ಸೋಲೋ ಟ್ರಿಪ್‌ ಮಾಡುವ ಮಹಿಳೆಯರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

By Reshma
May 23, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಸೋಲೋ ಟ್ರಿಪ್‌ ಟ್ರೆಂಡ್‌ ಆಗಿದೆ. ಮಹಿಳೆಯರು ಕೂಡ ಏಕಾಂಗಿಯಾಗಿ ದೇಶ ವಿದೇಶ ಸುತ್ತುತ್ತಿದ್ದಾರೆ. 

ನಿಮಗೂ ಸೋಲೋ ಟ್ರಿಪ್‌ ಇಷ್ಟ ಅಂತಾದ್ರೆ ಟಿಪ್ರ್‌ ಹೋಗುವ ಮುನ್ನ ನೀವು ಈ ಕೆಲವು ಅಂಶಗಳನ್ನು ಪರಿಗಣಿಸಲೇಬೇಕು. 

ಈ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಮಹಿಳೆಯರು ಸುರಕ್ಷತೆಯೊಂದಿಗೆ ಟ್ರಿಪ್‌ ಅನ್ನು ಎಂಜಾಯ್‌ ಮಾಡಬಹುದು. 

ಮೊದಲನೇದಾಗಿ ಮಹಿಳೆಯರು ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದರೆ ಸ್ಥಳವನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರಬೇಕು. 

ಮೊದಲು ನೀವು ಹೋಗಬೇಕು ಎಂದುಕೊಂಡಿರುವ ಸ್ಥಳದ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ. ನಿಮ್ಮ ಇಷ್ಟ ಹಾಗೂ ಅನುಕೂಲಕ್ಕೆ ಅನುಗುಣವಾಗಿ ಸ್ಥಳವನ್ನು ಆಯ್ಕೆ ಮಾಡಿ. 

ನೀವು ಒಂಟಿಯಾಗಿ ಪ್ರಯಾಣ ಮಾಡುವವರಾದರೆ ನಿಮ್ಮ ಲಗೇಜ್‌ ಚಿಕ್ಕದಾಗಿರಲಿ. ಬ್ಯಾಗ್‌ನಲ್ಲಿ ಹಗುರವಾಗಿರುವ ಸಾಮಗ್ರಿಗಳನ್ನಷ್ಟೇ ಇರಿಸಿ. 

ಇದರಿಂದ ಪ್ರಯಾಣ ಮಾಡುವಾಗ ಯಾವುದೇ ತೊಂದರೆ ಎದುರಾಗುವುದಿಲ್ಲ. ನೀವು ಆರಾಮವಾಗಿ ಎಲ್ಲ ಸ್ಥಳಗಳನ್ನೂ ನೋಡಬಹುದು

ನಿಮ್ಮ ಬಳಿ ಕ್ಯಾಷ್‌ ಹೆಚ್ಚು ಇರಿಸಿಕೊಳ್ಳಬೇಡಿ. ಅದರ ಬದಲು ಹೆಚ್ಚು ಕಾರ್ಡ್‌ ಬಳಸಿ. ಡಿಜಿಟಲ್‌ ಕರೆನ್ಸಿಗಳ ಬಳಕೆಗೆ ಆದ್ಯತೆ ನೀಡಿ. ಇದು ಕೂಡ ಒಂಟಿಯಾಗಿ ಪ್ರಯಾಣ ಮಾಡುವ ಹೆಣ್ಣುಮಕ್ಕಳಿಗೆ ಸುರಕ್ಷತೆಯ ಭಾಗ. 

ಸ್ಥಳೀಯ ಪಾವತಿ ಕ್ರಮಗಳನ್ನು ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ. ಹೆಚ್ಚು ಹೆಚ್ಚು ಕಾರ್ಡ್‌ ಬಳಸಿ. 

ನೀವೇ ಯಾವುದೇ ಪ್ರದೇಶಕ್ಕೆ ಹೋಗುವ ಮುನ್ನ ನೆಟ್‌ವರ್ಕ್‌ ಲಭ್ಯತೆ ಗಮನಿಸಿಕೊಳ್ಳುವುದು ಮುಖ್ಯ. ಜೊತೆಗೆ ಸದಾ ನಿಮ್ಮ ಮನೆಯವರು, ಆತ್ಮೀಯರ ಜೊತೆಗೆ ಸಂಪರ್ಕದಲ್ಲಿರಿ.  

ಬೇಬಿ ಬಂಪ್‌ ಫೋಟೋ ಶೇರ್‌ ಮಾಡಿದ ನಟಿ ಮಿಲನಾ ನಾಗರಾಜ್‌