ಕಲ್ಕಿ 2898 ಎಡಿ: ಉತ್ತರ-ದಕ್ಷಿಣ ಭಾರತದ ಕಲಾವಿದರು ಒಗ್ಗೂಡಿ ರೂಪಿಸಿದ ಅದ್ಭುತ ಸಿನಿಮಾಗಳಿವು

By Reshma
Jun 27, 2024

Hindustan Times
Kannada

ಬಹುತಾರಾಗಣ ಕಲ್ಕಿ 2892 ಎಡಿ ಸಿನಿಮಾ ಇಂದು ಬಿಡುಗಡೆಯಾಗಿದೆ. ಮೊದಲ ದಿನದ ಮುಂಗಡ ಬುಕ್ಕಿಂಗ್‌ನಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ ಪ್ರಭಾಸ್‌ ಅಭಿನಯದ ಈ ಸಿನಿಮಾ. 

ಈ ಸಿನಿಮಾದಲ್ಲಿ ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಸೇರಿದಂತೆ ಹಲವು ಉತ್ತರ ಹಾಗೂ ದಕ್ಷಿಣದ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾ ಅಲ್ಲದೇ ದಕ್ಷಿಣ-ಉತ್ತರ ಭಾರತದ ನಟರು ಒಟ್ಟಾಗಿ ನಟಿಸಿರುವ ಸಿನಿಮಾಗಳಿವು.

ಸಲ್ಮಾನ್‌ ನಟನೆಯ ಸಿಖಂದರ್‌ ಸಿನಿಮಾ ಕೂಡ ಈ ಸಾಲಿಗೆ ಸೇರುತ್ತದೆ. ಇದರಲ್ಲಿ ಸಲ್ಲು ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. 

ದಕ್ಷಿಣ ಭಾರತದ ಮುಂದಿನ ಬಹುನಿರೀಕ್ಷಿತ ಸಿನಿಮಾ ದೇವರ. ಇದ್ರಲ್ಲಿ ಎನ್‌ಟಿಆರ್‌ ಜೊತೆಗೆ ಬಾಲಿವುಡ್‌ನ ಸೈಫ್‌ ಅಲಿ ಖಾನ್‌ ಹಾಗೂ ಜಾಹ್ನವಿ ಕಪೂರ್‌ ಬಣ್ಣ ಹಚ್ಚಿದ್ದಾರೆ. 

ಸೂರ್ಯ ನಟನೆಯ ಕಂಗುವಾ ಚಿತ್ರದಲ್ಲೂ ದಿಶಾ ಪಟಾನಿ ಹಾಗೂ ಬಾಬಿ ಡಿಯೋಲ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. 

ಜೂನಿಯರ್‌ ಎನ್‌ಟಿಆರ್‌, ರಾಮ್‌ಚರಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಆರ್‌ಆರ್‌ಆರ್‌ ಸಿನಿಮಾದಲ್ಲಿ ಆಲಿಯಾ ಭಟ್‌ ಹಾಗೂ ಅಜಯ್‌ ದೇವಗನ್‌ ಕೂಡ ನಟಿಸಿದ್ದರು. 

ಇತ್ತೀಚಿನ ಬಡೇಮಿಯಾ ಚೋಟೆಮಿಯಾ ಸಿನಿಮಾದಲ್ಲಿ ಮಲಯಾಳಂನ ಪ್ರಥ್ವಿರಾಜ್‌ ಜೊತೆ ಅಕ್ಷಯ್‌ ಕುಮಾರ್‌ ಹಾಗೂ ಟೈಗರ್‌ ಶ್ರಾಫ್‌ ನಟಿಸಿದ್ದರು. 

ರಜನಿಕಾಂತ್‌ ನಟನೆ 2.0 ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ ಖಳನಟನಾಗಿ ನಟಿಸಿದ್ದರು.

ದಕ್ಷಿಣ ಭಾರತದ ಜ್ಯೋತಿಕಾ, ಮಾಧವನ್‌ ನಟನೆಯ ಸೈತಾನ್‌ ಸಿನಿಮಾದಲ್ಲಿ ಅಜಯ್‌ ದೇವಗನ್‌ ಕೂಡ ನಟಿಸಿದ್ದರು. 

ಪ್ರಭಾಸ್‌ ನಟನೆಯ ಆದಿಪುರುಷ್‌ ಸಿನಿಮಾದಲ್ಲಿ ಸೈಫ್‌ ಅಲಿ ಖಾನ್‌, ಕೃತಿ ಸನೋನ್‌ ಮೊದಲಾದವರು ನಟಿಸಿದ್ದರು. 

ಮಳೆಗಾಲದಲ್ಲಿ ಸೊಪ್ಪು ತಿಂದರೆ ಆರೋಗ್ಯಕ್ಕೆ ಅನುಕೂಲವೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು