ಪುಷ್ಪ 2 ಚಿತ್ರಕ್ಕೆ ಅಲ್ಲು ಅರ್ಜುನ್-ರಶ್ಮಿಕಾ ಪಡೆದ ಸಂಭಾವನೆ ಇಷ್ಟು
By Jayaraj
Dec 05, 2024
Hindustan Times
Kannada
ಡಿಸೆಂಬರ್ 5ರಂದು ಪುಷ್ಪ 2 ಚಿತ್ರ ವಿಶ್ವದಾದ್ಯಂತ ತೆರೆಕಂಡಿದೆ. ಮೊದಲ ದಿನದಂದೇ 270 ಕೋಟಿ ರೂಪಾಯಿಗೂ ಅಧಿಕ ಗಳಿಸುವ ನಿರೀಕ್ಷೆಯಿದೆ.
ಚಿತ್ರದ ನಾಯಕ ನಟ ಅಲ್ಲು ಅರ್ಜುನ್, ಈ ಚಿತ್ರಕ್ಕೆ ಭರ್ಜರಿ 300 ಕೋಟಿ ರೂ ಸಂಭಾವನೆ ಪಡೆದಿದ್ದಾರೆ.
ಇದರೊಂದಿಗೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರಂತಹ ಸೆಲೆಬ್ರಿಟಿಗಳನ್ನು ಮೀರಿಸಿ, ಪ್ರಸ್ತುತ ಭಾರತದ ಅತ್ಯಂತ ದುಬಾರಿ ನಟರಾಗಿದ್ದಾರೆ.
ಚಿತ್ರದಲ್ಲಿನ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ 10 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.
ಪುಷ್ಪ 2: ದಿ ರೂಲ್‌ನಲ್ಲಿ ನ್ಯಾಷನಲ್ ಕ್ರಶ್ ಮತ್ತೆ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಮತ್ತೋರ್ವ ಪ್ರಮುಖ ನಟ ಫಹದ್ ಫಾಸಿಲ್ ತಮ್ಮ ಪಾತ್ರಕ್ಕಾಗಿ 8 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
ಅವರು ಚಿತ್ರದ ಸೀಕ್ವೆಲ್‌ನಲ್ಲಿ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರವನ್ನು ಪುನರಾವರ್ತಿಸಿದ್ದಾರೆ.
ಪುಷ್ಪ ಚಿತ್ರದಲ್ಲಿನ ತಮ್ಮ ಡ್ಯಾನ್ಸ್‌ಗಾಗಿ ನಟಿ ಶ್ರೀಲೀಲಾ 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
ಮಹಾ ಕುಂಭಮೇಳ ಮುಗಿದ ನಂತರ ನಾಗಾ ಸಾಧುಗಳು ಎಲ್ಲಿಗೆ ಹೋಗುತ್ತಾರೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ