ನಿಮ್ಮ ಸಂಗಾತಿಯೊಂದಿಗೆ ಹನಿಮೂನ್ ಯೋಚನೆ ನಿಮ್ಮದಿದ್ದರೆ, ಈ ಬಾರಿ ವಿದೇಶಿ ತಾಣ ನಿಮ್ಮ ಆದ್ಯತೆಯಾಗಿರಲಿ. ಈ ಐದು ಸ್ಥಳಗಳನ್ನು ಒಮ್ಮೆ ನೋಡಿ.
ಪ್ಯಾರಿಸ್
ಫ್ರಾನ್ಸ್‌ನ ರಾಜಧಾನಿಗೆ ಪ್ರೇಮನಗರ ಎಂದೇ ಹೆಸರು. ಶ್ರೀಮಂತ ಇತಿಹಾಸ, ಕಲೆ ಮತ್ತು ಸಂಸ್ಕೃತಿ ಹೊಂದಿರುವ ನಗರವಿದು. ಸುಂದರ ಬೀದಿ ಹಾಗೂ ಅದ್ಭುತ ಭೂದೃಶ್ಯಗಳನ್ನು ಇಲ್ಲಿ ಅನ್ವೇಷಿಸಬಹುದು.
ಗ್ರೀಸ್
ಮೆಡಿಟರೇನಿಯನ್ ಸಮುದ್ರದ ತೀರದ ಸುಂದರ ಗ್ರೀಸ್ ಪಟ್ಟಣ ಮಧುಚಂದ್ರಕ್ಕೆ ಹೇಳಿ ಮಾಡಿಸಿದ ತಾಣ. ಶ್ವೇತ ವರ್ಣದ ಕಟ್ಟಡಗಳಿಂದ ಕೂಡಿದ ಪಟ್ಟಣವನ್ನು ಅನ್ವೇಷಿಸಬಹುದು.
ಬಾಲಿ
ಬಿಳಿ ಮರಳಿನ ಕಡಲತೀರಗಳಿರುವ ಒಳಗೊಂಡಿರುವ ಬಾಲಿಯ ಸುಂದರ ಭೂದೃಶ್ಯಗಳನ್ನು ವೀಕ್ಷಿಸುತ್ತಾ ಆನಂದಿಸಬಹುದು.
ಮಾರಿಷಸ್
ಈ ದ್ವೀಪ ರಾಷ್ಟ್ರವು ಪ್ರಾಚೀನ ಬೀಚ್‌ಗಳನ್ನು ಹೊಂದಿದೆ. ಕನಸಿನ ತಾಣದಂತಿರುವ ದೇಶದ ಪ್ರಶಾಂತ ಭೂದೃಶ್ಯಗಳನ್ನು ಸವಿಯುತ್ತಾ, ಜಲ ಕ್ರೀಡೆಗಳು ಮತ್ತು ಸಾಹಸಮಯ ಚಟುವಟಿಕೆಗಳನ್ನು ಆನಂದಿಸಬಹುದು.
ಟರ್ಕಿ
ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆ ಹೊಂದಿರುವ ಟರ್ಕಿಯ ಮನಮೋಹಕ ದೃಶ್ಯಗಳು ಕಣ್ಣಿಗೆ ಹಬ್ಬ ನೀಡುತ್ತವೆ. ನಿಮ್ಮ ಸಂಗಾತಿಯೊಂದಿಗೆ ಹಾಟ್ ಏರ್ ಬಲೂನ್‌ನಲ್ಲಿ ಡೇಟ್ ಮಾಡಬಹುದು
ಡಾ. ರಾಜ್‌ಕುಮಾರ್ ನಟಿಸಿದ ಪರಭಾಷೆಯ ಸಿನಿಮಾ ಯಾವುದು ಗೊತ್ತೆ?