ಭಾರತದಲ್ಲಿ ನವದಂಪತಿಗಳು ಇಷ್ಟಪಡುವ ಸ್ಥಳಗಳಿವು
By Reshma
Apr 04, 2024
Hindustan Times
Kannada
ನೀವು ಇತ್ತೀಚೆಗೆ ಮದುವೆಯಾಗಿದ್ದು ಕಡಿಮೆ ಬಜೆಟ್‌ನಲ್ಲಿ ಹನಿಮೂನ್ ಮುಗಿಸಬೇಕು ಅಂತಿದ್ರೆ ಭಾರತದಲ್ಲೇ ಇರುವ ಈ ಸುಂದರ ಜಾಗಗಳಿಗೆ ಭೇಟಿ ನೀಡಬಹುದು.
ಸಾಮಾನ್ಯವಾಗಿ ಹನಿಮೂನ್‌ಗೆ ವಿದೇಶಕ್ಕೆ ಹೋಗುತ್ತಾರೆ. ಆದರೆ ಭಾರತದಲ್ಲೇ ಇರುವ ಈ ಸ್ಥಳಗಳು ನಿಮಗೆ ಅಷ್ಟೇ ಖುಷಿ ಕೊಡಬಹುದು.
ಉದಯಪುರ: ರಾಜಸ್ಥಾನದ ಉದಯಪುರ ನಗರವು ದಂಪತಿಗಳಿಗೆ ಹೇಳಿ ಮಾಡಿಸಿದ್ದು. ವಿದೇಶಿ ಪ್ರವಾಸಿಗರೂ ಇಲ್ಲಿಗೆ ಭೇಟಿ ನೀಡುತ್ತಾರೆ.
ಉದಯಪುರದಲ್ಲಿನ ಅರಮನೆ, ಸುಂದರ ಕೊಳಗಳು, ಮಾನ್ಸೂನ್ ಪ್ಯಾಲೇಸ್, ಸಿಟಿ ಪ್ಯಾಲೇಸ್‌ಗಳಿಗೆ ಭೇಟಿ ನೀಡಿ ಆನಂದಿಸಬಹುದು.
ಗೋವಾ: ಗೋವಾ ಬೆಸ್ಟ್ ಹನಿಮೂನ್ ಡೆಸ್ಟಿನೇಷನ್ ಎಂದರೂ ತಪ್ಪಲ್ಲ. ಇಲ್ಲಿಗೆ ಕೂಡ ಕಡಿಮೆ ಬಜೆಟ್‌ನಲ್ಲಿ ನೀವು ಪ್ಲಾನ್ ಮಾಡಬಹುದು.
ಬಿಸಿಲಿಗೆ ದೇಹ ಕೊಂಚ ಹೊಂದಿಕೊಂಡರೆ ಸಾಕು ಗೋವಾ ನಿಮಗೆ ಬೆಸ್ಟ್ ಅನ್ನಿಸುವುದರಲ್ಲಿ ಎರಡು ಮಾತಿಲ್ಲ.
ಶಿಮ್ಲಾ: ಹನಿಮೂನ್‌ಗೆ ಹೇಳಿ ಮಾಡಿಸಿದ ಜಾಗ ಶಿಮ್ಲಾ. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಭಾರತದ ಸುಂದರ ತಾಣಗಳಲ್ಲಿ ಒಂದಾಗಿದೆ.
ಇಲ್ಲಿ ಹೋಟೆಲ್ ಕೂಡ ಕಡಿಮೆ ದರದಲ್ಲಿ ಲಭ್ಯವಿರುತ್ತವೆ. ನೀವು ಕಡಿಮೆ ಬಜೆಟ್‌ನಲ್ಲಿ ಹನಿಮೂನ್ ಮುಗಿಸಬೇಕು ಅಂತಿದ್ರೆ ಶಿಮ್ಲಾ ಆಯ್ಕೆ ಮಾಡಿಕೊಳ್ಳಿ.
ದಿ ಸ್ಕ್ಯಾಂಡಲ್ ಪಾಯಿಂಟ್, ದಿ ಶಿಮ್ಲಾ ಸ್ಟೇಟ್ ಮ್ಯೂಸಿಯಂ, ಚಾಡ್ವಿಕ್ ಫಾಲ್ಸ್, ಮಾಲ್ ರೋಡ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.
ಮನಾಲಿ: ಹಿಮಾಚಲ ಪ್ರದೇಶದಲ್ಲಿರುವ ಮನಾಲಿಯು ದಂಪತಿಗಳಿಗೆ ಅತ್ಯುತ್ತಮ ಜಾಗವೆಂದು ಹೇಳಲಾಗಿದೆ. ಇಲ್ಲಿನ ಸೌಂದರ್ಯ ನಿಮ್ಮ ಮನಸ್ಸಿಗೆ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ