ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ
By Reshma Dec 05, 2024
Hindustan Times Kannada
ಪ್ರಪಂಚದಾದ್ಯಂತ ಪುಷ್ಪ 2 ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ
ಈ ಸಿನಿಮಾದ ನಾಯಕ ಅಲ್ಲು ಅರ್ಜುನ್ ತಮ್ಮ ಸ್ಟೈಲಿಶ್ ನೋಟ ಮಾತ್ರವಲ್ಲ ಫಿಟ್‌ನೆಸ್ ಕಾರಣದಿಂದಲೂ ಗಮನ ಸೆಳೆಯುತ್ತಾರೆ
ಉತ್ತಮ ನಟನಾ ಕೌಶಲದ ಜೊತೆಗೆ ಅದ್ಭುತ ಮೈಕಟ್ಟನ್ನೂ ಹೊಂದಿರುವ ಅಲ್ಲು ಅರ್ಜುನ್ ತಮ್ಮ ಡಯೆಟ್ ಹಾಗೂ ಫಿಟ್‌ನೆಸ್ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ
ಇವರು ತಮ್ಮ ಜಿಮ್ ಸೆಷನ್ ಆರಂಭಿಸುವ ಮೊದಲು ಪ್ರತಿದಿನ ಬೆಳಿಗ್ಗೆ 45 ನಿಮಿಷಗಳ ಕಾಲ ರನ್ನಿಂಗ್ ಮಾಡುತ್ತಾರೆ
ದೇಹಾಕೃತಿ ಸುಂದರವಾಗಿರಲು ಸೈಕ್ಲಿಂಗ್ ಸಹಾಯ ಮಾಡುತ್ತೆ ಎನ್ನುವ ಅವರು ಕಾಲು ಹಾಗೂ ಮೊಣಕಾಲಿನ ಆರೋಗ್ಯಕ್ಕಾಗಿ ಸೈಕ್ಲಿಂಗ್ ಮಾಡುವುದನ್ನು ಪರಿಗಣಿಸುತ್ತಾರೆ
ಇವರು ತಮ್ಮ ಜಿಮ್ ದಿನಚರಿಯಲ್ಲಿ ಪುಷ್‌ಅಪ್, ಪುಲ್ ಅಪ್, ಸ್ಕ್ವಾಟ್‌ಗಳು, ಡಿಪ್ಸ್, ಕ್ರಂಚಸ್‌ಗಳನ್ನು ಮಾಡುತ್ತಾರೆ. ಇವರು ಪ್ರತಿದಿನ 2 ಗಂಟೆಗಳ ಕಾಲ ಜಿಮ್‌ನಲ್ಲಿ ಬೆವರಿಳಿಸುತ್ತಾರೆ
ಇವರು ಶೂಟಿಂಗ್ ನಡುವಿನ ಬ್ರೇಕ್‌ನಲ್ಲಿ ಒಣ ಹಣ್ಣು, ಬೀಜಗಳನ್ನು ಸೇವಿಸುತ್ತಾರೆ. ದೇಹವನ್ನು ಫಿಟ್ ಹಾಗೂ ಹೈಡ್ರೇಟ್ ಆಗಿರಲು ಎಳನೀರು ಕುಡಿಯುತ್ತಾರೆ
ಪ್ರತಿದಿನ ಬೆಳಿಗ್ಗೆ ಎಳನೀರಿನ ಜೊತೆ ಒಂದು ಬೌಲ್ ಸಿರಲ್ಸ್ ಅಥವಾ ಹಣ್ಣು ಸೇವಿಸುತ್ತಾರೆ
ಇವರು ತಮ್ಮ ಊಟದಲ್ಲಿ ಬ್ರೌನ್ ರೈಸ್‌ನೊಂದಿಗೆ ಬೇಳೆ, ತರಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಜೊತೆಗೆ ಪ್ರೊಟೀನ್ ಅಥವಾ ಫ್ರೂಟ್ಸ್ ಶೇಕ್ಸ್ ಕುಡಿಯುತ್ತಾರೆ
ರಾತ್ರಿ ಲಘಭೋಜನಕ್ಕೆ ಆದ್ಯತೆ ನೀಡುವ ಇವರು ಊಟದಲ್ಲಿ ಬ್ರೌನ್ ರೈಸ್ ಜೊತೆ ಸಲಾಡ್, ಬೀನ್ಸ್ ಅಥವಾ ಬೇಯಿಸಿದ ತರಕಾರಿ ತಿನ್ನುತ್ತಾರೆ
42ರ ವಯಸ್ಸಿನಲ್ಲಿ 25ರ ಯುವಕನಂತೆ ಕಾಣುವ ಅಲ್ಲು ಅರ್ಜುನ್ ಫಿಟ್‌ನೆಸ್ ಸೀಕ್ರೆಟ್ ಹೀಗಿದೆ. ಇದು ನಿಮಗೂ ಸ್ಪೂರ್ತಿಯಾಗಬಹುದು ಗಮನಿಸಿ