ಹೊಸ ತೆರಿಗೆ ಪದ್ಧತಿ ಬಗ್ಗೆ ನೀವು ತಿಳಿದಿರಬೇಕಾದ ಅಂಶಗಳಿವು
PTI
By Prasanna Kumar P N Jan 30, 2025
Hindustan Times Kannada
ಹೊಸ ತೆರಿಗೆ ಪದ್ಧತಿಯನ್ನು 2020ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾಗಿತ್ತು.
PTI
ಭಾರತದಲ್ಲಿ ತೆರಿಗೆ ಪಾವತಿಸುವ ಪ್ರಕ್ರಿಯೆ ಸರಳಗೊಳಿಸಲು ಮತ್ತು ತೆರಿಗೆದಾರರನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ತೆರಿಗೆ ಪದ್ಧತಿ ಆರಂಭಿಸಲಾಗಿತ್ತು.
Pexel
ಹಳೆ ತೆರಿಗೆ ಪದ್ಧತಿಯಲ್ಲಿರುವ ಹಲವು ವಿನಾಯಿತಿ, ಕಡಿತಗಳು ಇದರಲ್ಲಿ ಇಲ್ಲವಾದರೂ ಹೊಸ ತೆರಿಗೆ ಪದ್ಧತಿಯಲ್ಲಿ ಪಾವತಿಸುವ ಆದಾಯ ತೆರಿಗೆಯ ಶೇಕಡವಾರು ಪ್ರಮಾಣ ಕಡಿಮೆ ಇರುತ್ತದೆ.
Pexel
ವಾರ್ಷಿಕ 9 ಲಕ್ಷದವರೆಗೆ ಗಳಿಸುವ ಮತ್ತು ತೆರಿಗೆ ವಿನಾಯಿತಿ ಪಡೆಯಲು ಬಯಸದವರಿಗೆ ಹೊಸ ವ್ಯವಸ್ಥೆಯು ಪ್ರಯೋಜನಕಾರಿಯಾಗಿದೆ.
PTI
2023-24ನೇ ಹಣಕಾಸು ವರ್ಷದಿಂದ ಹೊಸ ತೆರಿಗೆ ಪದ್ಧತಿಯನ್ನು ಡಿಫಾಲ್ಟ್ ಆಯ್ಕೆಯಾಗಿ ನೀಡಲಾಗಿದೆ. ಎಲ್ಲಾದರೂ ತೆರಿಗೆ ಪಾವತಿದಾರರು ಹಳೆಯ ಪದ್ಧತಿಯೇ ಬೇಕು ಎಂದರೆ ನಮೂನೆ 10 ಐಇಎ ಭರ್ತಿ ಮಾಡಿ ಆದಾಯ ತೆರಿಗೆ ಸಲ್ಲಿಸಬೇಕು.
Pexel
ಹೊಸ ತೆರಿಗೆ ಪದ್ಧತಿಯು ಎಲ್ಲಾ ವ್ಯಕ್ತಿಗಳು ಮತ್ತು HUF (ಹಿಂದೂ ಅವಿಭಜಿತ ಕುಟುಂಬ ಕಾಯ್ದೆ) ತೆರಿಗೆದಾರರಿಗೆ ಏಕರೂಪದ ತೆರಿಗೆ ದರ ಅನ್ವಯಿಸುತ್ತದೆ. ಹಳೆಯ ಪದ್ಧತಿಯಲ್ಲಿ ಅವರ ವಯಸ್ಸಿನ ಆಧಾರದ ಮೇಲೆ ವಿಭಿನ್ನ ತೆರಿಗೆ ದರಗಳನ್ನು ಹೊಂದಿತ್ತು.
Pexel
ಹೊಸ ತೆರಿಗೆ ಪದ್ಧತಿಯಲ್ಲಿ ಪ್ರಮಾಣಿತ ಕಡಿತದ ಜೊತೆಗೆ ರಜೆಯ ನಗದು ಪಾವತಿ, ಗ್ರಾಚ್ಯುಟಿ ಮತ್ತು ಉದ್ಯೋಗದಾತರ ಎನ್ಪಿಎಸ್ ಕೊಡುಗೆಯ ಮೇಲಿನ ವಿನಾಯಿತಿಯೂ ಲಭ್ಯವಿದೆ.