ಮಳೆಗಾಲದಲ್ಲಿ ಪ್ರವಾಸ ಮಾಡುವಾಗ ಈ ವಿಚಾರಗಳನ್ನು ಮರೆಯುವಂತಿಲ್ಲ

By Reshma
Jul 04, 2024

Hindustan Times
Kannada

ಮಳೆಗಾಲ ಎಂದರೆ ಎಲ್ಲೆಲ್ಲೂ ಹಚ್ಚ ಹಸಿರು. ತುಂಬಿ ತುಳುಕುವ ಜಲಪಾತ, ಉಕ್ಕಿ ಹರಿವ ನದಿಗಳು ಕಣ್ಮುಂದೆ ಬರುತ್ತವೆ.

ಮಳೆಗಾಲದಲ್ಲಿ ಟ್ರಿಪ್‌ ಮಾಡೋದು ಹಲವರ ಬಯಕೆ. ಪ್ರಕೃತಿಯ ಅಂದವನ್ನು ಆಸ್ವಾದಿಸಲು ಮಳೆಗಾಲಕ್ಕಿಂತ ಬೆಸ್ಟ್‌ ಇನ್ನೊಂದಿಲ್ಲ. 

ಮಳೆಗಾಲದಲ್ಲಿ ಪ್ರವಾಸ ಮನಸ್ಸಿಗೆ ಮುದ ನೀಡಿದ್ರು ಈ ಸಮಯದಲ್ಲಿ ಕೆಲವು ವಿಚಾರಗಳನ್ನು ನಾವು ಗಮನಿಸಲೇಬೇಕು. 

ಮಳೆಗಾಲದಲ್ಲಿ ನದಿ, ಸರೋವರಗಳಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಏರಿಕೆಯಾಗುತ್ತದೆ, ಕೆಲವೊಮ್ಮೆ ಊಹಿಸದ ರೀತಿಯಲ್ಲಿ ನೀರು ಉಕ್ಕಿ ಹರಿಯುತ್ತದೆ. 

ಹಾಗಾಗಿ ಮಳೆಗಾಲದಲ್ಲಿ ನದಿ, ಸರೋವರ, ಜಲಪಾತಗಳಿಗೆ ನೀವು ಪ್ರವಾಸಕ್ಕೆ ಹೋದರೆ ಸಾಕಷ್ಟು ಎಚ್ಚರ ವಹಿಸಬೇಕು. ಸೆಲ್ಫಿ ಗೀಳಿಗೆ ಪ್ರಾಣವೇ ಹೋಗಬಹುದು ಎಚ್ಚರ. 

ಮಳೆಗಾಲದಲ್ಲಿ ಬೆಟ್ಟಗುಡ್ಡಗಳು ಹಸಿರು ಚಿಗುರಿ ನಿಂತಿರುತ್ತವೆ. ಆದರೆ ಈ ಸಮಯದಲ್ಲಿ ಗುಡ್ಡ ಕುಸಿತದಂತಹ ಅಪಾಯವೂ ಹೆಚ್ಚು. ಹಾಗಾಗಿ ನೀವು ಸ್ಥಳ ಆಯ್ಕೆ ಮಾಡುವ ಮುನ್ನ ಸಾಕಷ್ಟು ಎಚ್ಚರ ವಹಿಸಿ. 

ಪರ್ವತ, ಗುಡ್ಡದಂತಹ ಜಾಗದಲ್ಲಿ ಕಾರು ಚಾಲನೆ ತಪ್ಪಿಸುವುದು ಉತ್ತಮ. 

ಗಿರಿಧಾಮಗಳು, ಕಡಲತೀರಗಳು, ನದಿಪಾತ್ರದಲ್ಲಿ ಜನರು ಸಾಹಸ ಚಟುವಟಿಕೆಗಳನ್ನು ಮಾಡಲು ಹೋಗುತ್ತಾರೆ. 

ಆದರೆ ಮಳೆಗಾಲದಲ್ಲಿ ಇಂತಹ ಸಾಹಸ ಕ್ರೀಡೆಗಳು ತುಂಬಾ ಅಪಾಯ. ಈ ಸಮಯದಲ್ಲಿ ರಿವರ್‌ ರ್ಯಾಫ್ಟಿಂಗ್‌, ಭಂಗಿ ಜಂಪಿಂಗ್‌ನಂತಹ ಸಾಹಸ ಕ್ರೀಡೆಗಳು ಅಪಾಯ ತಂದೊಡ್ಡಬಹುದು. 

ಮಳೆಗಾಲದಲ್ಲಿ ನದಿ, ಸರೋವರದ ತೀರ ಹಾಗೂ ಗುಡ್ಡಗಾಡಿನ ಮಧ್ಯದಲ್ಲಿ ಇರುವ ಹೋಟೆಲ್‌, ರೆಸಾರ್ಟ್‌ ಹೋಂ ಸ್ಟೇಗಳಿಂದ ದೂರ ಇರುವುದು ಉತ್ತಮ. 

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ದಿನಾಂಕ ಯಾವುದು?