ದಕ್ಷಿಣ ಭಾರತದ ಪೌಷ್ಟಿಕಾಂಶಭರಿತ 9 ಮೀನಿನ ಖಾದ್ಯಗಳಿವು  

By Raghavendra M Y
Jan 02, 2024

Hindustan Times
Kannada

ನೀವೇನಾದರೂ ಮೀನೂಟದ ಪ್ರಿಯರಾಗಿದ್ದರೆ ದಕ್ಷಿಣ ಭಾರತದ ಈ ಜನಪ್ರಿಯ ಮೀನಿನ ಖಾದ್ಯಗಳನ್ನು ಟೆಸ್ಟ್ ಮಾಡಿ ನೋಡಿ

ಕೇರಳದ ಸ್ಥಳೀಯ ಫೇಮಸ್ ಮೀನಿನ ಖಾದ್ಯವೇ ಫಿಶ್ ಮೊಯ್ಲಿ. ತೆಂಗಿನ ಕಾಯಿ, ಅರಿಶಿನ, ಶುಂಠಿ, ಬೆಳ್ಳುಲ್ಲಿ, ಹಸಿ ಮೆಣಸಿನಕಾಯಿ ಮಸಾಲೆಯೊಂದಿಗೆ ಮಾಡುವ ರುಚಿಕರವಾದ ಮೀನಿನ ರೆಸಿಪಿಯಾಗಿದೆ

ತೆಲುಗು ರಾಜ್ಯಗಳಲ್ಲಿ ಜನಪ್ರಿಯ ಮೀನು ಕರಿ ಎಂದರೆ ಆಂಧ್ರ ಫಿಶ್ ಪುಲುಸು. ಈ ಚಾಪಲ ಪುಲುಸನ್ನು ಹುಣಸೆಹಣ್ಣು, ಕೆಂಪು ಮೆಣಸಿಕಾಯಿ, ಮೆಂತ್ಯ ಹಾಗೂ ಇತರೆ ಮಸಾಲೆಗಳಿಂದ ಇದನ್ನ ತಯಾರಿಸಲಾಗುತ್ತೆ

ಮೀನ್ ಕೋಜಂಬು - ಕೇರಳ ಖಾದ್ಯವಾಗಿದ್ದು, ಹುಣಸೆಹಣ್ಣು, ಟೊಮೆಟೊ ಹಾಗೂ ಮಸಾಲೆಗಳಿಂದ ತಯಾರಿಸಲಾಗುತ್ತೆ

ಮಿಕ್ಸ್ ಮಾಡಿದ ಮಸಾಲೆಗಳನ್ನ ಹಸಿ ಮೀನಿಗೆ ಹಚ್ಚಿದ ನಂತರ ಹೆಂಚಿನ ಮೇಲೆ ಚೆನ್ನಾಗಿ ಫ್ರೈ ಮಾಡಲಾಗುತ್ತೆ. ಊಟದ ಸೈಡ್ ಡಿಶ್‌ಗೆ ಇದು ತುಂಬಾ ಫೇಮಸ್

ಮಂಗಳೂರು ಫಿಶ್ ಕರಿ - ಮಸಾಲೆ, ತೆಂಗಿನಕಾಯಿ, ಹುಣಸೆಹಣ್ಣಿನ ರಸದಿಂದ ಮಂಗಳೂರು ಫಿಶ್ ಕರಿಯನ್ನು ತಯಾರಿಸಲಾಗುತ್ತೆ. ಅನ್ನದೊಂದಿಗೆ ತಿಂದರೆ ರುಚಿಕರವಾಗಿರುತ್ತೆ

ಫಿಶ್ ಪಲಾವ್ - ದಕ್ಷಿಣ ಭಾರತದಲ್ಲಿ ಮೀನಿನಿಂದ ಮಾಡುವ ಪವಾಲ್ ತುಂಬಾ ಜನಪ್ರಿಯ. ಮಸಾಲೆಗಳು, ಕೆಲ ಗಿಡಮೂಲಿಕೆಗಳನ್ನು ಬಳಿಸಿ ಪಿಶ್ ಪವಾಲ್ ತರಿಸಲಾಗುತ್ತೆ

ಕೇರಳ ಫಿಶ್ ಕರಿ - ಇದನ್ನ ಮೀನ್ ಕರಿ ಅಂತಲೂ ಕರೆಯಲಾಗುತ್ತೆ. ಕರಿಬೇವು, ಸಾಸಿವೆ, ಮೆಂತ್ಯ, ತೆಂಗು ಹಾಗೂ ಮಸಾಲೆಗಳಿಂದ ಈ ಗ್ರೇವಿಯನ್ನು ತಯಾರಿಸಲಾಗುತ್ತೆ

ನೆತಿಲಿ ಮೀನ್ ವರುವಲ್ - ಇದೊಂದು ರೀತಿ ಮೀನಿನಲ್ಲಿ ತಯಾರಿಸಿದ ಕುರುಕಲು ಸ್ನ್ಯಾಕ್ಸ್ ಆಗಿದೆ

ಚೆಟ್ಟಿನಾಡ್ ಫಿಶ್ ಕರಿ - ತಮಿಳುನಾಡಿನ ಚೆಟ್ಟಿನಾಡ್ ಪ್ರದೇಶದ ಕರಿ ಇದಾಗಿದ್ದು, ದಕ್ಷಿಣ ಭಾರತದಲ್ಲಿ ಜನಪ್ರಿಯಾವಾಗಿದೆ. ಇದನ್ನ ಹೆಚ್ಚಾಗಿ ಪರೋಟದೊಂದಿಗೆ ತಿನ್ನುತ್ತಾರೆ

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ