ಸ್ನಾನ ಮಾಡುವಾಗ ಚಪ್ಪಲಿ ಧರಿಸಬಹುದೇ? 

By Rakshitha Sowmya
Apr 28, 2024

Hindustan Times
Kannada

ನಮ್ಮ ದೈನಂದಿನ ಕೆಲಸಗಳಲ್ಲಿ ನಾವು ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಿದರೆ ನಮಗೆ ಶುಭವಾಗುತ್ತದೆ

ಅದೇ ರೀತಿ ಸ್ನಾನ ಮಾಡುವಾಗ ಚಪ್ಪಲಿ ಧರಿಸಬೇಕೇ? ಬೇಡವೇ ಎನ್ನುವುದಕ್ಕೆ ಕೂಡಾ ವಾಸ್ತು ನಿಯಮಗಳಿವೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸ್ನಾನ ಮಾಡುವಾಗ ಚಪ್ಪಲಿ ಧರಿಸಬಾರದು

ಸ್ನಾನ ಮಾಡುವಾಗ ನಮ್ಮ ದೇಹದಲ್ಲಿರುವ ನಕಾರಾತ್ಮಕ ಶಕ್ತಿಯು ಸ್ನಾನದ ನೀರಿನ ಮೂಲಕ ಹೊರ ಬರುತ್ತದೆ

ಆದರೆ ಆ ಸಮಯದಲ್ಲಿ ನಾವು ಚಪ್ಪಲಿ ಧರಿಸಿದ್ದರೆ ನಕಾರಾತ್ಮಕ ಶಕ್ತಿಯ ಹರಿವು ಹಾಗೇ ನಿಲ್ಲುತ್ತದೆ

ಹೀಗೆ ಚಪ್ಪಲಿ ಧರಿಸಿದರೆ ನಕಾರಾತ್ಮಕ ಶಕ್ತಿ ದೇಹದಲ್ಲೇ ಉಳಿಯುತ್ತದೆ, ಇದರಿಂದ ಮನಸ್ಸು, ದೇಹ ಎರಡೂ ಶುದ್ಧವಾಗುವುದಿಲ್ಲ

ಬರಿಗಾಲಿನಲ್ಲಿ ಸ್ನಾನ ಮಾಡಿದರೆ ಭೂಮಿಯಿಂದ ದೈವಿಕ ಶಕ್ತಿಯನ್ನು ಪಡೆಯುತ್ತೇವೆ, ದೈಹಿಕ ಕಾಯಿಲೆಗಳಿಂದ ಮುಕ್ತಿ ಹೊಂದುತ್ತೇವೆ

ಹಾಗೇ ಪಾದರಕ್ಷೆಗಳು ಶನಿ ಗ್ರಹಕ್ಕೆ ಸಂಬಂಧಿಸಿದ್ದಾದ್ದರಿಂದ ಸ್ನಾನ ಮಾಡುವಾಗ ಅವುಗಳನ್ನು ಹಾಕಿಕೊಳ್ಳುವುದು ಸರಿಯಲ್ಲ

ಚಪ್ಪಲಿ ಧರಿಸಿ ಸ್ನಾನ ಮಾಡುವುದರಿಂದ ಜಾತಕದಲ್ಲಿ ಶನಿಯ ಸ್ಥಾನ ದುರ್ಬಲವಾಗುತ್ತದೆ ಎಂದು ನಂಬಲಾಗಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಹಿಂದೂ ಧರ್ಮದಲ್ಲಿ ಸಂಖ್ಯೆ 4ರ ವೈಶಿಷ್ಟ್ಯಗಳಿವು