2025ರಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತವಾದ 5 ಬೆಸ್ಟ್ ಲ್ಯಾಪ್‌ಟಾಪ್‌ಗಳು
Pexels
By Praveen Chandra B Jan 09, 2025
Hindustan Times Kannada
ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ನಿಮ್ಮ ನಿರ್ದಿಷ್ಟ ಕಲಿಕಾ ಅವಶ್ಯಕತೆ ಗಮನದಲ್ಲಿಟ್ಟುಕೊಂಡು ಲ್ಯಾಪ್‌ಟಾಪ್ ಖರೀದಿಸಬೇಕು. ಕಾರ್ಯಕ್ಷಮತೆ, ವಿನ್ಯಾಸ, ಬಜೆಟ್ ಇತ್ಯಾದಿ ಅಂಶಗಳ ಕಡೆಗೂ ಗಮನ ನೀಡಬೇಕು.
Pexels
ಆಪಲ್, ಲೆನೊವೊ, ಆಸುಸ್, ಎಂಎಸ್ಐ ಮತ್ತು ಎಚ್‌ಪಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗಳು ಇವೆ. ಈ ಕಂಪನಿಗಳು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಗೇಮರ್‌ಗಳ ಅವಶ್ಯಕತೆಗಳನ್ನು ಪೂರೈಸುವ ಲ್ಯಾಪ್‌ಟಾಪ್‌ಗಳನ್ನು ಹೊಂದಿವೆ.
Pexels
ಆಪಲ್ ಮ್ಯಾಕ್‌ಬುಕ್ ಏರ್: ಉತ್ತಮ ಕಾರ್ಯಕ್ಷಮತೆಯ ಈ ಲ್ಯಾಪ್‌ಟಾಪ್ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆ. ಎಂ 1 ಚಿಪ್ ಮತ್ತು 8-ಕೋರ್ ಸಿಪಿಯು ಹೊಂದಿದೆ. ಇದು ಸುಮಾರು 18 ಗಂಟೆಗಳ ಬ್ಯಾಟರಿ ಕ್ಷಮತೆ ಹೊಂದಿದೆ.
Apple
ಆಪಲ್ ಮ್ಯಾಕ್‌ಬುಕ್ ಏರ್ ಹಗುರ ವಿನ್ಯಾಸ ಹೊಂದಿದೆ. ಇದನ್ನು ಕೊಂಡೊಯ್ಯುವುದು ಸುಲಭ. ಕಡಿಮೆ ಬೆಳಕಿನಲ್ಲಿ ಕಾರ್ಯನಿರ್ವಹಿಸಲು ಬ್ಯಾಕ್‌ಲಿಟ್ ಕೀಬೋರ್ಡ್ ನೆರವಾಗುತ್ತದೆ. ತಡರಾತ್ರಿ ಅಧ್ಯಯನಕ್ಕೆ ಸೂಕ್ತವಾಗಿದೆ.
Apple
ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3: ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3 ಅತ್ಯುತ್ತಮ ಬಜೆಟ್ ಸ್ನೇಹಿ ಲ್ಯಾಪ್‌ಟಾಪ್. ಇಂಟೆಲ್ ಕೋರ್ ಐ 7-13620 ಹೆಚ್ ಪ್ರೊಸೆಸರ್ ಮತ್ತು 16 ಜಿಬಿ ರ್ಯಾಮ್‌ನಿಂದ ನಿಯಂತ್ರಿಸಲ್ಪಡುತ್ತದೆ. 512 ಜಿಬಿ ಎಸ್ಎಸ್ಡಿ ಹೊಂದಿದೆ.
8 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಇರುತ್ತದೆ. ಇದರ ತೆಳುವಾದ ಮತ್ತು ಹಗುರವಾದ ವಿನ್ಯಾಸವು ವಿದ್ಯಾರ್ಥಿಗಳಿಗೆ ಅನುಕೂಲಕರ. ಕಣ್ಣಿಗೆ ತ್ರಾಸವಾಗದಂತೆ ಐ ಕೇರ್ ಫೀಚರ್ ಹೊಂದಿದೆ. ಕಡಿಮೆ ಬೆಳಕಿನಲ್ಲಿ ಬಳಸಲು ಅನುಕೂಲವಾಗುವಂತೆ ಬ್ಯಾಕ್ಲಿಟ್ ಕೀಬೋರ್ಡ್ ಹೊಂದಿದೆ.
ಆಸುಸ್ ವಿವೋಬುಕ್ 16: ಅಸುಸ್ ವಿವೋಬುಕ್ 16 16 ಜಿಬಿ ರ್ಯಾಮ್ ಮತ್ತು 512 ಜಿಬಿ ಎಸ್ಎಸ್ಡಿ ಹೊಂದಿದೆ. ಇದರ 42-ವ್ಯಾಟ್-ಗಂಟೆಗಳ ಬ್ಯಾಟರಿ ಚಾರ್ಜ್ ದೀರ್ಘಕಾಲ ಇರುತ್ತದೆ. ಹಗುರವಾದ ವಿನ್ಯಾಸದಿಂದಾಗಿ ಕೊಂಡೊಯ್ಯುವುದು ಸುಲಭ.
ಇದರಲ್ಲಿ ಭದ್ರತೆಗಾಗಿ ಫಿಂಗರ್ ಪ್ರಿಂಟ್ ಸೆನ್ಸಾರ್, ಅತ್ಯುತ್ತಮ ಮೈಕ್ರೋಫೋನ್, 720 ಪಿಎಚ್‌ಡಿ ಕ್ಯಾಮೆರಾ ಇತ್ಯಾದಿ ಫೀಚರ್‌ಗಳು ಇವೆ. ವಿವೋಬುಕ್ 16 ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಸೂಕ್ತವಾಗಿದೆ.
ಎಂಎಸ್ಐ ಥಿನ್ 15: ಗೇಮಿಂಗ್‌ಗಾಗಿ ವಿನ್ಯಾಸಗೊಳಿಸಲಾದ ಎಂಎಸ್ಐ ಥಿನ್ 15 144 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು ಎನ್‌ವಿಡಿಯಾ ಜಿಫೋರ್ಸ್ ಆರ್‌ಟಿಎಕ್ಸ್ ಗ್ರಾಫಿಕ್ಸ್ ಅನ್ನು ಹೊಂದಿದೆ. 16 ಜಿಬಿ ರ್ಯಾಮ್ ಮತ್ತು 512 ಜಿಬಿ ಎಸ್ಎಸ್ಡಿ ಹೊಂದಿದೆ.
Pexels
ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್ ಸಂಜನಾ ಪಾತ್ರಧಾರಿ ಆರತಿ