ಹುಲಿಕುಣಿತದಿಂದ ಯಕ್ಷಗಾನದವರೆಗೆ ಉಡುಪಿಯ ಸಾಂಸ್ಕೃತಿಕ ವೈವಿಧ್ಯ ಕಂಡಿರಾ 

Wikipedia

By Reshma
Jan 10, 2024

Hindustan Times
Kannada

ಜನವರಿ 18 ರಂದು ಉಡುಪಿ ಪರ್ಯಾಯೋತ್ಸವ ನಡೆಯುತ್ತಿದ್ದು ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಪರ್ಯಾಯಕ್ಕೆ ಬರುವ ಮೊದಲು ಉಡುಪಿಯ ಸಂಸ್ಕೃತಿ, ಕಲೆಯ ಬಗ್ಗೆಯೂ ತಿಳಿಯಿರಿ.

Twitter

ಯಕ್ಷಗಾನ: ಕರಾವಳಿ ಗಂಡುಕಲೆ ಅಂತಲೇ ಕರೆಸಿಕೊಳ್ಳುವ ಯಕ್ಷಗಾನ ಉಡುಪಿ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಇದೊಂದು ಕಲಾಪ್ರಕಾರವೂ ಹೌದು. 

Facebook (ಧೀರಜ್ ಉಡುಪ ಉಪ್ಪಿನಕುದ್ರು)

ಭೂತಕೋಲ: ಕಾಂತಾರ ಸಿನಿಮಾ ಬಂದಾಗಿನಿಂದ ಪ್ರಪಂಚದಾದ್ಯಂತ ಖ್ಯಾತಿ ಪಡೆದ ಭೂತಕೂಲ ಉಡುಪಿಯ ಸಂಸ್ಕೃತಿಯ ಭಾಗ.  

Wikimedia commons

ಕರಂಗೋಲು ಕುಣಿತ: ಕರಂಗೋಲು ಕುಣಿತದಂತಹ ಅಪರೂಪದ ಕಲಾ ಸಂಸ್ಕೃತಿಯು ಬಹುತೇಕ ತೆರೆ ಮರೆಗೆ ಸರಿದಿದ್ದರೂ ಕೆಲವೊಂದು ಕಡೆ ಈಗಲೂ ಜೀವಂತವಾಗಿದೆ. 

Tulupedia

ಆಟಿ ಕೆಳಂಜ: ಇದು ಉಡುಪಿ ಹಾಗೂ ಮಂಗಳೂರಿನ ವಿಶೇಷ ಸಾಂಸ್ಕೃತಿಕ ಕಲಾ ಪ್ರಕಾರ. 

Twitter: Anoop Soorinje

ನಾಗರಾಧನೆ: ಕರಾವಳಿ ಭಾಗದಲ್ಲಿ ನಾಗದೇವರನ್ನು ವಿಶೇಷವಾಗಿ ಪ್ರಾರ್ಥಿಸುತ್ತಾರೆ. ಇಲ್ಲಿ ನಾಗರಾಧನೆ ಬಹಳ ವಿಶೇಷ. ನಾಗಮಂಡಲ ಪೂಜೆ ಇಲ್ಲಿನ ವಿಶೇಷ.

Karnataka Tourism

ಹೌಂದೇರಾಯನ ಓಲಗ: ಉಡುಪಿ ಹಾಗೂ ಕುಂದಾಪುರ ಭಾಗದಲ್ಲಿದ್ದ ಚಾಲ್ತಿಯಲ್ಲಿದ್ದ ಈ ಅಪರೂಪದ ಕಲಾಪ್ರಕಾರ ಈಗ ಬಹುತೇಕ ನಶಿಸಿದೆ. 

Facebook

ಕಂಬಳ: ಕರಾವಳಿಯ ಕಂಬಳ ಇಲ್ಲಿನ ಸಂಸ್ಕೃತಿ ಹಾಗೂ ಆಚರಣೆಯ ಭಾಗವಾಗಿದೆ. ಕೋಣಗಳ ಓಟವು ಕೇವಲ ಒಂದು ಕಲೆಯಷ್ಟೇ ಅಲ್ಲ, ಇದು ಧಾರ್ಮಿಕ ಆಚರಣೆಯೂ ಹೌದು. 

ಹುಲಿ ಕುಣಿತ: ಹುಲಿವೇಷ ಕುಣಿತ ಉಡುಪಿಯ ಟ್ರೇಡ್‌ಮಾರ್ಕ್‌ ಅಂತಲೇ ಹೇಳಬಹುದು. ಉಡುಪಿಯಲ್ಲಿ ಯಾವುದೇ ವಿಶೇಷ ಸಂದರ್ಭಗಳಲ್ಲೂ ಹುಲಿವೇಷ ಧರಿಸಿದವರು ಕುಣಿಯುವುದನ್ನು ಕಾಣಬಹುದು. ಪರ್ಯಾಯಕ್ಕೆ ಹೋದ್ರೆ ನೀವು ಒಂದೆರಡು ಸೆಪ್ಟ್‌ ಹಾಕೋದು ಮರಿಬೇಡಿ. 

ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು 

Canva