ದರ 7 ಲಕ್ಷ ರೂಗಿಂತ ಕಡಿಮೆ, ಮೈಲೇಜ್‌ ಅತ್ಯಧಿಕ; ಇಲ್ಲಿವೆ ಟಾಪ್‌ 5 ಕಾರುಗಳು

By Praveen Chandra B
Dec 26, 2024

Hindustan Times
Kannada

7 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಮೈಲೇಜ್ ಹೊಂದಿರುವ ಕಾರುಗಳು ಇಲ್ಲಿವೆ

ಮಾರುತಿ ಸುಜುಕಿ ಸ್ವಿಫ್ಟ್: ಇದು ಪ್ರತಿ ಕೆ.ಜಿ. ಸಿಎನ್‌ಜಿಗೆ 32.85 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು  ನೀಡುತ್ತದೆ. 

ಮಾರುತಿ ಸ್ವಿಫ್ಟ್ ಕಾರಿನ  ಎಕ್ಸ್ ಶೋರೂಂ ದರ 6.49 ಲಕ್ಷ ರೂ ಆಸುಪಾಸಿನಲ್ಲಿದೆ. 

ಟಾಟಾ ಟಿಯಾಗೊ: ಇದು ಪ್ರತಿ ಕೆ.ಜಿ.  ಸಿಎನ್‌ಜಿಗೆ 28.06 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು ನೀಡುತ್ತದೆ. 

ಟಾಟಾ ಟಿಯಾಗೊ ಕಾರಿನ  ಎಕ್ಸ್ ಶೋರೂಂ ದರ 4.99 ಲಕ್ಷ ರೂ ಆಸಪಾಸಿನಲ್ಲಿದೆ. 

ರೆನಾಲ್ಟ್ ಕ್ವಿಡ್ : ಇದು 22.3 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು ನೀಡುತ್ತದೆ. 

ರೆನಾಲ್ಟ್ ಕ್ವಿಡ್ ಕಾರಿನ ಎಕ್ಸ್ ಶೋರೂಂ ದರ 4.69 ಲಕ್ಷ ರೂನಿಂದ ಆರಂಭವಾಗುತ್ತದೆ. 

ಮಾರುತಿ ಸುಜುಕಿ ವ್ಯಾಗನಾರ್:‌ ಇದು ಪ್ರತಿ ಕೆ.ಜಿ.ಗೆ 34.05 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು ನೀಡುತ್ತದೆ. ಪೆಟ್ರೋಲ್‌ ಕಾರಿನ ಮೈಲೇಜ್‌ ಕೂಡ ಉತ್ತಮವಾಗಿದೆ. 

ವ್ಯಾಗನಾರ್‌ ಕಾರಿನ ಎಕ್ಸ್ ಶೋರೂಂ ದರ 5.54 ಲಕ್ಷ ರೂನಿಂದ ಆರಂಭವಾಗುತ್ತದೆ. 

ಹ್ಯುಂಡೈ ಎಕ್ಸ್‌ಟರ್‌: ಪ್ರತಿ ಕೆ.ಜಿ. ಸಿಎನ್‌ಜಿಗೆ 27.1 ಕಿ.ಮೀ ವರೆಗೆ ಇಂಧನ ದಕ್ಷತೆಯನ್ನು ನೀಡುತ್ತದೆ. 

ಹ್ಯುಂಡೈ ಎಕ್ಸ್‌ಟರ್‌ ಕಾರಿನ  ಎಕ್ಸ್ ಶೋರೂಂ ದರ 5.99 ಲಕ್ಷ ರೂನಿಂದ ಆರಂಭವಾಗುತ್ತದೆ.

ಸಂಜು ಸ್ಯಾಮ್ಸನ್ ವಿರುದ್ಧ ಬಿಸಿಸಿಐ ಅಸಮಾಧಾನ