ಪ್ರೇಮಿಗಳ ದಿನದ ಶುಭಾಶಯ

By Kiran Kumar I G
Feb 14, 2025

Hindustan Times
Kannada

ವಿವಿಧ ಸಂಸ್ಕೃತಿಗಳಲ್ಲಿ ಪ್ರೇಮಿಗಳ ದಿನವನ್ನು ಹೀಗೆ ಆಚರಿಸುತ್ತಾರೆ

PEXELS

ಪ್ರೇಮಿಗಳ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ, ಆದರೆ ವಿಭಿನ್ನ ಸಂಸ್ಕೃತಿಗಳ ವಿಶಿಷ್ಟ ಸಂಪ್ರದಾಯಗಳು ಈ ದಿನವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. 

PEXELS

ಜಗತ್ತಿನಾದ್ಯಂತ ಇರುವ ರೊಮ್ಯಾಂಟಿಕ್ ವ್ಯಾಲೆಂಟೈನ್ಸ್ ಸಂಪ್ರದಾಯಗಳು ಇಲ್ಲಿವೆ

PEXELS

ಯುನೈಟೆಡ್ ಸ್ಟೇಟ್ಸ್

ಪ್ರೇಮಿಗಳ ದಿನದಂದು ಅಮೆರಿಕನ್ನರು ಕ್ಯಾಂಡಿ, ಕಾರ್ಡ್ಸ್, ಚಾಕೊಲೇಟ್, ಹೂವು ಮತ್ತು ಆಭರಣಗಳನ್ನು ಉಡುಗೊರೆ ನೀಡುವ ಮೂಲಕ ಆಚರಿಸುತ್ತಾರೆ. 

PEXELS

ದಕ್ಷಿಣ ಕೊರಿಯಾ ಮತ್ತು ಜಪಾನ್

ಪ್ರೀತಿ ಮತ್ತು ಮೆಚ್ಚುಗೆಯ ಸಂಕೇತವಾಗಿ ಮಹಿಳೆಯರು ತಮ್ಮ ಪುರುಷ ಸಂಗಾತಿ, ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳಿಗೆ ಚಾಕೊಲೇಟ್ ನೀಡುತ್ತಾರೆ.

PEXELS

ಇಂಗ್ಲೆಂಡ್

ದಂಪತಿ ತಮ್ಮ ಪ್ರೀತಿಯನ್ನು ಆಚರಿಸಲು ಹೂವು, ಚಾಕೊಲೇಟ್ ಮತ್ತು ಆಭರಣಗಳಂತಹ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸಂಜೆ, ವಿಶೇಷ ಭೋಜನ ಮತ್ತು ಕ್ಯಾಂಡಲ್ ಲೈಟ್ ಡಿನ್ನರ್‌ನಲ್ಲಿ ಪಾಲ್ಗೊಳ್ಳುತ್ತಾರೆ.

PEXELS

ಫಿನ್‌ಲ್ಯಾಂಡ್

ಫಿನ್‌ಲ್ಯಾಂಡ್‌ನಲ್ಲಿ ವ್ಯಾಲೆಂಟೈನ್ಸ್ ಡೇ ಎಂದರೆ ಪ್ರಣಯಕ್ಕಿಂತ ಹೆಚ್ಚಾಗಿ ಸ್ನೇಹವನ್ನು ಆಚರಿಸುವುದಾಗಿದೆ. ಈ ಸಂದರ್ಭದಲ್ಲಿ ಸ್ನೇಹಿತರು ಪಿಂಕ್ ಗುಲಾಬಿ, ಉಡುಗೊರೆ, ಕಾರ್ಡ್ ಮತ್ತು ಸಿಹಿ ತಿನಿಸು ವಿನಿಮಯ ಮಾಡಿಕೊಳ್ಳುತ್ತಾರೆ.

PEXELS

ಪೆರು

ಪೆರುವಿಯನ್ನರು ಫೆಬ್ರವರಿ 14 ರಂದು ರಜಾದಿನವನ್ನು ಆನಂದಿಸುತ್ತಾರೆ. ಸಾಂಪ್ರದಾಯಿಕ ಗುಲಾಬಿ ಬದಲು, ದೇಶದ ಸ್ಥಳೀಯ ಹೂವು ಆರ್ಕಿಡ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸಾಮೂಹಿಕ ವಿವಾಹ ಪ್ರೇಮಿಗಳ ದಿನದಂದು ಅನುಸರಿಸುವ ಜನಪ್ರಿಯ ಸಂಪ್ರದಾಯವಾಗಿದೆ.

PEXELS

ಬ್ರೆಜಿಲ್

ಬ್ರೆಜಿಲಿಯನ್ನರು ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸುವುದಿಲ್ಲ, ಬದಲಿಗೆ ಜೂನ್ 12 ರಂದು ಸೇಂಟ್ ಆಂಥೋನಿಯ ದಿನವನ್ನು ಆಚರಿಸುತ್ತಾರೆ.

PEXELS

IPL 2025: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ