ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರಸಿದ್ಧ ಘೋಷ ವಾಕ್ಯಗಳು

Pinterest

By Priyanka Gowda
Jan 23, 2025

Hindustan Times
Kannada

ನೇತಾಜಿ ಸುಭಾಷ್ ಚಂದ್ರ ಬೋಸ್ ಜನವರಿ 23, 1897 ರಂದು ಒಡಿಶಾದ ಕಟಕ್‍ನಲ್ಲಿ ಜನಿಸಿದರು. ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮದಿನ. ಇಲ್ಲಿದೆ ಅಪ್ರತಿಮ ದೇಶಪ್ರೇಮಿ ಬೋಸ್ ಅವರ ಪ್ರಸಿದ್ಧ ಘೋಷವಾಕ್ಯಗಳು.

Pinterest

“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ.” ಸ್ವಾತಂತ್ರ್ಯ ಚಳವಳಿಯ ವೇಳೆ ಸುಭಾಷ್ ಚಂದ್ರ ಬೋಸ್ ಮಾಡಿದ್ದ ಸಿಡಿಲಬ್ಬರದ ಭಾಷಣದ ಘೋಷವಾಕ್ಯ ಇದು.

Pinterest

“ನಮ್ಮ ಸ್ವಾತಂತ್ರ್ಯವನ್ನು ನಮ್ಮ ರಕ್ತದಿಂದ ಪಾವತಿಸುವುದು ನಮ್ಮ ಕರ್ತವ್ಯ. ನಮ್ಮ ತ್ಯಾಗ ಮತ್ತು ಪರಿಶ್ರಮದ ಮೂಲಕ ನಾವು ಗೆಲ್ಲುವ ಸ್ವಾತಂತ್ರ್ಯವನ್ನು, ನಮ್ಮ ಸ್ವಂತ ಶಕ್ತಿಯಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.”

Pinterest

“ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆದುಕೊಳ್ಳಬೇಕು.”

Pinterest

“ಯಾವುದೇ ಹೋರಾಟ ಇಲ್ಲದ, ಯಾವುದೇ ಸವಾಲು, ಅಪಾಯಗಳನ್ನು ಎದುರಿಸದೇ ಇದ್ದರೆ ಬದುಕಿನ ಮೇಲೆ ಇರುವ ಅರ್ಧದಷ್ಟು ಆಸಕ್ತಿ ಹೊರಟು ಹೋಗುತ್ತೆ.”

Pinterest

“ಅನ್ಯಾಯವನ್ನು ಸಹಿಸಿಕೊಳ್ಳುವುದು, ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧ.”

Pinterest

“ನಮ್ಮ ಸೀಮಿತ ತಿಳಿವಳಿಕೆಗೆ ಮೀರಿದ್ದು ವಾಸ್ತವ. ಅದೇನೇ ಇದ್ದರೂ, ಗರಿಷ್ಠ ಸತ್ಯವನ್ನೊಳಗೊಂಡ ಸಿದ್ಧಾಂತದ ಮೇಲೆ ನಮ್ಮ ಜೀವನ ರೂಪಿಸಬೇಕು.”

Pinterest

“ಹಕ್ಕುಗಳ ನಿಜವಾದ ಮೂಲ ಕರ್ತವ್ಯ. ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ, ಹಕ್ಕುಗಳನ್ನು ಹುಡುಕುವುದು ಹೆಚ್ಚು ದೂರವಿಲ್ಲ.”

Pinterest

“ನಾವು ಧೈರ್ಯ ಮತ್ತು ಸಹಿಸಿಕೊಳ್ಳುವ ಧೈರ್ಯವನ್ನು ಹೊಂದಿರಬೇಕು.”

Pinterest

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File