ಕೇಂದ್ರ ಬಜೆಟ್ 2025: ಹಿಂದಿನ ಬಜೆಟ್ ದಿನಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಟ್ಟ ಸೀರೆಗಳು
Photo Credits: PTI
By Reshma Jan 31, 2025
Hindustan Times Kannada
ನಾಳೆ ಅಂದರೆ ಫೆಬ್ರುವರಿ 1ಕ್ಕೆ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಇದು ನಿರ್ಮಲಾ ಅವರು ಮಂಡಿಸುತ್ತಿರುವ 8ನೇ ಬಜೆಟ್ ಆಗಿದೆ
Photo Credits: PTI
ಪ್ರತಿ ವರ್ಷವು ನಿರ್ಮಲಾ ಅವರು ಮಂಡಿಸುವ ಬಜೆಟ್ ಜೊತೆ ಅವರ ಸೀರೆಯು ಹೆಚ್ಚು ಗಮನ ಸೆಳೆಯುತ್ತದೆ. ಕಳೆದ 7 ಬಾರಿ ಭಾರತೀಯ ಕೈಮಗ್ಗದ ಸೀರೆಗಳನ್ನು ಧರಿಸಿ ಗಮನ ಸೆಳೆದಿದ್ದರು ಹಣಕಾಸು ಸಚಿವೆ
Photos Credits: HT File Photos
2024–25ರ ಬಜೆಟ್‌ನಲ್ಲಿ ನಿರ್ಮಲಾ ನೇರಳೆ ಅಂಚುಗಳಿಂದ ಅಲಂಕರಿಸಲ್ಪಟ್ಟ ಆಫ್-ವೈಟ್ ರೇಷ್ಮೆ ಸೀರೆಯನ್ನು ಉಟ್ಟಿದ್ದರು. ಅದಕ್ಕೆ ಹೊಂದಿಕೆಯಾಗುವ ನೇರಳೆ ರವಿಕೆ ಧರಿಸಿ ಸರಳವಾಗಿ ಕಾಣಿಸಿದ್ದರು
Photo Credits: PTI
2024ರ ಮಧ್ಯಂತರ ಬಜೆಟ್‌ನಲ್ಲಿ, ನಿರ್ಮಲಾ ಸೀತಾರಾಮನ್ ಅವರು ಪಶ್ಚಿಮ ಬಂಗಾಳದ ಕೈಮಗ್ಗ ಸೀರೆಯಾದ ಕಾಂತ ಕಸೂತಿಯಿಂದ ಅಲಂಕರಿಸಲ್ಪಟ್ಟ ನೀಲಿ ಟಸ್ಸಾರ್ ಸಿಲ್ಕ್ ಸೀರೆ ಧರಿಸಿದ್ದರು
Photo Credits: AFP
2023ರಲ್ಲಿ ರೋಮಾಂಚಕ ಕೆಂಪು ರೇಷ್ಮೆ ಸೀರೆಯನ್ನು ಧರಿಸಿದ್ದರು ನಿರ್ಮಲಾ. ಇದು ಕರ್ನಾಟಕದ ಧಾರವಾಡದಲ್ಲಿ ತಯಾರಾದ ಭಿನ್ನ ಕಸೂತಿ ಹೊಂದಿರುವ ಸೀರೆಯಾಗಿದೆ
Photo Credits: Reuters
2022 ರ ಬಜೆಟ್‌ನಲ್ಲಿ ಹಣಕಾಸು ಸಚಿವರು ಬೊಮ್ಕೈ ಸೀರೆಯನ್ನು ಧರಿಸುವ ಮೂಲಕ ಗಮನ ಸೆಳೆದಿದ್ದರು. ಬೊಮ್ಕೈ ಸೀರೆಗಳನ್ನು ಒಡಿಶಾದ ಗಂಜಾಂ ಜಿಲ್ಲೆಯ ಬೊಮ್ಕೈ ಗ್ರಾಮದಲ್ಲಿ ತಯಾರಿಸಲಾಗುತ್ತದೆ
Photo Credits: HT File Photo
2021 ರ ಬಜೆಟ್ ದಿನದಂದು ಇಕ್ಕಟ್ ಶೈಲಿಯ ಆಫ್-ವೈಟ್ ಪೋಚಂಪಲ್ಲಿ ರೇಷ್ಮೆ ಸೀರೆ ಧರಿಸಿದ್ದರು
Photo Credits: HT File Photo
2020ರ ಬಜೆಟ್ ಮಂಡನೆ ವೇಳೆ ನಿರ್ಮಲಾ ಅವರು ಹಳದಿ ಬಣ್ಣದ ರೇಷ್ಮೆ ಸೀರೆ ಧರಿಸಿದ್ದರು
Photo Credits: HT File Photo
2019ರಲ್ಲಿ ಮೊದಲ ಬಾರಿ ಬಜೆಟ್ ಮಂಡನೆ ಮಾಡಿದ್ದ ನಿರ್ಮಲಾ ಸೀತಾರಾಮನ್ ಗುಲಾಬಿ ಬಣ್ಣದ ಮಂಗಳಗಿರಿ ರೇಷ್ಮೆ ಸೀರೆ ಧರಿಸಿದ್ದರು