ಮತ್ತೊಬ್ಬರಿಂದ ಪಡೆದು ತರುವ ಈ ವಸ್ತುಗಳಿಂದ ನಿಮಗೆ ಸಮಸ್ಯೆ ಹೆಚ್ಚಬಹುದು
By Rakshitha Sowmya Dec 28, 2024
Hindustan Times Kannada
ನೆರೆಹೊರೆಯವರೊಂದಿಗೆ ಅನ್ಯೋನ್ಯವಾಗಿರುವಾಗ ಅವರ ಬಳಿ ನಾವು, ನಮ್ಮ ಬಳಿ ಅವರು ಕೆಲವೊಂದು ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವುದು ಸಹಜ.
ವಾಸ್ತು, ಜ್ಯೋತಿಷ್ಯದ ಪ್ರಕಾರ ಮತ್ತೊಬ್ಬರ ಮನೆಯಿಂದ ಈ ವಸ್ತುಗಳನ್ನು ತರುವುದನ್ನು ತಪ್ಪಿಸಿ
ವಾಸ್ತು ಪ್ರಕಾರ ವಸ್ತುಗಳ ಮಾಲೀಕತ್ವ ಬದಲಾದಾಗ ಅದರ ಶಕ್ತಿಯೂ ಬದಲಾಗುತ್ತದೆ
ಆದ್ದರಿಂದ ನಕಾರಾತ್ಮಕ ಪ್ರಭಾವ ಹೊಂದಿರುವ ಕೆಲವೊಂದು ವಸ್ತುಗಳನ್ನು ಮನೆಗೆ ತರಬಾರದು
ಮತ್ತೊಬ್ಬರ ಮನೆಯಿಂದ ಪೀಠೋಪಕರಣಗಳನ್ನು ನಿಮ್ಮ ಮನೆಗೆ ತರಬಾರದು
ಹಳೆಯ ಪೀಠೋಪಕರಣಗಳನ್ನು ನಿಮ್ಮ ಮನೆಗೆ ತರುವುದರಿಂದ ಸಮಸ್ಯೆ ಉಂಟಾಗಬಹುದು
ಮತ್ತೊಬ್ಬರ ಚಪ್ಪಲಿಗಳನ್ನು ನೀವು ಧರಿಸಬಾರದು, ಅದನ್ನು ನಿಮ್ಮ ಮನೆಗೆ ತರಲೂಬಾರದು
ನೀವು ಇತರರ ಚಪ್ಪಲಿ, ಶೂಗಳನ್ನು ಧರಿಸಿದಾಗ ನಿಮ್ಮ ದೇಹದೊಳಗೆ ನಕಾರಾತ್ಮಕತೆ ಪ್ರವೇಶಿಸುವ ಸಾಧ್ಯತೆ ಇದೆ
ಮತ್ತೊಬ್ಬರ ಮನೆಯಿಂದ ನೀವು ಕೊಡೆಯನ್ನೂ ತರಬಾರದು , ಹೀಗೆ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯಾಗುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?