ಅಮೆರಿಕ ನೂತನ ಅಧ್ಯಕ್ಷ ಟ್ರಂಪ್​ಗೆ ಸಿಗುವ ವೇತನ, ಸೌಲಭ್ಯಗಳೇನು? 

By Prasanna Kumar P N
Jan 20, 2025

Hindustan Times
Kannada

ಅಮೆರಿಕ ನೂತನ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅವರು ಇಂದು (ಜನವರಿ 20) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಅಮೆರಿಕದ 47ನೇ ಅಧ್ಯಕ್ಷ. ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರಕ್ಕೇರಲಿದ್ದಾರೆ

2024ರ ನವೆಂಬರ್​​ನಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರೆಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ವಿರುದ್ಧ ರಿಪಬ್ಲಿಕ್‌ ಪಕ್ಷದ ಟ್ರಂಪ್ ಭರ್ಜರಿ ಗೆಲುವು ದಾಖಲಿಸಿದ್ದರು.

ಯುಎಸ್​ ಅಧ್ಯಕ್ಷರು ಸಹ ಸರ್ಕಾರಿ ಉದ್ಯೋಗಿ. ಇತರರಂತೆ ದುಡಿಯುವ ಸಾಮಾನ್ಯ ಜನರಂತೆಯೇ ವೇತನ ಪಡೆಯುತ್ತಾರೆ. ಹಾಗಿದ್ದರೆ ಯುಎಸ್ ಅಧ್ಯಕ್ಷರಿಗೆ ವೇತನ ಎಷ್ಟು? ಏನೆಲ್ಲಾ ಸೌಲಭ್ಯಗಳು ಅವರಿಗೆ ಸಿಗಲಿವೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ

ಅಮೆರಿಕ ಅಧ್ಯಕ್ಷರು ವರ್ಷಕ್ಕೆ 4 ಲಕ್ಷ ಡಾಲರ್​ ವೇತನ ಪಡೆಯುತ್ತಾರೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 3.46 ಕೋಟಿ. ಅಂದರೆ ತಿಂಗಳಿಗೆ ಸುಮಾರು 28.5 ಲಕ್ಷಕ್ಕೂ ಹೆಚ್ಚು.

ಅಲ್ಲದೆ, ಅಧ್ಯಕ್ಷರ ಪ್ರಯಾಣ ಭತ್ಯೆ 1 ಲಕ್ಷ ಡಾಲರ್​ ಅಂದರೆ ಸುಮಾರು 86.57 ಲಕ್ಷ ರೂಪಾಯಿ. ಮನರಂಜನಾ ಭತ್ಯೆ 19 ಸಾವಿರ ಡಾಲರ್ ಅಂದರೆ ಸುಮಾರು 16.4 ಲಕ್ಷ ರೂಪಾಯಿ.

ಅಲ್ಲದೆ, ಅಧ್ಯಕ್ಷರ ಪ್ರಯಾಣ ಭತ್ಯೆ 1 ಲಕ್ಷ ಡಾಲರ್​ ಅಂದರೆ ಸುಮಾರು 86.57 ಲಕ್ಷ ರೂಪಾಯಿ. ಮನರಂಜನಾ ಭತ್ಯೆ 19 ಸಾವಿರ ಡಾಲರ್ ಅಂದರೆ ಸುಮಾರು 16.4 ಲಕ್ಷ ರೂಪಾಯಿ.

ಅಧ್ಯಕ್ಷರ ವೈಯಕ್ತಿಕ-ಅಧಿಕೃತ ವೆಚ್ಚಗಳಿಗಾಗಿ 50 ಸಾವಿರ ಡಾಲರ್ ತೆರಿಗೆಯಲ್ಲದ ಭತ್ಯೆ ಪಡೆಯುತ್ತಾರೆ. ಅಂದರೆ ಸುಮಾರು 43.28 ಲಕ್ಷ.

ಅಧಿಕಾರ ವಹಿಸಿಕೊಂಡ ನಂತರ ಅಧ್ಯಕ್ಷರಿಗೆ ಶ್ವೇತಭವನವನ್ನು ಮರುಅಲಂಕರಣ ಮಾಡಲು 1 ಲಕ್ಷ ಡಾಲರ್ ಅಂದರೆ ಸುಮಾರು 86.57 ಲಕ್ಷ ರೂಪಾಯಿ ನೀಡಲಾಗುತ್ತದೆ.

ಅಧ್ಯಕ್ಷರು ಶ್ವೇತಭವನದಲ್ಲಿ ವಾಸಿಸಲಿದ್ದು, ಯಾವುದೇ ವೆಚ್ಚ ಇರುವುದಿಲ್ಲ. ಏರ್ ಫೋರ್ಸ್ ಒನ್, ಮೆರೈನ್ ಒನ್ ಮತ್ತು ಶಸ್ತ್ರಸಜ್ಜಿತ ಲಿಮೋಸಿನ್‌ಗಳ ಫ್ಲೀಟ್ ಸೇರಿದಂತೆ ಗುಣಮಟ್ಟದ ಸುರಕ್ಷಿತ ಸಾರಿಗೆ ವ್ಯವಸ್ಥೆ.

ಅಧ್ಯಕ್ಷರಿಗೆ ಪ್ರತ್ಯೇಕವಾಗಿ ಸೀಕ್ರೇಟ್ ಸೇವಾ ರಕ್ಷಣೆ ಮತ್ತು ಸಮಗ್ರ ವೈದ್ಯಕೀಯ ಆರೈಕೆ ಮಾಡುವ ತಂಡ ಇರಲಿದೆ.

ಅಧಿಕಾರ ತೊರೆದ ನಂತರವೂ ಮಾಜಿ ಯುಎಸ್​ ಅಧ್ಯಕ್ಷರು ವರ್ಷಕ್ಕೆ ಸುಮಾರು 230,000 ಡಾಲರ್ ಅಂದರೆ 1,99,12,595 ರೂ ಪಿಂಚಣಿ ಪಡೆಯಲಿದ್ದಾರೆ. ಜತೆಗೆ ಆರೋಗ್ಯ ಪ್ರಯೋಜನ, ಕಚೇರಿ ಸ್ಥಳ ಮತ್ತು ಸಿಬ್ಬಂದಿಗೆ ಧನಸಹಾಯ ಸೇರಿ ಹಲವು ಸವಲತ್ತು ಪಡೆಯಲಿದ್ದಾರೆ. ಅಧಿಕೃತ ಪ್ರಯಾಣಕ್ಕಾಗಿ ಭತ್ಯೆ ಸಹ ಪಡೆಯುತ್ತಾರೆ.

ಸುಮಾರು 1.6 ಮಿಲಿಯನ್ ಡಾಲರ್ ವೇತನ ಗಳಿಸುವ ಸಿಂಗಾಪುರದ ಪ್ರಧಾನ ಮಂತ್ರಿಯಂತಹ ವಿಶ್ವ ನಾಯಕರಿಗೆ ಹೋಲಿಸಿದರೆ, ಯುಎಸ್​ ಅಧ್ಯಕ್ಷರ ವೇತನ ಜಾಗತಿಕ ಮಟ್ಟದಲ್ಲಿ ಸಾಧಾರಣವಾಗಿದೆ.

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ