ಭಾರತದಲ್ಲಿ ಸೋಲೊ ಟ್ರಿಪ್‌ಗೆ ಬೆಸ್ಟ್‌ ಎನ್ನಿಸುವ ಜಾಗವಿದು

By Reshma
Jun 07, 2024

Hindustan Times
Kannada

ಪ್ರತಿದಿನ ಅದೇ ವರ್ಕ್‌, ಅದೇ ಟ್ರಾಫಿಕ್‌, ಅದೇ ಬ್ಯುಸಿ ಲೈಫ್‌ ಅಂತ ಬೋರಾಗಿದ್ದು ಎಲ್ಲಾದ್ರೂ ದೂರ ಹೋಗಿ ಏಕಾಂತವಾಗಿ ಸಮಯ ಕಳಿಬೇಕು ಅನ್ನಿಸ್ತಾ ಇದ್ಯಾ? 

ಏಕಾಂತ ಪ್ರವಾಸಕ್ಕೆ ಭಾರತದಲ್ಲಿ ಯಾವ ಜಾಗ ಬೆಸ್ಟ್‌ ಅಂತ ನೀವು ಯೋಚಿಸಬಹುದು. ನಿಮ್ಮೆಲ್ಲಾ ಚಿಂತೆ, ಬೇಸರವನ್ನು ದೂರ ಮಾಡಿ ಮನಸ್ಸಿಗೆ ಖುಷಿ ನೀಡುವ ತಾಣವೊಂದು ಭಾರತದಲ್ಲಿದೆ. 

ಏಕಾಂತ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ ಎಂದರೆ ಹೃಷಿಕೇಶ. 

ಗಂಗಾನದಿಯ ತಟದಲ್ಲಿರುವ ಹೃಷಿಕೇಶ ಬಹಳ ಸುಂದರ ತಾಣ. ಧಾರ್ಮಿಕ ಕ್ಷೇತ್ರವಾದರೂ ಇದು ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು.

ಈ ಜಾಗವು ಧಾರ್ಮಿಕ ವೈಶಿಷ್ಟಗಳಿಂದ ಸುತ್ತುವರಿದಿದೆ. ಗಂಗಾತೀರ, ದೇವಾಲಯಗಳು, ಸಾಧು-ಸಂತರು ನಿಮ್ಮ ಗಮನ ಸೆಳೆಯುವುದರಲ್ಲಿ ಅನುಮಾನವಿಲ್ಲ. 

ಹೃಷಿಕೇಶದಲ್ಲಿ ಒಂದು ಆಶ್ರಮಗಳಿವೆ. ಇಲ್ಲಿ ನೀವು ಒಬ್ಬರೇ ಯೋಗ, ಧ್ಯಾನ ಮಾಡಬಹುದು. 

ಇಲ್ಲಿನ ಕೆಲವು ಆಶ್ರಮಗಳಲ್ಲಿ ಊಟ, ವಸತಿ ಉಚಿತವಾಗಿರುವುದು ವಿಶೇಷ. 

ಇದಲ್ಲದೇ ನೀಲಕಂಠ ಮಹಾದೇವ ದೇವಸ್ಥಾನ, ಭಾರತ ಮಂದಿರ, ಲಕ್ಷ್ಮಣ ಜೂಲಾ, ತ್ರೀವೇಣಿ ಘಾಟ್‌ ಮೊದಲಾದ ಸ್ಥಳಗಳಲ್ಲಿ ಗಂಗಾರತಿಯನ್ನೂ ಕಣ್ತುಂಬಿಕೊಳ್ಳಬಹುದು. 

ಇದಲ್ಲದೇ ಈ ತಾಣದಲ್ಲಿ ರಿವರ್‌ ರ್ಯಾಪ್ಟಿಂಗ್‌, ಬಂಗಿ ಜಂಪಿಂಗ್‌, ಕ್ಯಾಂಪಿಂಗ್‌ ಮತ್ತು ಇತರ ಸಾಹಸ ಚಟುವಟಿಕೆಗಳನ್ನೂ ಆನಂದಿಸಬಹುದು. 

ಹೃಷಿಕೇಶವನ್ನು ಪ್ರಪಂಚದ ಯೋಗ ರಾಜಧಾನಿ ಎಂದೂ ಕರೆಯುತ್ತಾರೆ. ಒಟ್ಟಾರೆ ಏಕಾಂಗಿ ಪ್ರವಾಸವನ್ನು ಎಂಜಾಯ್‌ ಮಾಡುವವರಿಗೆ ಇದು ಹೇಳಿ ಮಾಡಿಸಿದ ತಾಣ. 

ಉಯ್ಯಾಲೆಯಾಡಿದ ಕೆಎಲ್ ರಾಹುಲ್; ಸ್ಪೇನ್​ನಲ್ಲಿ ಸಖತ್ ಸುತ್ತಾಟ