ಜೂ.ಎನ್‌ಟಿಆರ್ ನಟನೆಯ ದೇವರ ಚಿತ್ರದ ಸ್ವಾರಸ್ಯಕರ ಸಂಗತಿಗಳು
By Jayaraj Sep 25, 2024
Hindustan Times Kannada
ಜೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ದೇವರ
ದೇವರ ಸಿನಿಮಾವು ಆಕ್ಷನ್ ಚಿತ್ತವಾಗಿದ್ದು, ತಂದೆ-ಮಗನ ಕಥೆಯಾಗಿದೆ. ಜೂನಿಯರ್ ಎನ್‌ಟಿಆರ್ ಡಬಲ್ ಆಕ್ಟಿಂಗ್ ಮಾಡಿದ್ದಾರೆ.
ಈ ಚಿತ್ರದ ಮೂಲಕ ದಕ್ಷಿಣ ಭಾರತ ಸಿನಿರಂಗಕ್ಕೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಜಾಹ್ನವಿ ಕಪೂರ್ ಕಾಲಿಟ್ಟಿದ್ದಾರೆ.
ದೇವರ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಹೆಚ್ಚುತ್ತಿದೆ. ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಜೂ ಎನ್‌ಟಿಆರ್, "ದೇವರ ಚಿತ್ರಕ್ಕಾಗಿ ನೀವು ಕಾಯುವುದು ಸಾರ್ಥಕವಾಗುತ್ತದೆ ಎಂಬುದು ನನ್ನ ಭರವಸೆ" ಎಂದು ಹೇಳಿದ್ದಾರೆ.
ದೇವರ ಚಿತ್ರದ ಕಥೆ ಸಂಪೂರ್ಣ ಕಾಲ್ಪನಿಕ. ಎಲ್ಲಿಯೂ ನೈಜ ಘಟನೆಗಳನ್ನು ಆಧರಿಸಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.
ಅತಿಯಾದ ಧೈರ್ಯ ಮನುಷ್ಯನಿಗೆ ಒಳ್ಳೆಯದಲ್ಲ. ಪ್ರತಿಯೊಬ್ಬರಲ್ಲೂ ಭಯ ಇರುತ್ತದೆ. ಅದನ್ನು ಗೌರವಿಸಬೇಕು ಎಂಬುದನ್ನು ದೇವರ ಕಥೆ ಹೇಳುತ್ತದೆ.
ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ ನಿರ್ಮಾಣ ಮಾಡಿದ್ದಾರೆ.
ಚಿತ್ರದ ಆಕ್ಷನ್ ದೃಶ್ಯಗಳಿಗಾಗಿ ಬರೋಬ್ಬರಿ 38 ದಿನಗಳ ಕಾಲ ನೀರಿನಲ್ಲಿ ಚಿತ್ರೀಕರಿಸಲಾಗಿದೆ.
'ದೇವರ' ಚಿತ್ರವು ಸೆಪ್ಟೆಂಬರ್ 27ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.