ಪ್ರವಾಸದಲ್ಲಿದ್ದಾಗ ಪಾಸ್‌ಪೋರ್ಟ್‌ ಕಳುವಾದರೆ ಏನು ಮಾಡಬೇಕು?

By Reshma
Jul 14, 2024

Hindustan Times
Kannada

ಅಂತರರಾಷ್ಟ್ರೀಯ ಪ್ರವಾಸದಲ್ಲಿದ್ದಾಗ ನಿಮ್ಮ ಪಾಸ್‌ಪೋರ್ಟ್‌ ಅನ್ನು ಯಾರಾದ್ರೂ ಕದ್ದರೆ ಅಥವಾ ಪಾಸ್‌ಪೋರ್ಟ್‌ ಕಳೆದು ಹೋದರೆ ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

ವಿದೇಶ ಪ್ರವಾಸದಲ್ಲಿದ್ದಾಗ ಪಾಸ್‌ಪೋರ್ಟ್‌ ಕಳೆದು ಹೋದರೆ ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 

ಮೊದಲು ನೀವಿರುವ ಜಾಗಕ್ಕೆ ಹತ್ತಿರವಿರುವ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಬೇಕು.

ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ಮಾಹಿತಿಯನ್ನು ಆ ದೇಶದ ರಾಯಭಾರಿ ಕಚೇರಿಗೆ ನೀಡಬೇಕು. 

ರಾಯಭಾರಿ ಕಚೇರಿಗೆ ಕಳುಹಿಸಿದ ನಂತರವಷ್ಟೇ ನಿಮ್ಮ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡಲು ಸಾಧ್ಯವಾಗುತ್ತದೆ. 

ಇದರ ನಂತರ ನೀವು ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೇ ನೀವು ತುರ್ತು ಪ್ರಮಾಣಪತ್ರವನ್ನು ಸಹ ಪಡೆಯಬಹುದು. 

ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ ನಂತರ ನೀವು ಒಂದು ವಾರಗಳ ಕಾಲ ಕಾಯಬೇಕಾಗುತ್ತದೆ. 

ಆದರೆ ವಿದೇಶಕ್ಕೆ ಪ್ರಯಾಣಿಸುವಾಗ ನಿಮ್ಮ ಪಾಸ್‌ಪೋರ್ಟ್‌ ಅನ್ನು ಕಳೆದುಕೊಳ್ಳುವ ಜೊತೆಗೆ ವೀಸಾ ಸಹ ಮುಕ್ತಾಯಗೊಳ್ಳುತ್ತದೆ. 

ಇಂತಹ ಪರಿಸ್ಥಿತಿಯಲ್ಲಿ ನೀವು ರಾಯಭಾರ ಕಚೇರಿಗೆ ಭೇಟಿ ನೀಡಿ ಹಳೆಯ ವೀಸಾ ಮತ್ತು ಪೊಲೀಸ್‌ ವರದಿಯ ಪ್ರತಿಯನ್ನು ತೋರಿಸಿ, ಹೊಸ ವೀಸಾವನ್ನು ಪಡೆಯಬೇಕಾಗುತ್ತದೆ. 

ನಿಮ್ಮದು ಎರ್ಮಜೆನ್ಸಿ ವೀಸಾ ಆಗಿದ್ದರೆ, ನೀವು ರಾಯಭಾರ ಕಚೇರಿಯಿಂದ ಪಡೆದ ತುರ್ತು ಪ್ರಮಾಣಪತ್ರದ ಸಹಾಯವನ್ನು ಪಡೆಯಬೇಕಾಗಬಹುದು.

ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು 

Canva