ಕೀಲಿ ಕೈಗಳನ್ನು ಇಡಲು ಕೂಡಾ ಇದೆ ವಾಸ್ತು ನಿಯಮ

By Rakshitha Sowmya
Dec 09, 2024

Hindustan Times
Kannada

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ನಾವು ಇಡುವ ವಸ್ತುಗಳು ಜೀವನದ ಮೇಲೆ ಪರಿಣಾಮ ಬೀರುತ್ತದೆ

ವಾಸ್ತುಪ್ರಕಾರ ಮನೆ, ಲಾಕರ್‌, ಕಾರ್‌ ಅಥವಾ ಇನ್ನಾವುದೇ ಕೀಲಿಕೈಗಳನ್ನು ತಪ್ಪಾದ ಸ್ಥಳದಲ್ಲಿ ಇಡುವುದು ಸಮಸ್ಯೆಗಳಿಗೆ ಕಾರಣವಾಗಬಹುದು

ಕೀಲಿಕೈಗಳನ್ನು ಎಲ್ಲಿ ಇಡಬೇಕು, ಎಲ್ಲಿ ಇಡಬಾರದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ

ವಾಸ್ತು ಪ್ರಕಾರ ಕೀಲಿ ಕೈಗಳನ್ನು ಯಾರಿಗೂ ಸಿಗಬಾರದು ಎಂಬ ಕಾರಣಕ್ಕೆ ಪೂಜಾ ಸ್ಥಳದಲ್ಲಿ ಇಡಬಾರದು

ಕೀಲಿಗಳನ್ನು ಯಾವಾಗ ಬೇಕು ಆಗ ಬಳಸುತ್ತೇವೆ, ಅದನ್ನು ಎಂದಿಗೂ ಸ್ವಚ್ಛಗೊಳಿಸುವುದಿಲ್ಲ, ಆದ್ದರಿಂದ ದೇವರಕೋಣೆಯಲ್ಲಿ ಅದನ್ನ ಇಡುವುದು ತಪ್ಪು

ಅಡುಗೆ ಮನೆಯಲ್ಲಿ ಕೂಡಾ ಕೀಲಿ ಕೈಗಳನ್ನು ಇಡುವುದುನ್ನು ತಪ್ಪಿಸಿ

ಮನೆ, ಕಾರು ಅಥವಾ ಅಂಗಡಿಯ ಕೀಲಿ ಕೈಗಳನ್ನು ಪ್ರತಿದಿನ ಬಳಸಲಾಗುತ್ತದೆ, ಆದ್ದರಿಂದ ಇದನ್ನು ವಾಯವ್ಯ ದಿಕ್ಕಿನಲ್ಲಿ ಇಡುವುದು ಸೂಕ್ತ

ತಿಜೋರಿ ಕೀಯನ್ನು ನೈರುತ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು

ಯಾವುದೇ ಕೀಗಳನ್ನು ಮನೆಯ ಹಜಾರದಲ್ಲಿ ಇಡಬಹುದು, ಅದರಲ್ಲೂ ಪಶ್ಚಿಮ ದಿಕ್ಕಿನಲ್ಲಿ ಕೀಲಿಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?