ವಿತ್ತ ಸಚಿವರ ಬಜೆಟ್ ಭಾಷಣದ ಬಳಿಕ ನೆನಪಿನಲ್ಲಿ ಉಳಿದ ಹೇಳಿಕೆಗಳು

ಕೇಂದ್ರ ಬಜೆಟ್‌

By Umesh Kumar S
Jan 28, 2025

Hindustan Times
Kannada

ನಮ್ಮ ದೇಶ ವಿಭಜನೆಯ ಆಘಾತದ ನೆರಳಿನಲ್ಲಿ ಮಂಡಿಸುತ್ತಿರುವ ಬಜೆಟ್ ಇದು. ಆದರೆ, ಇದು ದೇಶದ ಪುನರ್ನಿಮಾಣಕ್ಕೆ ಮತ್ತು ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುವುದಕ್ಕೆ ಮುಕ್ತ ಮತ್ತು ಸಾರ್ವಭೌಮ ಜನರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ.   | ಆರ್.ಕೆ.ಷಣ್ಮುಖಂಚೆಟ್ಟಿ  ( ಮೊದಲ ಕೇಂದ್ರ ಬಜೆಟ್ 1947 ನವೆಂಬರ್ 26)

ಕೇಂದ್ರ ಬಜೆಟ್‌ 1947

ನಾನು ಮುಂಬರುವ ಹಣಕಾಸು ವರ್ಷವನ್ನು ಒಂದು ನಿರ್ದಿಷ್ಟ ಮಟ್ಟದ ಆಶಾವಾದದೊಂದಿಗೆ ಎದುರುನೋಡುತ್ತೇನೆ. ಸರಿಯಾದ ನೀತಿಗಳನ್ನು ಅನುಸರಿಸಿದರೆ ಅದು ಪುನರುಜ್ಜೀವನದ ವರ್ಷವಾಗಬಹುದು ಎಂಬ ನಿರೀಕ್ಷೆಯೂ ಇದೆ | ಮೊರಾರ್ಜಿ ದೇಸಾಯಿ, (ಕೇಂದ್ರ ಬಜೆಟ್ 1967-68)

ಕೇಂದ್ರ ಬಜೆಟ್‌ 1967-68

ಯಾವುದಾದರೂ ಚಿಂತನೆಗೆ ಕಾಲಕೂಡಿ ಬಂದರೆ ಅದನ್ನು ತಡೆಯೋದಕ್ಕೆ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. | ಡಾ ಮನಮೋಹನ ಸಿಂಗ್,  (ಕೇಂದ್ರ ಬಜೆಟ್ 1991-92) 

ಕೇಂದ್ರ ಬಜೆಟ್‌ 1991-92

ಗಾಳಿಯಲ್ಲಿ ಗೋಪುರ ಕಟ್ಟುತ್ತೀರಾದರೆ, ಅದು ಕಳೆದುಹೋಗಬೇಕಾಗಿಲ್ಲ. ಅದಕ್ಕೆ ಬುನಾದಿ ಗಾಳಿಯಲ್ಲೇ ಕಟ್ಟಿಕೊಡಿ. ಆಗ ಅದು ಕಳೆದು ಹೋಗುವುದಿಲ್ಲ. ಹಾಗೆಯೇ, ಯುವಕರು ತಮ್ಮ ಕೋಟೆಗಳನ್ನು ನಿರ್ಮಿಸಬಹುದಾದ ಅಡಿಪಾಯವನ್ನು ಹಾಕುವುದು ನಮ್ಮ ಕರ್ತವ್ಯ. | ಪಿ ಚಿದಂಬರಂ, (ಕೇಂದ್ರ ಬಜೆಟ್ 2006-07)

ಕೇಂದ್ರ ಬಜೆಟ್‌ 2006-07

ಸ್ವಂತ ದೇಶದ ಆಗುಹೋಗುಗಳ ವಿಚಾರದಲ್ಲಿ ತೃಪ್ತಿಗೆ ಅವಕಾಶವೂ ಇಲ್ಲ, ಯಾವುದೇ ಕ್ಷಮೆಯೂ ಇಲ್ಲ ಎಂದು ನಾನು ನಂಬಿದ್ದರೂ, ಈ ಪ್ರಪಂಚದಲ್ಲಿ ನಾವು ನೆಲದ ವಾಸ್ತವವನ್ನು ನಿರ್ಲಕ್ಷಿಸಿ ಮುನ್ನಡೆದರೆ ದಾರಿ ತಪ್ಪುವುದು ಖಚಿತ. | ಪ್ರಣಬ್ ಮುಖರ್ಜಿ, (ಕೇಂದ್ರ ಬಜೆಟ್ 2012-13)

ಕೇಂದ್ರ ಬಜೆಟ್‌ 2012-13

ನಮ್ಮ ಸರ್ಕಾರವು 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ತತ್ತ್ವಕ್ಕೆ ಬದ್ಧವಾಗಿ ಕೆಲಸ ಮಾಡುತ್ತದೆ | ಅರುಣ್ ಜೇಟ್ಲಿ, (ಕೇಂದ್ರ ಬಜೆಟ್ - 2014-15) 

ಕೇಂದ್ರ ಬಜೆಟ್‌ 2014-15

ನಾವು 2022 ರ ವೇಳೆಗೆ ‘ಹೊಸ ಭಾರತ’ ವನ್ನು ಅರಿತುಕೊಳ್ಳುವತ್ತ ಸಾಗುತ್ತಿದ್ದೇವೆ, ನಾವು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಾಗ ಸ್ವಚ್ಛ ಮತ್ತು ಆರೋಗ್ಯ ಭಾರತವನ್ನು ಕಾಣುತ್ತೇವೆ. | ಪಿಯೂಷ್ ಗೋಯೆಲ್, (ಕೇಂದ್ರ ಬಜೆಟ್ 2019-20)

ಕೇಂದ್ರ ಬಜೆಟ್‌ 2019-20

ಭಾರತದ ಈ ಸಲದ ಬಜೆಟ್‌ನಲ್ಲಿ ಮಹತ್ವಾಕಾಂಕ್ಷೆಯ ಭಾರತ, ಆರ್ಥಿಕ ಅಭಿವೃದ್ಧಿ ಮತ್ತು ಕಾಳಜಿಯುಳ್ಳ ಸಮಾಜ ಎಂಬ ಮೂರು ಪ್ರಮುಖ ವಿಷಯಗಳು ಕೇಂದ್ರಬಿಂದುವಾಗಿರುತ್ತವೆ. | ನಿರ್ಮಲಾ ಸೀತಾರಾಮನ್,  (ಕೇಂದ್ರ ಬಜೆಟ್ 2019-20) 

ಕೇಂದ್ರ ಬಜೆಟ್‌ 2019-20

ಇದು ಅಮೃತ ಕಾಲದ ಮೊದಲ ಬಜೆಟ್.... ಅಮೃತ ಕಾಲಕ್ಕಾಗಿ ನಮ್ಮ ಗುರಿ ಸಾಧನೆಯು ತಂತ್ರಜ್ಞಾನ-ಚಾಲಿತ ಮತ್ತು ಜ್ಞಾನ ಆಧಾರಿತ ಆರ್ಥಿಕತೆಯು ಸಾರ್ವಜನಿಕ ಹಣಕಾಸು ಮತ್ತು ಬಲವಾದ ಹಣಕಾಸು ವಲಯವನ್ನು ಒಳಗೊಂಡಿದೆ. ಇದನ್ನು ಸಾಧಿಸಲು, ಸಬ್‌ ಕಾ ಸಾಥ್ ಎನ್ನುವ ಮಂತ್ರದೊಂದಿಗೆ ಜನರ ಸಹಭಾಗಿತ್ವ ಮುಖ್ಯ. | ನಿರ್ಮಲಾ ಸೀತಾರಾಮನ್,  (ಕೇಂದ್ರ ಬಜೆಟ್ 2023-24) 

ಕೇಂದ್ರ ಬಜೆಟ್‌ 2023-24

ಬಾಯಲ್ಲಿ ನೀರೂರುವ ಚಿಕನ್ ಪೆಪ್ಪರ್ ಫ್ರೈ ರೆಸಿಪಿ ಇಲ್ಲಿದೆ

Pinterest