೆಯೇ ಇಲ್ಲ

ಅಂಡೋರಾ: ಯುರೋಪಿನ ಚಿಕ್ಕ ದೇಶವಾದ ಅಂಡೋರಾದ ಜನ ರೈಲು ಸೇವೆಗಳಿಂದ ವಂಚಿತರಾಗಿದ್ದಾರೆ. ಇಲ್ಲಿ ರಸ್ತೆ ಮಾರ್ಗ ಹೆಚ್ಚು ಪ್ರಚಲಿತದಲ್ಲಿದೆ

ಲಿಬಿಯಾ: ಇಲ್ಲಿ ಒಂದು ಕಾಲದಲ್ಲಿ ರೈಲು ಮಾರ್ಗಗಳಿದ್ದವು. ಆದರೆ ಅಂತರ್ಯುದ್ಧದ ಸಮಯದಲ್ಲಿ ರೈಲು ಮಾರ್ಗವನ್ನು ಕಿತ್ತುಹಾಕಲಾಗಿದೆ

ಕುವೈತ್: ತೈಲ ರಾಷ್ಟ್ರ ಕುವೈತ್ ಇನ್ನೂ ಬಲವಾದ ರೈಲು ಜಾಲವನ್ನು ಹೊಂದಿಲ್ಲ

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna