ಮಾರ್ಚ್‌ನಲ್ಲಿ ಭೇಟಿ ನೀಡಬಹುದಾದ ವಾವ್ಹ್‌ ಎನಿಸುವಂಥ ಸ್ಥಳಗಳಿವು

By Rakshitha Sowmya
Mar 05, 2024

Hindustan Times
Kannada

ಪ್ರತಿಯೊಂದು ಸೀಸನ್‌ನಲ್ಲೂ ಒಂದೊಂದು ಸ್ಥಳಗಳು ಬೆಸ್ಟ್‌ ಎನಿಸಿಕೊಳ್ಳುತ್ತವೆ. ಹಾಗೇ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವೊಂದು ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. 

ಲಡಾಖ್‌ ಕಡಿದಾದ ಪರ್ವತ, ಕಣಿವೆ, ಪ್ರಾಚೀನ ಪ್ಯಾಂಗಾಂಗ್‌ ತ್ಸೋ ಸರೋವರ ಸೇರಿದಂತೆ ಇನ್ನಿತರ ಸ್ಥಳಗಳನ್ನು ಎಕ್ಸ್‌ಪ್ಲೋರ್‌ ಮಾಡಬಹುದು.

ಮೇಘಾಲಯ

ಈಶಾನ್ಯ ರಾಜ್ಯವು ಪ್ರಕೃತಿಪ್ರಿಯರಿಗೆ ಹೇಳಿಮಾಡಿಸಿದಂಥ ಪ್ರವಾಸಿ ತಾಣವಾಗಿದೆ. ಮೇಘಾಲಯದ ಸ್ಪಟಿಕ ಸ್ಪಷ್ಟ ನೀರು, ಹಚ್ಚ ಹಸಿರಿನ ಪ್ರಕೃತಿ ಎಲ್ಲವೂ ನಿಮ್ಮನ್ನು ಸೆಳೆಯುತ್ತದೆ

ಕೇರಳದ ವಯನಾಡು

ಟೀ ಎಸ್ಟೇಟ್‌, ಫಾಲ್ಸ್‌ ಹೊಂದಿರುವ ಭೂಮಿ ಮೇಲಿನ ಅದ್ಬುತ ಸ್ವರ್ಗ. ಇಲ್ಲಿ ನೀವು ಸಾಕಷ್ಟು ಹಿನ್ನೀರಿನ ಪ್ರದೇಶಗಳಿಗೆ ಹೋಗಿಬರಬಹುದು 

ಗುಲ್‌ಮಾರ್ಗ್‌

ಜಮ್ಮು ಮತ್ತು ಕಾಶ್ಮೀರದ ಈ ಸ್ಥಳ ಪ್ರವಾಸಿಗರ ಸ್ವರ್ಗ. ಸುತ್ತಲಿನ ಹಸಿರು ಪರಿಸರ, ಬಣ್ಣ ಬಣ್ಣದ ಹೂಗಳು ನಿಮ್ಮನ್ನು ಈ ಸ್ಥಳದಿಂದ ಹೋಗಲು ಬಿಡುವುದೇ ಇಲ್ಲ. 

ಡಾರ್ಜಲಿಂಗ್‌

ಪಶ್ಚಿಮ ಬಂಗಾಳದ ಈ ರಮಣೀಯ ಗಿರಿಧಾಮವು ಟೀ ಎಸ್ಟೇಟ್‌, ಭವ್ಯವಾದ ಜಲಪಾತಗಳಿಂದ ಕೂಡಿದೆ.

ಚಳಿಗಾಲದಲ್ಲಿ ದಾಲ್ಚಿನ್ನಿ ಸೇವಿಸುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನಗಳು

freepik