ವ್ಯಾಲೆಂಟೈನ್ಸ್ ಡೇ ದಿನ ಯಾವ ರಾಶಿಯವರು ಏನ್ ಮಾಡಿದ್ರೆ ಇಂಪ್ರೆಸ್ ಆಗ್ತಾರೆ ನೋಡಿ
By Reshma Feb 12, 2024
Hindustan Times Kannada
ಮೇಷ ರಾಶಿಯವರನ್ನು ಮೆಚ್ಚಿಸಲು ಹೊರಾಂಗಣ ಚಟುವಟಿಕೆಗೆ ಕರೆದುಕೊಂಡು ಹೋಗಬೇಕು. ಸ್ಕೈಡೈವಿಂಗ್, ಭಂಗಿಜಂಪ್‌ನಂತಹ ಸಾಹಸಮಯ ಕ್ರೀಡೆಗಳು ಇವರಿಗೆ ಹೆಚ್ಚು ಇಷ್ಟವಾಗುತ್ತದೆ.
ವೃಷಭ: ಈ ರಾಶಿಯವರನ್ನು ಇಂಪ್ರೆಸ್ ಮಾಡಲು ಚಾಕೊಲೇಟ್‌ಗಳು, ಹೂಗುಚ್ಛ ಅಥವಾ ಐಷಾರಾಮಿ ಉಡುಗೊರೆ ನೀಡಬೇಕಾಗುತ್ತದೆ.
ಮಿಥುನ: ಮಾತಿನ ಮೂಲಕವೇ ಇವರನ್ನು ಇಂಪ್ರೆಸ್ ಮಾಡಬಹುದು. ಆಸಕ್ತಿದಾಯಕ ಲೇಖನ ಅಥವಾ ಪುಸ್ತಕಗಳನ್ನು ನೀಡುವ ಮೂಲಕ ಇವರನ್ನು ಸೆಳೆಯಬಹುದು.
ಕಟಕ: ನೀವು ಅಡುಗೆ ಮಾಡಿ ಬಡಿಸುವ ಮೂಲಕ ಈ ರಾಶಿಯವರನ್ನು ಇಂಪ್ರೆಸ್ ಮಾಡಬಹುದು. ಆತ್ಮೀಯ ಹಾಗೂ ಭಾವನಾತ್ಮಕ ವಾತಾವರಣ ಸೃಷ್ಟಿಸುವುದರಿಂದಲೂ ಇವರು ಮೋಡಿಗೆ ಒಳಗಾಗುತ್ತಾರೆ.
ಸಿಂಹ: ಆಕರ್ಷಕ ಡೇಟ್ ನೈಟ್, ವಿಐಪಿ ಈವೆಂಟ್‌ಗೆ ಟಿಕೆಟ್ ಖರೀದಿಸುವುದು, ಹೃತ್ಪೂರ್ವಕ ವಂದನೆ ಸಲ್ಲಿಸುವುದು ಈ ಮೂಲಕ ಆ ರಾಶಿಯವರನ್ನು ಆಕರ್ಷಿಸಬಹುದು.
ಕನ್ಯಾ: ಪಿಕ್ನಿಕ್ ಕರೆದುಕೊಂಡು ಹೋಗುವುದು, ಮ್ಯೂಸಿಯಂ ಆರ್ಟ್ ಗ್ಯಾಲರಿಯಂತಹ ಸ್ಥಳಕ್ಕೆ ಕರೆದುಕೊಂಡು ಹೋಗುವ ಮೂಲಕ ಇವರನ್ನು ಇಂಪ್ರೆಸ್ ಮಾಡಬಹುದು.
ತುಲಾ ರಾಶಿ: ಸೊಗಸಾದ ರೆಸ್ಟೊರೆಂಟ್‌ನಲ್ಲಿ ಡಿನ್ನರ್ ಆಯೋಜಿಸುವ ಮೂಲಕ ಇವರನ್ನು ಸೆಳೆಯಬಹುದು. ಸಂಜೆಯ ರಂಗು ಹರಡಿಸುವ ಜಾಗದಲ್ಲಿ ಇವರೊಂದಿಗೆ ಸಮಯ ಕಳೆಯುವ ಮೂಲಕವೂ ಇವರನ್ನು ಸೆಳೆಯಬಹುದು.
ವೃಶ್ಚಿಕ: ಈ ರಾಶಿಯವರು ಖಾಸಗಿತನವನ್ನು ಇಷ್ಟಪಡುತ್ತಾರೆ. ಖಾಸಗಿ ಜಾಗದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜಿಸುವ ಮೂಲಕ ಇವರನ್ನು ಸೆಳೆಯಬಹುದು
ಧನು: ಪ್ರವಾಸ, ಹೊರಾಂಗಣ ಚಟುವಟಿಕೆ, ನೈಟ್ ಲಾಂಗ್ ರೈಡ್ ಹೋಗುವುದು ಇಂತಹ ಕ್ರಮಗಳಿಂದ ಇವರನ್ನು ಇಂಪ್ರೆಸ್ ಮಾಡಬಹುದು.
ಮಕರ: ಪ್ರಯೋಗಾತ್ಮಕ ಉಡುಗೊರೆಗಳನ್ನು ನೀಡುವುದು, ನಿಮ್ಮ ಗುರಿ ಹಾಗೂ ಆಕಾಂಕ್ಷೆಗಳನ್ನು ಇವರೊಂದಿಗೆ ಹಂಚಿಕೊಳ್ಳುವ ಮೂಲಕ ಇವರನ್ನು ಪ್ರೀತಿ ಮೂಡುವಂತೆ ಮಾಡಬಹುದು
ಕುಂಭರಾಶಿ: ಸಾಮಾಜಿಕ ಕಾರ್ಯಗಳಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ತಂತ್ರಜ್ಞಾನವನ್ನು ಅನ್ವೇಷಿಸುವುದು ಇಂತಹ ಮಾರ್ಗಗಳ ಮೂಲಕ ಕುಂಭರಾಶಿಯವರನ್ನು ಇಂಪ್ರೆಸ್ ಮಾಡಬಹುದು.
ಮೀನ: ಮೀನ ರಾಶಿಯವರು ಕಲ್ಪನಾಲೋಕದಲ್ಲಿ ತೇಲಾಡಲು ಇಷ್ಟಪಡುತ್ತಾರೆ. ಬೆಳದಿಂಗಳ ರಾತ್ರಿಯಲ್ಲಿ ಬೀಚ್‌ನಲ್ಲಿ ರೊಮ್ಯಾಂಟಿಕ್ ವಾಕ್ ಹೋಗುವುದು, ಭಾವನಾತ್ಮಕ ಮಾತು, ಸಂಗೀತ-ಸಿನಿಮಾದಂತಹ ಮನರಂಜನ ಸ್ಥಳಕ್ಕೆ ಕರೆದುಕೊಂಡು ಹೋಗುವ ಮೂಲಕ ಈ ರಾಶಿಯವರನ್ನು ಇಂಪ್ರೆಸ್ ಮಾಡಬಹುದು.
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI