ಗೋವಾದಲ್ಲಿರುವ ಸುಂದರ ಗುಪ್ತ ತಾಣಗಳು, ಟ್ರಿಪ್‌ಗೆ ಹೋದ್ರೆ ಮಿಸ್ ಮಾಡದೇ ನೋಡಿ  

By Reshma
May 22, 2025

Hindustan Times
Kannada

ಜೀವನದಲ್ಲಿ ಒಮ್ಮೆಯಾದ್ರೂ ಗೋವಾ ಟ್ರಿಪ್ ಮಾಡಬೇಕು ಅನ್ನೋದು ಹಲವರ ಕನಸಾಗಿರುತ್ತದೆ. ಇದು ಅದ್ಭುತ ಪ್ರವಾಸಿ ತಾಣವೂ ಹೌದು 

ಗೋವಾ ಎಂದರೆ ಕೇವಲ ಬೀಚ್ ಎಂದು ಹಲವರು ಎಂದುಕೊಳ್ಳುತ್ತಾರೆ. ಆದರೆ ಅಲ್ಲಿ ಸಮುದ್ರ ತೀರ ಹೊರತು ಪಡಿಸಿ ಸುಂದರ ತಾಣಗಳಿವೆ  

ಗೋವಾದಲ್ಲಿ ಹಲವರು ನೋಡಿರದ ಗುಪ್ತ ತಾಣಗಳಿವೆ. ನೀವು ಗೋವಾಕ್ಕೆ ಹೋದರೆ ಈ ಸ್ಥಳಗಳಿಗೂ ಭೇಟಿ ಕೊಡಿ 

ಗಲ್ಗಿಬಾಗ ಬೀಚ್‌: ಗೋವಾದ ಗಲ್ಗಿಬಾಗಾ ಬೀಚ್‌ಗೆ ಹೆಚ್ಚು ಜನರು ಭೇಟಿ ನೀಡುವುದಿಲ್ಲ. ಈ ಕಡಲತೀರದ ನೋಟ ತುಂಬಾ ಸುಂದರ ಮತ್ತು ಶಾಂತವಾಗಿದೆ 

ಚಂದೋರ್‌: ದಕ್ಷಿಣ ಗೋವಾದಲ್ಲಿ ಚಂದೋರ್ ಎಂಬ ಸುಂದರ ಹಳ್ಳಿ ಇದೆ. ಇಲ್ಲಿ ನೀವು ಹಳೆಯ ಶೈಲಿಯಲ್ಲಿ ಮಾಡಿದ ಮನೆಗಳು ಮತ್ತು ವಸ್ತುಗಳನ್ನು ಕಾಣಬಹುದು

ಬಟಟ್‌ ಫ್ಲೈ ಪಾರ್ಕ್‌: ಗೋವಾದಲ್ಲಿ ಒಂದು ಬಟರ್ ಫ್ಲೈ ಪಾರ್ಕ್ ಕೂಡ ಇದೆ. ಇದನ್ನು ನೋಡಲು ಸಾಕಷ್ಟು ಜನ ಹೋಗುವುದಿಲ್ಲ. ಇಲ್ಲಿ ಹಲವು ಜಾತಿಯ ಚಿಟ್ಟೆಗಳನ್ನು ನೋಡಬಹುದು 

ಸಲಾವುಲಿಮ್‌ ಅಣೆಕಟ್ಟು: ಸಲಾವುಲಿಮ್‌ ಅಣೆಕಟ್ಟು ಗೋವಾದ ಜುವಾರಿ ನದಿಯ ಉಪನದಿಯಾದ ಗುಲೇಲಿ ಬಳಿ ಇದೆ. ಈ ಅಣೆಕಟ್ಟಿನ ನೋಟ ನೋಡಲು ಸಖತ್ ಆಗಿದೆ

ಕಾಬೊ ಡಿ ರಾಮ ಕೋಟೆ: ಗೋವಾದಲ್ಲಿ ಕಾಬೊ ಡಿ ರಾಮ ಕೋಟೆ ಕೋಡ ಸುಂದರವಾಗಿದೆ. ರಾಮನು ಇಲ್ಲಿ ತಂಗಿದ್ದನೆಂದು ಹೇಳಲಾಗುತ್ತದೆ. ಇದು ಖೋಲಾ ಹಳ್ಳಿಯಲ್ಲಿರುವ ಒಂದು ಸ್ಥಳ 

ಸ್ಪೈಸ್ ಫಾರ್ಮ್‌: ಗೋವಾದಲ್ಲಿ ಸಹಕಾರಿ ಸ್ಪೈಸ್ ಫಾರ್ಮ್‌ ಇದೆ, ಗೋವಾ ಟ್ರಿಪ್‌ ಹೋದರೆ ಅಲ್ಲಿಗೆ ಭೇಟಿ ನೀಡದೇ ಇರಬೇಡಿ. ಭಾರತೀಯ ಮಸಾಲೆಗಳ ನಿಜವಾದ ಕೃಷಿಯನ್ನು ಇಲ್ಲಿ ನೀಡಬಹುದು 

ಗೋವಾಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್‌ನಿಂದ ಜನವರಿವರೆಗೆ. ಈ ಋತುವಿನಲ್ಲಿ ನೀವು ಗೋವಾ ಟ್ರಿಪ್‌ ಪ್ಲಾನ್ ಮಾಡಬೇಕು

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS