ಪ್ರಯಾಣ ಸಾಲ ಎಂದರೇನು, ಇದನ್ನ ಪಡೆಯುವುದು ಹೇಗೆ?

By Reshma
Nov 26, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಟ್ರಾವೆಲ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದು ಹಲವರಿಗೆ ಹವ್ಯಾಸವೂ ಆಗಿದೆ. ಹಲವರು ದುಡಿದು ಹಣ ಉಳಿಸಿ ಟ್ರಿಪ್ ಹೋಗುತ್ತಾರೆ 

ಆದರೆ ಕೆಲವರಿಗೆ ಟ್ರಾವೆಲ್‌ ಮಾಡುವಾಗ ಬಜೆಟ್ ಸಮಸ್ಯೆ ಎದುರಾಗುತ್ತದೆ. ಖರ್ಚಿನ ಕಾರಣದಿಂದ ಹಣ ಇಲ್ಲದೇ ಟ್ರಾವೆಲ್ ಮಾಡಲು ಹೆದರುವವರು ನಮ್ಮ ನಡುವೆ ಇದ್ದಾರೆ 

ನಿಮಗೂ ಟ್ರಾವೆಲ್ ಮಾಡೋದು ಇಷ್ಟ, ಆದರೆ ಜೇಬಿನಲ್ಲಿ ಹಣದ ಸಮಸ್ಯೆ ಇದೆ ಎಂದಾದರೆ ನೀವು ಬ್ಯಾಂಕ್‌ನಿಂದ ಟ್ರಾವೆಲ್ ಲೋನ್ ಪಡೆಯಬಹುದು 

ಪರ್ಸನಲ್ ಲೋನ್‌, ಎಜುಕೇಷನ್ ಲೋನ್‌ನಂತೆ ಬ್ಯಾಂಕ್‌ನಲ್ಲಿ ಟ್ರಾವೆಲ್ ಲೋನ್ ಕೂಡ ನೀಡುತ್ತಾರೆ. ನಂತರ ಕಂತುಗಳಲ್ಲಿ ಬ್ಯಾಂಕಿಗೆ ಮರುಪಾವತಿ ಮಾಡಬಹುದು 

ಟ್ರಾವೆಲ್ ಲೋನ್ ಪಡೆಯಲು ಯಾವುದೇ ಬ್ಯಾಂಕ್‌ಗೆ ಹೋಗಿ ನಿಮ್ಮ ದಾಖಲೆಗಳನ್ನು ನೀಡಬೇಕು. ಸೂಕ್ತ ಐಡಿ ಪ್ರೂಫ್ ಒದಗಿಸಿ, ಸಾಲ ಪಡೆಯುತ್ತೀರಿ 

ಬ್ಯಾಂಕ್‌ನಲ್ಲಿ ಟ್ರಾವೆಲ್ ಇನ್ಸ್ಯೂರೆನ್ಸ್‌, ಬುಕ್ ಮಾಡಿದ ಟೆಕೆಟ್‌ ಹಾಗೂ ಟ್ರಾವೆಲ್ ಪ್ಲಾನ್ ಬಗ್ಗೆ ಕೂಡ ಕೇಳಬಹುದು 

ಎಚ್‌ಡಿಎಫ್‌ಸಿ ಬ್ಯಾಂಕ್ ಟ್ರಾವೆಲ್ ಲೋನ್ ಮೇಲೆ ಶೇ 10.50 ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಬ್ಯಾಂಕ್‌ನಿಂದ 40 ಲಕ್ಷಗಳವರೆಗೆ ಟ್ರಾವೆಲ್ ಲೋನ್ ಪಡೆಯಬಹುದು. ಇದು 60 ತಿಂಗಳಲ್ಲಿ ಮರು ಪಾವತಿ ಪಾವತಿ ಮಾಡಬಹುದು 

ಪ್ರತಿ ಬ್ಯಾಂಕಿನ ಬಡ್ಡಿದರ ಮತ್ತು ಸಾಲದ ಮಿತಿ ವಿಭಿನ್ನವಾಗಿರುತ್ತದೆ. ಇದು ನಿಮ್ಮ ಸಂಬಳ ಹಾಗೂ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿ ಇರುತ್ತದೆ 

ನೀವು ವಿದೇಶಕ್ಕೆ ಪ್ರಯಾಣ ಮಾಡುವುದಿದ್ದರೂ ಈ ರೀತಿ ಟ್ರಾವೆಲ್ ಲೋನ್‌ಗಳಿವೆ. ಇದು ವೀಸಾ ಹಾಗೂ ಟ್ರಾವೆಲ್ ಪ್ಲಾನ್ ಕೇಳುತ್ತದೆ 

ನೀವು ಬ್ಯಾಂಕಿನಿಂದ ಪ್ರಯಾಣ ಸಾಲದ ನಿಯಮ ಮತ್ತು ಷರತ್ತುಗಳನ್ನು ವಿವರವಾಗಿ ತಿಳಿದುಕೊಳ್ಳಬಹುದು. ನೀವು ಆಫ್‌ಲೈನ್ ಹಾಗೂ ಆನ್‌ಲೈನ್ ಮುಖಾಂತರವೂ ಸಾಲ ಪಡೆಯಬಹುದು 

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?