1. ಗೋಲ್ಡನ್ ರಿಟ್ರೈವರ್ಸ್: ಅತ್ಯಂತ ನಂಬಿಕಸ್ಥ ಶ್ವಾನ. ಇದು ಸಾಮಾನ್ಯವಾಗಿ 25 ರಿಂದ 35 ಕೆಜಿ ತೂಕ ಹೊಂದುತ್ತದೆ. ಇದು ಭಾರತದ ಜನಪ್ರಿಯ ಶ್ವಾನ ತಳಿಗಳಲ್ಲಿ ಒಂದು.
2. ಲ್ಯಾಬ್ರಾಡರ್: 10 ರಿಂದ 12 ವರ್ಷಗಳ ಕಾಲ ಜೀವಿತಾವಧಿ ಹೊಂದಿರುವ ಲ್ಯಾಬ್ರಾಡರ್, ಮನುಷ್ಯರೊಂದಿಗೆ ಫ್ರೆಂಡ್ಲಿಯಾಗಿರುತ್ತದೆ. ಇದು ಭಾರತೀಯರು ಸಾಕಲು ಸೂಕ್ತವಾಗಿದೆ.
3. ಜರ್ಮನ್ ಶೆಫರ್ಡ್: ಬೆದರಿಸುವ ಮತ್ತು ತೋಳದಂತಹ ನೋಟದ ಹೊರತಾಗಿಯೂ ನಂಬಲಾಗದಷ್ಟು ಪ್ರೀತಿ ತೋರಿಸುವ ಶ್ವಾನ ಇದು. 25 ರಿಂದ 35 ಕೆಜಿ ತೂಕವಾಗುವ ಈ ಶ್ವಾನ ಭಾರತೀಯರ ಫೇವರಿಟ್ ಕೂಡ ಹೌದು.
4. ಬೀಗಲ್ಸ್: ಬುದ್ದಿವಂತಿಕೆ ಮತ್ತು ಸ್ನೇಹಪರತೆಗೆ ಹೆಸರುವಾಗಿಯಾಗಿದೆ. ಇದು ಭಾರತದಲ್ಲಿ ಅಚ್ಚುಮೆಚ್ಚಿನ ಸಾಕು ಪ್ರಾಣಿ.
5. ಪಗ್: 11 ರಿಂದ 16 ಕೆಜಿ ತೂಕವಾಗುವ ಪಗ್, ಭಾರತದಲ್ಲಿ ಸಾಕಷ್ಟು ಮಂದಿನ ನೆಚ್ಚಿನ ಸಾಕು ಪ್ರಾಣಿಯಾಗಿದೆ.