ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳು

By Praveen Chandra B
Jan 26, 2025

Hindustan Times
Kannada

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿರುವ ಹತ್ತು ಸಿನಿಮಾಗಳ ವಿವರ ಪಡೆಯೋಣ.

ವಿಡುದಲೈ ಪಾರ್ಟ್‌ 2

ಕಾಲಿವುಡ್‌ ಸಿನಿಮಾರಂಗದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ಸಿನಿಮಾ  ʼವಿಡುದಲೈ ಪಾರ್ಟ್‌ 2ʼ. ವಿಜಯ್‌ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಐ ವಾಂಟ್‌ ಟು ಟಾಕ್‌

ಅಭಿಷೇಕ್‌ ಬಚ್ಚನ್‌ ನಟನೆಯ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಟಾಪ್‌ 2ನಲ್ಲಿದೆ.

ದಿ ಕ್ಲಿಲ್ಲರ್ಸ್‌ ಗೇಮ್‌

ಈ ಅಮೆರಿಕದ ಚಿತ್ರ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿ ಟಾಪ್‌ 3 ಸ್ಥಾನದಲ್ಲಿದೆ.

ಸಿಂಗಂ ಅಗೇನ್‌

ಬಾಲಿವುಡ್‌ ನಿರ್ದೇಶಕ ರೋಹಿತ್‌ ಶೆಟ್ಟಿ ನಿರ್ದೇಶನದ ಸಿನಿಮಾ ಸಿಂಗಮ್‌ ಅಗೇನ್‌. ಬಹುತಾರಾಗಣದ ಈ ಸಿನಿಮಾದಲ್ಲಿ ಅಜಯ್‌ ದೇವಗನ್‌ ಜತೆಗೆ, ಅಕ್ಷಯ್‌ ಕುಮಾರ್, ರಣವೀರ್‌ ಸಿಂಗ್‌, ಟೈಗರ್‌ ಶ್ರಾಫ್‌, ದೀಪಿಕಾ ಪಡುಕೋಣೆ  ಮುಂತಾದವರು ನಟಿಸಿದ್ದಾರೆ.

ವಿಡುದಲ ಪಾರ್ಟ್‌ 2 

ವಿಜಯ ಸೇತುಪತಿ ಸಿನಿಮಾದ ತೆಲುಗು ಆವೃತ್ತಿಯು ಅಗ್ರ ಐದನೇ ಸ್ಥಾನದಲ್ಲಿದೆ.

ಮಿಸ್‌ ಯು

ಈ ತಮಿಳು ಸಿನಿಮಾ ಅಗ್ರ 6ನೇ ಸ್ಥಾನದಲ್ಲಿದೆ.  ಈ ತಮಿಳು ಸಿನಿಮಾದಲ್ಲಿ ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಆನಂದ್‌ ಶ್ರೀಬಾಲಾ, ಬಚ್ಚಲ ಮಲ್ಲಿ, ವಿಡುದಲ  ಪಾರ್ಟ್‌ 1 ಕ್ರಮವಾಗಿ ಏಳು, ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿವೆ.

ಅಲಂಗು ಸಿನಿಮಾ ಹತ್ತನೇ ಸ್ಥಾನದಲ್ಲಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದಾದಾರರು ಈ ಸಿನಿಮಾಗಳಲ್ಲಿ ನಿಮಗೆ ಇಷ್ಟವಾದ ಸಿನಿಮಾ ನೋಡಬಹುದು.

ಇಲ್ಲಿದೆ ಅತ್ಯುತ್ತಮ ಕನ್ನಡ ರೋಮ್ಯಾಂಟಿಕ್ ಸಿನಿಮಾಗಳ ಪಟ್ಟಿ